ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಔದ್ಯೋಗಿಕ ಮಾಹಿತಿ ಕೈಪಿಡಿ ಬಿಡುಗಡೆ

Last Updated 21 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ನಗರದ ವಾಣಿಜ್ಯ, ಉದ್ಯಮ, ವ್ಯಾಪಾರ ಕೇಂದ್ರಗಳ ಬಗ್ಗೆ ಸಮಗ್ರ ಮಾಹಿತಿ ನೀಡುವ `ಇನ್ಫೊ ಮೀಡಿಯಾ ಯೆಲ್ಲೊ ಪೇಜಸ್~ ಕೈಪಿಡಿಯ 17ನೇ ಆವೃತ್ತಿಯನ್ನು ನಗರ ಪೊಲೀಸ್ ಕಮಿಷನರ್ ಜ್ಯೋತಿಪ್ರಕಾಶ್ ಮಿರ್ಜಿ ಮಂಗಳವಾರ ಬಿಡುಗಡೆ ಮಾಡಿದರು.

`ಕೈಪಿಡಿಯಲ್ಲಿ ಸಮಗ್ರ ಮಾಹಿತಿಗಳಿವೆ. ಜನರು ತಮಗೆ ಏನು ಬೇಕು ಮತ್ತು ಎಲ್ಲಿ ಸಿಗುತ್ತದೆ ಎಂದು ತಿಳಿದುಕೊಳ್ಳಲು ಈ ಕೈಪಿಡಿ ಸಹಾಯಕವಾಗಲಿದೆ. ಸುಲಭವಾಗಿ ಇದು ಲಭ್ಯವಾಗುವುದರಿಂದ ಹೆಚ್ಚು ಶ್ರಮ ಇಲ್ಲದೆ ಕಡಿಮೆ ಅವಧಿಯಲ್ಲಿ ಮಾಹಿತಿ ಸಿಗಲಿದೆ~ ಎಂದರು.

`ಇಷ್ಟೊಂದು ಮಾಹಿತಿಯನ್ನು ಒಂದು ಕೈಪಿಡಿಯಲ್ಲಿ ಸಂಗ್ರಹಿಸಿರುವ ಇನ್ಫೊ ಮೀಡಿಯಾ ಸಂಸ್ಥೆಯ ಕೆಲಸ ಶ್ಲಾಘನೀಯ~ ಎಂದು ಮಿರ್ಜಿ ಮೆಚ್ಚುಗೆ ವ್ಯಕ್ತಪಡಿಸಿದರು.

`ಒಟ್ಟು ಒಂಬತ್ತು ರಾಜ್ಯಗಳ ಮೆಟ್ರೊ ಮತ್ತು ಮಧ್ಯಮ ನಗರಗಳ ವಾಣಿಜ್ಯ ಹಾಗೂ ಉದ್ಯಮದ ಬಗ್ಗೆ ಕೈಪಿಡಿ ಮುದ್ರಿಸಲಾಗುತ್ತಿದೆ. ಮುದ್ರಿತ, ಡಿಜಿಟಲ್ ಮಾದರಿಯಲ್ಲೂ ಸೇವೆ ಸಲ್ಲಿಸಲಾಗುತ್ತಿದೆ. ಬೆಂಗಳೂರಿನ ಕೈಪಿಡಿಯಲ್ಲಿ 550 ವಾಣಿಜ್ಯ ಸಂಸ್ಥೆಗಳ ಬಗ್ಗೆ ಮಾಹಿತಿ ನೀಡಲಾಗಿದೆ. ಮುಖ್ಯವಾಗಿ ಆಸ್ಪತ್ರೆ ಮತ್ತು ಶಿಕ್ಷಣ ಸಂಸ್ಥೆಗಳ ಸಮಗ್ರ ಮಾಹಿತಿ ನೀಡಲಾಗಿದೆ~ ಎಂದು ಇನ್ಫೊ ಮೀಡಿಯಾ ಸಂಸ್ಥೆಯ ಕಾರ್ಯಕಾರಿ ಉಪಾಧ್ಯಕ್ಷ ಮುಕ್ತಾರ್ ಖುರೇಶಿ ಹೇಳಿದರು.

ದಿನಪತ್ರಿಕೆ, ರೇಡಿಯೊ ಹಾಗೂ ಇನ್ನಿತರ ಮಾಧ್ಯಮಗಳಲ್ಲಿ ಜಾಹೀರಾತು ನೀಡಲು ಹೆಚ್ಚಿನ ಹಣ ಭರಿಸಬೇಕಾಗುತ್ತದೆ. ಆದರೆ ಕಡಿಮೆ ಖರ್ಚಿನಲ್ಲಿ ಇನ್ಫೊ  ಮೀಡಿಯಾದಲ್ಲಿ ಜಾಹೀರಾತು ನೀಡಿ ಅಧಿಕ ಲಾಭ ಪಡೆಯಬಹುದು ಎಂದು ಅವರು ತಿಳಿಸಿದರು.

ಕರ್ನಾಟಕ ಕೈಗಾರಿಕಾ ಕೈಪಿಡಿ ಮತ್ತು ಮೆಷಿನ್ ಅಂಡ್ ಟೂಲ್ ಕೈಪಿಡಿಯನ್ನೂ ಈ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು. `ಇನ್ಫೊ ಮೀಡಿಯಾ ಯೆಲ್ಲೊ ಪೇಜಸ್~ ಕೈಪಿಡಿಯನ್ನು ಉಚಿತವಾಗಿ ಪಡೆಯಲು 51818ಕ್ಕೆ ಎಸ್‌ಎಂಎಸ್ ಮಾಡಲು ಕೋರಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT