ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂಗನಾ ಕಣ್ಣಾಮುಚ್ಚಾಲೆ

Last Updated 3 ಮಾರ್ಚ್ 2011, 19:30 IST
ಅಕ್ಷರ ಗಾತ್ರ

ರಾಜಕಾರಣಿ ರಾಮ್‌ವಿಲಾಸ್ ಪಾಸ್ವಾನ್ ಅವರ ಮಗ ಚಿರಾಗ್ ಪಾಸ್ವಾನ್ ಜೊತೆ ‘ಒನ್ ಅಂಡ್ ಒನ್ಲಿ’ ಚಿತ್ರದಲ್ಲಿ ಕಂಗನಾ ರನಾವುತ್ ನಾಯಕಿಯಾಗಿ ನಟಿಸಲು ಒಪ್ಪಿದ್ದು ಬಾಲಿವುಡ್‌ನಲ್ಲಿ ಅಚ್ಚರಿಗೆ ಕಾರಣವಾಗಿತ್ತು. ಇದೀಗ ಆಕೆ ಚಿತ್ರೀಕರಣಕ್ಕೆ ಕೈಕೊಡುತ್ತಿರುವ ಸುದ್ದಿ ಬಂದಿದೆ.

ಚಿತ್ರಕ್ಕಾಗಿ ಐದು ಕೋಟಿ ರೂಪಾಯಿ ಸಂಭಾವನೆ ಪಡೆದು ಆಕೆ ಈ ರೀತಿ ಕಣ್ಣಾಮುಚ್ಚಾಲೆ ಆಡುತ್ತಿರುವುದನ್ನು ಚಿತ್ರತಂಡ ಟೀಕಿಸುತ್ತಿದೆ. ಚಿತ್ರದ ನಿರ್ದೇಶಕ ತನ್ವೀರ್ ಖಾನ್ ಕಂಗನಾ ಬಗ್ಗೆ ಉರಿ ಕೋಪ ಪ್ರದರ್ಶಿಸುತ್ತಿದ್ದಾನೆ. ಆದರೆ, ತನ್ನ ಮೇಲಿನ ಆಪಾದನೆಗಳನ್ನು ನಿರಾಕರಿಸಿರುವ ಆಕೆ, ‘ನಾನು ಸಂಭಾವನೆಗಾಗಿ ಚಿತ್ರ ಒಪ್ಪಿಕೊಂಡಿದ್ದಲ್ಲ. ಚಿತ್ರದ ಸ್ಕ್ರಿಪ್ಟ್ ಇಷ್ಟವಾಗಿತ್ತು. ಇದೀಗ ಸಿನಿಮಾ ಮುಗಿಯುತ್ತಾ ಬಂದಿದೆ. ನನ್ನ ಭಾಗದ ಚಿತ್ರೀಕರಣ ಕೂಡ ಮುಗಿದಿದೆ. ಆದರೂ ಅಲ್ಲಿ ಹೋಗಿ ಇನ್ನೇನು ಮಾಡಲಿ?’ ಎಂದು ಪ್ರಶ್ನಿಸಿದ್ದಾಳೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT