ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಲಿಂಪಿಕ್ಸ್‌ಗೆ ಪೂನಿಯಾ ಅರ್ಹತೆ

Last Updated 15 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ನವದೆಹಲಿ ಕಾಮನ್‌ವೆಲ್ತ್  ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದ ಡಿಸ್ಕಸ್ ಥ್ರೋ ಸ್ಪರ್ಧಿ ಕೃಷ್ಣಾ ಪೂನಿಯಾ ಲಂಡನ್‌ನಲ್ಲಿ ನಡೆಯ ಲಿರುವ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದುಕೊಂಡಿದ್ದಾರೆ.

ಅಮೆರಿಕದ ಪೋರ್ಟ್‌ಲ್ಯಾಂಡ್‌ನಲ್ಲಿ ಶನಿವಾರ ನಡೆದ ಮಹಿಳೆಯರ ಡಿಸ್ಕಸ್ ಥ್ರೋ ಸ್ಪರ್ಧೆಯಲ್ಲಿ ಚಿನ್ನದ ಪದಕ ಜಯಿಸುವ ಮೂಲಕ ಭಾರತದ ಅಥ್ಲೀಟ್ ಈ ಸಾಧನೆ ಮಾಡಿದರು. ಪೂನಿಯಾ ಒಟ್ಟು 61.12 ಮೀಟರ್ ದೂರ ಎಸೆದರು. ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು 59.50ಮೀ. ದೂರ ಎಸೆಯುವುದು ಅಗತ್ಯವಿತ್ತು.

ಪೂನಿಯಾ ಅವರ ಶ್ರೇಷ್ಠ ಸಾಧನೆ ಇದಾಗಿದೆ. ಒಲಿಂಪಿಕ್ಸ್ ಆರಂಭಕ್ಕೆ ಇನ್ನೂ ಕೆಲ ತಿಂಗಳುಗಳು ಮಾತ್ರ ಬಾಕಿ ಇರುವುದರಿಂದ ಈ ಸಾಧನೆ ಮೂಡಿಬಂದಿರುವುದು ಒಲಿಂಪಿಕ್ಸ್‌ನಲ್ಲಿಯೂ ಪದಕ ಗೆಲ್ಲುವ ವಿಶ್ವಾಸ ಮೂಡಿಸಿದೆ ಎಂದು ಪೂನಿಯಾ ಹೇಳಿದ್ದಾರೆ. ಕಾಮನ್‌ವೆಲ್ತ್ ಕ್ರೀಡಾಕೂಟದ ನಂತರ ಪೂನಿಯಾ ಮೊಣಕಾಲಿನ ನೋವಿನಿಂದ ಬಳಲುತ್ತಿದ್ದರು. ಕೊಂಚ ಚೇತರಿಸಿಕೊಂಡಿರುವ ಈಗ ಅವರಿಂದ ಉತ್ತಮ ಸಾಧನೆ ಮೂಡಿಬಂದಿದೆ.

ಪೋರ್ಟ್‌ಲ್ಯಾಂಡ್‌ನಲ್ಲಿ ಇತ್ತೀಚಿಗೆ ನಡೆದ `ಹಾರ್ವೆಸ್ಟ್ ಥ್ರೋ~ ಕ್ರೀಡಾಕೂಟದಲ್ಲಿ ಪೂನಿಯಾ ಚಿನ್ನದ ಪದಕ ಜಯಿಸಿದ್ದರು. ಈ ಸ್ಪರ್ಧೆಯಲ್ಲಿ 59.39ಮೀ. ದೂರ ಎಸೆದಿದ್ದರು. ಆದರೆ ಒಲಿಂ  ಪಿಕ್ಸ್‌ಗೆ ಅರ್ಹತೆ ಪಡೆಯಲು ಸಾಧ್ಯವಾಗಿರಲಿಲ್ಲ. ನವೆಂಬರ್ ಮೊದಲ ವಾರದಲ್ಲಿ ಅವರು ಭಾರತಕ್ಕೆ ಮರಳಿಲಿದ್ದಾರೆ.

ಕಳೆದ ಜುಲೈ ತಿಂಗಳಿನಿಂದ ಕಾನ್ಕಾರ್ಡಿಯಾ ವಿಶ್ವವಿದ್ಯಾಲಯದಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಮಾಜಿ ಒಲಿಂಪಿಯನ್ ಮ್ಯಾಕ್ ವಿಲ್ಕಿನ್ಸ್ ಅವರು ಭಾರತದ ಅಥ್ಲೀಟ್‌ಗೆ ತರಬೇತಿ ನೀಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT