ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳಪಂಗಡಗಳ ಪ್ರಸ್ತಾಪ ಬೇಡ

ಒಕ್ಕಲಿಗ ಮುಖಂಡರಿಗೆ ನಿರ್ಮಲಾನಂದನಾಥ ಸ್ವಾಮೀಜಿ ಸಲಹೆ
Last Updated 14 ಡಿಸೆಂಬರ್ 2013, 8:11 IST
ಅಕ್ಷರ ಗಾತ್ರ

ದೇವನಹಳ್ಳಿ: ಒಕ್ಕಲಿಗರ ಸಂಘದ ಚುನಾವಣೆಯ ನೆಪದಲ್ಲಿ ಸಮುದಾಯದ ಮುಖಂಡರು ಒಳಪಂಗಡಗಳನ್ನು ಮುಂದು ಮಾಡಬಾರದು. ಅದು ನಮ್ಮ ಸಂಸ್ಕಾರವಲ್ಲ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ  ನಿರ್ಮಲಾನಂದ ನಾಥ ಸ್ವಾಮೀಜಿ ತಿಳಿಸಿದರು. ಪಟ್ಟಣದಲ್ಲಿ ನಡೆದ ತಾಲ್ಲೂಕು ಒಕ್ಕಲಿಗರ ಸಂಘದ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಒಕ್ಕಲಿಗ ಸಮುದಾಯಕ್ಕೆ ದೂರದೃಷ್ಟಿ ಮತ್ತು ಚಿಂತನೆಗಳ ಕೊರತೆ ಇದೆ. ಸಮಾಜದಲ್ಲಿ ಒಗ್ಗಟ್ಟಿಲ್ಲ. ಭಿನ್ನಮತವಿದೆ ಎಂಬ ಮಾತು ಎಲ್ಲಾ ಕಡೆ ಕೇಳಿ ಬರುತ್ತಿರುವುದು ವಿಷಾದನೀಯ ಎಂದರು. ಸಮುದಾಯದ ಏಕತೆಗಾಗಿ ಪ್ರತಿ ಯೊಬ್ಬರೂ ಪ್ರಾಮಾಣಿಕತೆ ಮೈಗೂಡಿಸಿ ಕೊಳ್ಳಬೇಕಿದೆ. ಒಕ್ಕಲಿಗ ಸಮುದಾಯ ದಲ್ಲಿ ಸಾಹಿತಿಗಳು, ವಿಜ್ಞಾನಿಗಳು ಕಲಾವಿದರ ಸಂಖ್ಯೆ ಇನ್ನಷ್ಟು ಹೆಚ್ಚಬೇಕು. ಸಂಘದ ಜೊತೆ ಸಮುದಾಯವನ್ನು ಕೊಂಡ್ಯೊಯಬೇಕು ಎಂದು ಕಿವಿಮಾತು ಹೇಳಿದರು.

ಬಯಲು ಸೀಮೆಗೆ ಶಾಶ್ವತ ಕುಡಿ ಯುವ ನೀರಿನ ಯೋಜನೆ ಕಲ್ಪಿಸುವ ಹೊೋರಾಟಕ್ಕೆ ಸದಾ ಬೆಂಬಲ ನೀಡುವು ದಾಗಿ ‘ಕುಡಿಯುವ ನೀರು ಪಡೆಯಲು ಇಂದು ಹೋರಾಟ ಅನಿವಾರ್ಯವಾಗಿದೆ. ಬೀದಿಗಿಳಿದರೆ ಮಾತ್ರ ಪರಿಹಾರ ಸಾಧ್ಯ. ಯಾವ ಪಕ್ಷದ ಸರ್ಕಾರ ಅಧಿಕಾರಿದಲ್ಲಿದೆ ಎಂಬುದು ಪ್ರಶ್ನೆಯಲ್ಲ. ಯಾವ ಪ್ರತಿಭಟನೆಗಳೂ ಧರ್ಮ ಜಾತಿಯಿಂದ ನಡೆಯುತ್ತಿಲ್ಲ. ಎಲ್ಲ ಹೋರಾಟ ನೀರಿಗಾಗಿ ಮಾತ್ರ ಎಂಬುದನ್ನು ಸರ್ಕಾರಗಳು ಅರಿಯಬೇಕು’ ಎಂದರು.

ಪಟ್ಟದ ನಾಯಕನಹಳ್ಳಿ ಶಾಖಾ ಮಠದ ನಂಜಾವಧೂತ ಸ್ವಾಮೀಜಿ ಮಾತನಾಡಿ, ಬಸವಣ್ಣನವರ ಚಿಂತನೆ ಮತ್ತು ತತ್ವವನ್ನು ಪರಿಪೂರ್ಣವಾಗಿ ಅರ್ಥಮಾಡಿಕೊಂಡು ನಾಡನ್ನು ಆಳಿದವರು ಕೆಂಪೇಗೌಡರು ಎಂದರು. ಒಕ್ಕಲಿಗ ಸಮುದಾಯ ವಿಘಟನೆಯಾಗ ಬಾರದು. ನೈತಿಕತೆ ಪ್ರಜ್ಞಾವಂತಿಕೆ ರೂಢಿಸಿ    ಕೊಳ್ಳಬೇಕು. ಪ್ರತಿಯೊಂದು ಸಮುದಾಯವನ್ನು ಒಂದೇ ತೆರನಾಗಿ ಕಾಣುವಂತಾಗಬೇಕು ಎಂದರು.

ವಿರೋಧ ಪಕ್ಷದ ನಾಯಕ ಎಚ್.ಡಿ.ಕುಮಾರ ಸ್ವಾಮಿ ಮಾತನಾಡಿ, ಶಾಶ್ವತ ನೀರಾವರಿ ಯೋಜನೆ ಬಗ್ಗೆ ಸರ್ಕಾರ ದಾರಿ ತಪ್ಪಿಸುತ್ತಿದೆ ಎಂದು ಕಿಡಿ ಕಾರಿದರು. ಸರ್ಕಾರದ ನಡುವಳಿಕೆಯಿಂದ ಬಯಲು ಸೀಮೆಗೆ ದ್ರೋಹವಾಗುತ್ತಿದೆ. ದೇಸಾಯಿ ವರದಿಯ ವಾಸ್ತವಾಂಶವನ್ನು ಸರ್ಕಾರ ತಿಳಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಯಲು ಸೀಮೆಯಲ್ಲಿರುವ ರೈತರ ಬದುಕು ಶೋಚನೀಯವಾಗಿದೆ. ದ್ರಾಕ್ಷಿ, ತೆಂಗು, ಅಡಿಕೆ ಬೆಳೆಗೆ ಬೆಂಬಲ ಬೆಲೆ ಇಲ್ಲವಾಗಿದೆ.  ನೀರು ಹರಿಸುವುದಾಗಿ ಸಣ್ಣ ಪ್ರಮಾಣದ ಖುಷಿಗೆ ಸರ್ಕಾರ ಭರವಸೆಯ ಚೆಲ್ಲಾಟವಾಡುವುದನ್ನು ಬಿಟ್ಟು ಬದ್ಧತೆ ತೋರಬೇಕು. ಶಾಶ್ವತ ನೀರಾವರಿ ಯೋಜನೆ ಹೋರಾಟಕ್ಕೆ ಜೆ.ಡಿ.ಎಸ್ ಬೆಂಬಲಿಸಲಿದೆ ಎಂದರು.

ಮಾಜಿ ಸಚಿವ ಬಚ್ಚೇಗೌಡ ಮಾತನಾಡಿ, ಬೆಂಗಳೂರು ವಿಶ್ವ ವಿದ್ಯಾನಿಲಯದಲ್ಲಿ ಕೆಂಪೇಗೌಡ ಅಧ್ಯಾಯನ ಪೀಠ ಸ್ಥಾಪನೆಯಾಗಬೇಕು ಎಂದು ಒತ್ತಾಯಿಸಿದರು. ಕಿಮ್ಸ್ ಅಧ್ಯಕ್ಷ ಬಿ.ಮುನೇಗೌಡ ಮಾತನಾಡಿ, ಕೆಂಪೇಗೌಡರ ಇತಿಹಾಸದ ಬಗ್ಗೆ ಜಾಗೃತಿ ಮೂಡಿಸಬೇಕು ಎಂದರು.

ಮಾಜಿ ಸಂಸದ ಸಿ.ನಾರಾಯಣ ಸ್ವಾಮಿ ಮಾತನಾಡಿ, ನಮ್ಮತನವನ್ನು ಉಳಿಸಿಕೊಂಡು ನಾವೆಲ್ಲಾ ವಿಶ್ವಮಾನವ ರಾಗಿ ಬೆಳೆಯಬೇಕಾಗಿದೆ. ಯಾವುದೇ ಉಪ ಪಂಗಡವನ್ನಿಟ್ಟುಕೊಂಡು ಬೆಳೆ ಯುವುದು ಸರಿಯಲ್ಲ ಎಂದರು. ಶಾಸಕ ಪಿಳ್ಳ ಮುನಿಶ್ವಾಮಪ್ಪ ಮಾತನಾಡಿದರು.

ತಾಲ್ಲೂಕು ಒಕ್ಕಲಿಗ ಸಂಘ ಅಧ್ಯಕ್ಷ ಕೆ.ಸಿ.ವೆಂಕಟೇಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಶಿವರಾಮಯ್ಯ ಸಂಘದ ವಾರ್ಷಿಕ ವರದಿ ವಾಚಿಸಿದರು. ರಾಜ್ಯ ರೇಷ್ಮೆ ಮಂಡಳಿ ಮಾಜಿ ಅಧ್ಯಕ್ಷ ಹನುಮಂತರಾಯಪ್ಪ, ಜೆ.ಡಿ.ಎಸ್ ತಾಲ್ಲೂಕು ಅಧ್ಯಕ್ಷ ಮುನಿಶ್ವಾಮೇ ಗೌಡ, ಒಕ್ಕಲಿಗ ಸಂಘದ ಖಜಾಂಚಿ ಬಿ.ಎಂ. ಭೈರೆಗೌಡ ಸೇರಿದಂತೆ ಸಂಘದ ಎಲ್ಲಾ ಪದಾಧಿ ಕಾರಿಗಳು, ನಿರ್ದೇಶಕರು ಹಾಗೂ ಸದಸ್ಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT