ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳ ಮೀಸಲಾತಿಗೆ ಮಾದಿಗ ದಂಡೋರ ಆಗ್ರಹ

Last Updated 10 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಮುಳಬಾಗಲು: ಮಾದಿಗ ಜನಾಂಗದ ಪ್ರಗತಿ ಇನ್ನೂ ಕನಸಾಗಿದೆ. ಎಲ್ಲ ಕ್ಷೇತ್ರಗಳಲ್ಲಿಯೂ ಈ ಸಮುದಾಯಕ್ಕೆ ಒಳ ಮೀಸಲಾತಿ ಅಗತ್ಯವಿದೆ ಎಂದು ಕರ್ನಾಟಕ ಮಾದಿಗ ದಂಡೋರ ರಾಜ್ಯ ಘಟಕದ ಅಧ್ಯಕ್ಷ ಎಂ.ಶಂಕರಪ್ಪ ತಿಳಿಸಿದ್ದಾರೆ.

ಶ್ರೀ ರಾಮಲಿಂಗೇಶ್ವರ ಸ್ವಾಮಿ ಬ್ರಹ್ಮ ರಥೋತ್ಸವ ಪ್ರಯುಕ್ತ ಆವಣಿ ಬೆಟ್ಟದಲ್ಲಿ ಫೆ. 15ರಂದು ನಡೆಯಲಿರುವ ಆದಿಜಾಂಬವ ಪೂಜೆ ಹಿನ್ನೆಲೆಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಜನಾಂಗದವರು ಮೀಸಲಾತಿ ಸರಿಯಾಗಿ ಬಳಕೆ ಮಾಡಿಕೊಳ್ಳದ ಕಾರಣ ಬೇರೆ ಜನಾಂಗಗಳಿಗೆ ಸೌಲಭ್ಯಗಳು ಹೋಗುತ್ತವೆ ಎಂದು ವಿಷಾದಿಸಿದರು.

ರಾಜ್ಯ ಸಂಘಟನಾ ಕಾರ್ಯದರ್ಶಿ ಸಾಹುಕಾರ್ ಶಂಕರಪ್ಪ, ಪುರಸಭಾ ಸದಸ್ಯ ಎಂ.ಎಸ್.ನಾರಾಯಣಸ್ವಾಮಿ, ಪದಾಧಿಕಾರಿಗಳಾದ ಹೂವಳ್ಳಿ ಕೃಷ್ಣಪ್ಪ, ಹಾರೋಹಳ್ಳಿ ಎಚ್.ವೆಂಕಟೇಶ್, ಮುಳ್ಳಳ್ಳಿ ವೆಂಕಟಸ್ವಾಮಿ, ಕೃಷ್ಣಪ್ಪ, ಶಿವಣ್ಣ, ನರಸಿಂಹಮೂರ್ತಿ, ಎಂ.ಆರ್.ನಾರಾಯಣಸ್ವಾಮಿ, ರಾಮಮೂರ್ತಿ, ನಾರಾಯಣಸ್ವಾಮಿ, ಬಿ.ಆಂಜನೇಯಲು, ವಿ.ರಮೇಶ್, ರಾಮಕೃಷ್ಣಪ್ಪ, ವೆಂಕಟಪ್ಪ, ಸಂದೀಪ್, ಮಂಚಿಗಾನಹಳ್ಳಿ ಕೃಷ್ಣಪ್ಪ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT