ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಕಂದಾಯ ಗ್ರಾಮವಾಗಿ ತಾಂಡಾ'

Last Updated 1 ಜುಲೈ 2013, 5:36 IST
ಅಕ್ಷರ ಗಾತ್ರ

ಬಳ್ಳಾರಿ: 500ಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ರಾಜ್ಯದಲ್ಲಿನ ಲಂಬಾಣಿ ತಾಂಡಾಗಳನ್ನು ಕಂದಾಯ ಗ್ರಾಮ ಗಳನ್ನಾಗಿ ಘೋಷಿಸಲು ಸರ್ಕಾರ ಬದ್ಧ ವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರ್ ನಾಯ್ಕ ತಿಳಿಸಿದರು.

ನಗರದಲ್ಲಿ ಭಾನುವಾರ ಬಂಜಾರ (ಲಂಬಾಣಿ) ಸಂಘದ ಜಿಲ್ಲಾ ಘಟಕ ಏರ್ಪಡಿಸಿದ್ದ ಸಮಾರಂಭದಲ್ಲಿ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಕಾರ್ಮಿಕ ಇಲಾಖೆಯು ರಾಜ್ಯದ 4 ಕಡೆ ತಲಾ ್ಙ3 ಕೋಟಿ ಅನುದಾನದಲ್ಲಿ ಕೌಶಲ ಅಭಿವೃದ್ಧಿ ತರಬೇತಿ ಕೇಂದ್ರ ಗಳನ್ನು ತೆರೆಯಲಿದೆ ಎಂದು  ತಿಳಿಸಿದರು.

ಪರಶಿಷ್ಟ ಜಾತಿಗೆ ಸೇರಿರುವ ಅನೇಕ ಸಮುದಾಯಗಳಿಗೆ ಮಾರಕವಾಗಿ ಪರಿಣಮಿಸಲಿರುವ ನ್ಯಾ. ಎ.ಜೆ. ಸದಾ ಶಿವ ಆಯೋಗದ ವರದಿಯನ್ನು ಯಾವುದೇ ಕಾರಣಕ್ಕೂ ಸರ್ಕಾರ ಜಾರಿ ಗೊಳಿಸಬಾರದು ಎಂದು ಹಗರಿ ಬೊಮ್ಮನಹಳ್ಳಿ ಶಾಸಕ ಭೀಮಾ ನಾಯ್ಕ ಆಗ್ರಹಿಸಿದರು.

ನ್ಯಾ.ಸದಾಶಿವ ಆಯೋಗ ಸಲ್ಲಿಸಿರುವ ವರದಿಯನ್ನು ಯಥಾವತ್ತಾಗಿ ಜಾರಿ ಗೊಳಿಸಿದರೆ, ಪರಿಶಿಷ್ಟ ಜಾತಿಗೆ ಸೇರಿ ರುವ ಅನೇಕ ಉಪಜಾತಿಗಳಿಗೆ ಅನ್ಯಾ ಯವಾಗಲಿದ್ದು, ಇದನ್ನು ವಿರೋಧಿಸಿ ಎಲ್ಲರೂ ಹೋರಾಟ ನಡೆ ಸುವ ಅಗತ್ಯ ವಿದೆ ಎಂದು ಅಭಿಪ್ರಾಯಪಟ್ಟರು.

ರಾಜ್ಯ ಸರ್ಕಾರ ಬಂಜಾರ ಸಮಾಜದ ಗುರುಗಳಾದ ಸೇವಾಲಾಲ್ ಸ್ವಾಮೀಜಿ ಯವರ ಜಯಂತಿಯನ್ನು ಆಚರಿಸಬೇಕು ಎಂದು ಅವರು ಕೋರಿದರು.

ಬಂಜಾರ ಸಮಾಜದ ಜನರು ಎದುರಿಸುತ್ತಿರುವ ಸಮಸ್ಯೆಗಳ ನಿವಾರಣೆಗಾಗಿ ಇದೇ ಸಂದರ್ಭ ಸಂಘದ ಮುಖಂಡರು ಸಚಿವರಿಗೆ ಮನವಿ ಸಲ್ಲಿಸಿದರು.

ಸಮುದಾಯದ ಮುಖಂಡರಾದ ಆರ್. ಚಂದ್ರಾನಾಯ್ಕ, ಡಾ.ಸುರೇಂದ್ರ ನಾಯ್ಕ, ನೀಲಾ ನಾಯ್ಕ, ಕೃಷ್ಣ ನಾಯ್ಕ, ಭಾಗ್ಯ ನಾಯ್ಕ, ಮಲ್ಲೇಶ ದೊಡ್ಡಮನಿ, ವಿಜಯಲಕ್ಷ್ಮಿ, ಬಾಲಾಜಿ ನಾಯ್ಕ, ರಾಮಜಿ ನಾಯ್ಕ, ಗೋವಿಂದ ನಾಯ್ಕ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT