ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಒಳ್ಳೆ ಭಾವದಿಂದ ಮಾತ್ರ ಭಗವಂತನ ಅನುಗ್ರಹ'

Last Updated 5 ಜುಲೈ 2013, 7:58 IST
ಅಕ್ಷರ ಗಾತ್ರ

ಮುಧೋಳ: `ಸದ್ಭಾವದಿಂದ ದೇವರ ಕಾರ್ಯ ಮಾಡಬೇಕು' ಎಂದು ಉಡುಪಿಯ ಕಾಣಿಯೂರು ಮಠದ ವಿದ್ಯಾವಲ್ಲಭ ಸ್ವಾಮಿಜೀ ಹೇಳಿದರು.

ಮುಧೋಳಕ್ಕೆ ಪರ್ಯಾಯ ಪೂರ್ವಭಾವಿ ಸಂಚಾರಕ್ಕಾಗಿ ಆಗಮಿಸಿ ರಾಘವೇಂದ್ರ ಸ್ವಾಮಿ ಸಭಾಭವನದಲ್ಲಿ ಅವರು ಆಶೀರ್ವಚನ ನೀಡಿದರು.

ಇದೇ ಸಂದರ್ಭದಲ್ಲಿ ವಿಪ್ರ ಸಮಾಜದ ಪರವಾಗಿ ಶ್ರೀಗಳಿಂದ ಸನ್ಮಾನ ಸ್ವೀಕರಿಸಿ ಶಾಸಕ ಗೋವಿಂದ ಕಾರಜೋಳ, ಬ್ರಾಹ್ಮಣ ಸಮಾಜದಿಂದ ಸಾಕಷ್ಟು ಸಂಸ್ಕಾರ ಪಡೆದುಕೊಂಡಿದ್ದೇನೆ ಎಂದು ಹೇಳಿದರು.

ಸಧರ್ಮ ಮಂಡಳಿಯ ಅಧ್ಯಕ್ಷ ಗುರುರಾಜ ಕಟ್ಟಿ, ಕಾರಜೋಳ ಅವರು ಸಚಿವರಾಗಿದ್ದಾಗ ರಾಜ್ಯದಾದ್ಯಂತ ಬ್ರಾಹ್ಮಣ ಸಮಾಜದ ಮಂದಿರ ಮಠಗಳಿಗೆ ಅನುದಾನ ನೀಡಿದ್ದಾರೆ ಎಂದು ಹೇಳಿದರು.

ಮುಧೋಳ ಮಂಡಳ ಬಿಜೆಪಿ ಅಧ್ಯಕ್ಷ ಬಿ.ಎಚ್. ಪಂಚಗಾಂವಿ ಅವರನ್ನು ಶ್ರೀಗಳು ಸಮಾಜದ ಪರವಾಗಿ ಸನ್ಮಾನಿಸಿದರು. ಸುಭಾಸ ಮನಗೂಳಿ ರಚಿಸಿದ `ದಾಸ ಸಂಕೀರ್ತನೆ' ಕೃತಿಯನ್ನು ಶ್ರೀಗಳು ಬಿಡುಗಡೆ ಮಾಡಿದರು. ಪಾಂಡುರಂಗಾಚಾರ್ಯ ಜೋಶಿ, ಬಿಂದುಮಾಧವಾಚಾರ್ಯ ನಾಗಸಂಪಗಿ ಮಾತನಾಡಿದರು.

ಶ್ರೀಗಳನ್ನು ಛತ್ರಪತಿ ಶಿವಾಜಿ ಮಹಾರಾಜ ವೃತ್ತದಿಂದ ರಾಘವೇಂದ್ರಸ್ವಾಮಿ ಸಭಾ ಭವನದ ವರೆಗೆ ಪೂರ್ಣಕುಂಭ, ಭಜನೆ, ಸಂಗೀತಸೇವೆ ಮೆರವಣಿಗೆ ಮುಖಾಂತರ ಕರೆತರಲಾಯಿತು.

ಗಣ್ಯರಾದ ರಾಘವೇಂದ್ರ ದಿಡ್ಡಿ, ಸಂಜೀವ ಮೊಕಾಶಿ, ರವಿ ದೇಸಾಯಿ, ಸಂಜೀವ ದಿಡ್ಡಿ, ಜಿ.ಎನ್.ಜೋಶಿ, ರಾಘವೇಂದ್ರ ಜೇರೆ, ಎಂ,ಕೆ.ದೇಸಾಯಿ, ಆರ್.ಪಿ.ಜೋಶಿ, ಸೋನಪ್ಪಿ ಕುಲಕರ್ಣಿ ಉಪಸ್ಥಿತರಿದ್ದರು. ಗುರುರಾಜ ಕಟ್ಟಿ ಸ್ವಾಗತಿಸಿದರು. ಸಾಹಿತಿ ಆನಂದ ನಿರೂಪಿಸಿದರು. ಆನಂದ ಕುಲಕರ್ಣಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT