ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಮ್ಮತದ ಅಭ್ಯರ್ಥಿ ನಿರ್ಧಾರ ಕೈಗೊಳ್ಳಲು ವಿಫಲ

Last Updated 17 ಏಪ್ರಿಲ್ 2013, 10:52 IST
ಅಕ್ಷರ ಗಾತ್ರ

ಗದಗ: ಗದಗ ಮತಕ್ಷೇತ್ರದಲ್ಲಿ ಕಾಂಗ್ರೆಸ್ ವಿರುದ್ಧ ಒಮ್ಮತದ ಅಭ್ಯರ್ಥಿ ಕಣಕ್ಕಿಳಿಸಲು ಕರೆದಿದ್ದ ಸಭೆಯಲ್ಲಿ ಸೂಕ್ತ ನಿರ್ಧಾರಕ್ಕೆ ಕೈಗೊಳ್ಳಲು ಸಾಧ್ಯವಾಗಲಿಲ್ಲ.

ಕಾಂಗ್ರೆಸ್ ಪಕ್ಷವನ್ನು ಸೋಲಿಸಬೇಕೆಂದು ಕಾಂಗ್ರೆಸ್ಸೇತರ ಪಕ್ಷಗಳು ಒಂದಾಗಿ ನಗರದ ಲಯನ್ಸ್ ಸಂಸ್ಥೆಯಲ್ಲಿ ಮಂಗಳವಾರ ಸಂಜೆ ನಡೆದ ಸಮಾನ ಮನಸ್ಕರ ಸಭೆಯಲ್ಲಿ  ಬಿಜೆಪಿ, ಬಿಎಸ್‌ಆರ್ ಕಾಂಗ್ರೆಸ್ ಮತ್ತು ಕೆಜೆಪಿ ಪಕ್ಷಗಳ ಕಾರ್ಯಕರ್ತರು ಭಾಗವಹಿಸಿದ್ದರು.

ಒಂದು ಗಂಟೆಗೂ ಕಾಲ ಹೆಚ್ಚು ಕಾಲ ನಡೆದ ಸಭೆಯಲ್ಲಿ ಯಾರನ್ನು ಮತ್ತು ಯಾವ ಪಕ್ಷದವರನ್ನು ಸರ್ವ ಸಮ್ಮತ ಅಭ್ಯರ್ಥಿಯಾಗಿ ಕಣಕ್ಕಿಳಿಸಬೇಕು ಎಂಬ ತೀರ್ಮಾನ ಕೈಗೊಳ್ಳಲು ಆಗಲಿಲ್ಲ. ಒಬ್ಬೊಬ್ಬರು ಒಂದೊಂದು ರೀತಿಯ ಸಲಹೆ ನೀಡಿದರು.

ಸಭೆ ಆರಂಭದಲ್ಲಿ ಮಾತನಾಡಿದ ಅರವಿಂದ ಹುಲ್ಲೂರು, `ಕಾಂಗ್ರೆಸ್ ಪಕ್ಷದವರೇ ಹಲವು ವರ್ಷ ಅಧಿಕಾರದಲ್ಲಿದ್ದರೂ ಅಭಿವೃದ್ಧಿಯಲ್ಲಿ ಜಿಲ್ಲೆ ಹಿಂದುಳಿದಿದೆ. ಕೆ.ಎಚ್.ಪಾಟೀಲ, ಡಿ.ಆರ್.ಪಾಟೀಲ ಅವರು ನಾಲ್ಕು ದಶಕಗಳ ಕಾಲ ಕ್ಷೇತ್ರ ಪ್ರತಿನಿಧಿಸಿದರು ಹೇಳಿಕೊಳ್ಳುವಂತಹ ಅಭಿವೃದ್ಧಿಯಾಗಿಲ್ಲ. ಆದ್ದರಿಂದ ಒಮ್ಮತ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಮೂಲಕ ಗದಗ-ಬೆಟಗೇರಿ ರಾಜ್ಯಕ್ಕೆ ಮಾದರಿಯಾಗಬೇಕು' ಎಂದರು ಹೇಳಿದರು.

`ಜಿಲ್ಲೆಯಾಗಿ ಹದಿನೈದು ವರ್ಷ ಆಗಿದೆ. ಅಭಿವೃದ್ಧಿ ಮಾತ್ರ ಶೂನ್ಯ. ಗದುಗಿಗೆ ತುಂಗಭದ್ರ ನೀರು ತರುತ್ತೇವೆ ಎಂದು ಹೇಳಿದರು. ಅದು ಕಾರ್ಯಗತವಾಗಲಿಲ್ಲ. ಎಲ್ಲ ಯೋಜನೆಗಳು ಹುಲಕೋಟಿಗೆ ಸೀಮಿತವಾಗಿವೆ. ನೀರು, ರಸ್ತೆ ಸೇರಿದಂತೆ ಮೂಲ ಸೌಕರ್ಯ ಮರೀಚಿಕೆಯಾಗಿದೆ.  ಒಮ್ಮತದ ಅಭ್ಯರ್ಥಿ ನಿಲ್ಲಿಸುವುದೇ ಸೂಕ್ತ. ನಗರಸಭೆ ಸದಸ್ಯರು ಹಾಗೂ ಚುನಾವಣೆಯಲ್ಲಿ ಪರಾಭವಗೊಂಡ ಅಭ್ಯರ್ಥಿಗಳನ್ನು ಒಂದೆಡೆ ಸೇರಿಸಿ ಚರ್ಚೆ ನಡೆಸಬೇಕು. ಸಮಯ ಬಹಳ ಕಡಿಮೆ ಇರುವುದರಿಂದ ಕೂಡಲೇ ಈ ಕೆಲಸವಾಗಬೇಕು' ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖಂಡರು, ನಾಲ್ಕು ತಂಡಗಳನ್ನು ರಚಿಸಿ ಎಲ್ಲ ಪಕ್ಷದ ಜಿಲ್ಲಾಧ್ಯಕ್ಷರು ಹಾಗೂ ಅಭ್ಯರ್ಥಿ ಗಳನ್ನು ಭೇಟಿ ಮಾಡಿ ಅವರ ಅಭಿಪ್ರಾಯ ಪಡೆಯಲಾಗುವುದು. ಒಂದು ವೇಳೆ ಒಮ್ಮತದ ಅಭ್ಯರ್ಥಿ ಕಣಕ್ಕಿಳಿಸಲು ಒಪ್ಪಿಕೊಳ್ಳದಿದ್ದರೆ ಸಮಾನ ಮನಸ್ಕರಲ್ಲಿಯೇ ಒಬ್ಬರನ್ನು ಪಕ್ಷೇತರರನ್ನಾಗಿ ಕಣಕ್ಕಿಳಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು. ಈ ಬಗ್ಗೆ ಮಾಜಿ ಶಾಸಕ ಸಿ.ಎಸ್.ಮುತ್ತಿನಪೆಂಡಿಮಠ ಅವರ ಮಾರ್ಗದರ್ಶನ ಪಡೆಯಲಾಗುವುದು' ಎಂದು ತಿಳಿಸಿದರು.

ಸಭೆಯಲ್ಲಿ ಮುಖಂಡರಾದ ಚಂದ್ರು ತಡಸದ, ಶ್ರೀನಿವಾಸ ಹುಬ್ಬಳ್ಳಿ, ನಾಗಲಿಂಗ ಐಲಿ, ಜಗನ್ನಾಥಸಾ ಭಾಂಡಗೆ, ಮಂಜು ಹೇಮಣ್ಣ ಮುಳಗುಂದ, ವಿ.ಕೆ.ಗುರಮಠ, ಪೂಜಾ ಬೇವೂರ, ಸಂತೋಷ ಮೇಲಗೇರಿ, ದಾವಲ್ ಮುಳಗುಂದ, ಪರ್ವತಗೌಡ ಹಾಗೂ ಇತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT