ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂಚಿನ ಯುಗದಲ್ಲೂ ಸಾಮಾಜಿಕ ಜಾಲತಾಣ!

Last Updated 21 ಮೇ 2012, 19:30 IST
ಅಕ್ಷರ ಗಾತ್ರ

ಲಂಡನ್ (ಪಿಟಿಐ): ಕಂಚಿನ ಯುಗದ್ಲ್ಲಲೂ ಫೇಸ್‌ಬುಕ್ ಮಾದರಿಯ ಸಂವಹನ ವಿಧಾನ ಇತ್ತು ಎನ್ನುತ್ತಾರೆ ವಿಜ್ಞಾನಿಗಳು!

ಗುಹೆಗಳಲ್ಲಿ ವಾಸಿಸುತ್ತಿದ್ದ ಮಾನವರು ಪರಸ್ಪರ ಸಂವಹನಕ್ಕಾಗಿ ಕಲ್ಲುಗಳ ಮೇಲೆ ಬಿಡಿಸಿದ ಸಾಂಕೇತಿಕ ಚಿತ್ರಗಳನ್ನು `ಇತಿಹಾಸ ಪೂರ್ವ~ದ ಫೇಸ್ ಬುಕ್ ಮಾದರಿ ಎಂದು ಕೇಂಬ್ರಿಡ್ಜ್ ವಿಜ್ಞಾನಿಗಳು ಬಣ್ಣಿಸುತ್ತಾರೆ. ರಷ್ಯ ಮತ್ತು ಸ್ವೀಡನ್‌ನ ಗುಹೆ ಹಾಗೂ ಸರೋವರಗಳ ಬಳಿ ಕಂಚಿನಯುಗದ ಜನರು ಕೆತ್ತಿದ ಸಾವಿರಾರು ಸಾಂಕೇತಿಕ ಚಿತ್ರಗಳನ್ನು ವಿಜ್ಞಾನಿಗಳು ಅಧ್ಯಯನ ಮಾಡಿದ್ದಾರೆ.
 
`ಭಾಷೆ ಉಗಮಕ್ಕಿಂತಲೂ ಪೂರ್ವದಲ್ಲಿ ಸಂಜ್ಞೆ, ಸಾಂಕೇತಿಕ ಚಿತ್ರಗಳ ಮೂಲಕ ಆದಿ ಮಾನವವರು ತಮ್ಮ ಭಾವನೆ ವ್ಯಕ್ತಪಡಿಸುತ್ತಿದ್ದರು~ ಎಂದು ಸಂಶೋಧಕ  ಮಾರ್ಕ್ ಸ್ಯಾಪ್‌ವೆಲ್  ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT