ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳಮೀಸಲು ಜಾರಿಯಾಗಲಿ: ಶಿವಣ್ಣ ಆಗ್ರಹ

Last Updated 1 ಅಕ್ಟೋಬರ್ 2012, 8:40 IST
ಅಕ್ಷರ ಗಾತ್ರ

ಕೊಳ್ಳೇಗಾಲ: ಒಳ ಮೀಸಲಾತಿ ಜಾರಿ ಮೂಲಕ ಮಾತ್ರ ಮಾದಿಗ ಸಮುದಾಯ ರಾಜಕೀಯ ಅಭಿವೃದ್ಧಿ ಕಾಣಲು ಸಾಧ್ಯ ಎಂದು ಮಾಜಿ ಸಚಿವ ಕೋಟೆ ಶಿವಣ್ಣ ಅಭಿಪ್ರಾಯ ವ್ಯಕ್ತಪಡಿಸಿದರು.

ಗುರುಭವನದಲ್ಲಿ ಡಾ.ಬಾಬು ಜಗಜೀವನರಾಂ ಹನೂರು ಮತ್ತು ಕೊಳ್ಳೇಗಾಲ ಸಂಘಗಳ ಒಕ್ಕೂಟ ವತಿಯಿಂದ ಭಾನುವಾರ ಏರ್ಪಡಿಸಿದ್ದ ದಿ. ಬಿ.ಜಯಶಂಕರ್ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.

ಮಾದಿಗರು ಜಾತಿಹೆಸರನ್ನೇ ಹೇಳಲು ಹಿಂಜರಿಯುತ್ತಿರುವುದೇ ಅಭಿವೃದ್ಧಿಯಿಂದ ಹಿಂದೆ ಬೀಳಲು ಕಾರಣ. ನಮ್ಮಲ್ಲಿನ ಕೀಳರಿಮೆ ತೊರೆದು ಮಾದಿಗ ಎಂದು ಹೆಮ್ಮೆಯಿಂದ ಹೇಳುವ ಮೂಲಕ ಸಂಘಟನೆಗೆ ಮುಂದಾಗಬೇಕು ಎಂದು ತಿಳಿಸಿದರು.

ಮಾಜಿ ಉಪ ಮೇಯರ್ ಕೃಷ್ಣ ಮಾತನಾಡಿ, ಸದಾಶಿವ ಆಯೋಗದ ಅನುಷ್ಠಾನಕ್ಕೆ ನಾವೆಲ್ಲರೂ ಸಂಘಟಿತರಾಗಿ ಒತ್ತಡ ಹೇರಬೇಕು ಎಂದು ಸಲಹೆ ನೀಡಿ ದಿ. ಬಿ. ಜಯಶಂಕರ್ ಗುಣಗಾನ ಮಾಡಿದರು.
ಮಾಜಿ ಎಂ.ಎಲ್.ಸಿ ರಮೇಶ್ ಮಾತನಾಡಿದರು. ಸಮಾರಂಭದ ದಿವ್ಯಸಾನಿದ್ಯವನ್ನು ಚಿತ್ರದುರ್ಗ ಜಿಲ್ಲೆ ಬಸವಮೂರ್ತಿ ಹರಳಯ್ಯ ಸ್ವಾಮೀಜಿ ವಹಿಸಿ ಆಶೀರ್ವಚನ ನೀಡಿದರು.

ಜಿಲ್ಲಾ ಒಕ್ಕೂಟ ಅಧ್ಯಕ್ಷ ಶಿವಮೂರ್ತಿ, ಕಾರ್ಯದರ್ಶಿ ನಾಗೇಂದ್ರ, ರಾಚಯ್ಯ, ಮಹಾದೇವು, ಬಾಲರಾಜ್, ರಂಗಯ್ಯ, ಕಮಲ್, ರಾಜಣ್ಣ,ಶೇಷಣ್ಣ, ಬಸವರಾಜು, ಚಾಮರಾಜು, ಉಪನಿರ್ದೇಶಕ ಡಾ. ಮಹದೇವಪ್ಪ ಕೆನರಾಬ್ಯಾಂಕ್ ಬಸವರಾಜು ಇತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT