ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂಪೆನಿ ವಿಲೀನ ರೂ 2ಲಕ್ಷ ಕೋಟಿ ವಹಿವಾಟು

Last Updated 25 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ನವದೆಹಲಿ(ಪಿಟಿಐ): ಜಾಗತಿಕ ಮಟ್ಟದಲ್ಲಿ ಆರ್ಥಿಕ ಅಸ್ತಿರತೆಯ ಸಮಸ್ಯೆ ಇದ್ದರೂ, ಭಾರತದ ಉದ್ಯಮ ವಲಯದಲ್ಲಿ ಕಂಪೆನಿಗಳ ಖರೀದಿ ಮತ್ತು ವಿಲೀನ ಪ್ರಕ್ರಿಯೆ 2012ರಲ್ಲಿ ಜೋರಾಗಿಯೇ ನಡೆದಿದೆ.

ಜನವರಿಯಿಂದ ಡಿಸೆಂಬರ್ 15ರವರೆಗಿನ ಹನ್ನೊಂದೂವರೆ ತಿಂಗಳ ಅವಧಿಯಲ್ಲಿ ಒಟ್ಟು ರೂ. 2 ಲಕ್ಷ ಕೋಟಿಗೂ ಅಧಿಕ ಮೌಲ್ಯದ ಕಂಪೆನಿಗಳ ಸ್ವಾಧೀನ-ವಿಲೀನ ವಹಿವಾಟು ನಡೆದಿದೆ.

ಉದ್ಯಮ ವಲಯ ಕ್ಷಿಪ್ರಗತಿ ಪ್ರಗತಿಗಾಗಿ ಕಂಡುಕೊಂಡಿರುವ ಈ `ವಿಲೀನ-ಸ್ವಾಧೀನ' ಸೂತ್ರವು 2011ಕ್ಕೆ ಹೋಲಿಸಿದಲ್ಲಿ 2012ರಲ್ಲಿ ಚುರುಕು ಪಡೆದಿತ್ತು. ಈ ವರ್ಷದಲ್ಲಿ ಈವರೆಗೆ ಒಟ್ಟು 582 ಕಂಪೆನಿಗಳ ಸ್ವಾಧೀನ-ವಿಲೀನ ಪ್ರಕ್ರಿಯೆ ದಾಖಲಾಗಿದೆ.

ಟಾಟಾ ಸಮೂಹ, ಮಹೀಂದ್ರಾ, ಹಿಂದುಜಾ, ಆದಿತ್ಯ ಬಿರ್ಲಾ ಮೊದಲಾದ ಸಮೂಹಗಳು 2012ರಲ್ಲಿ ಈ ಪ್ರಕ್ರಿಯೆಯನ್ನು ದೊಡ್ಡ ಮಟ್ಟದಲ್ಲಿಯೇ ನಡೆಸಿದವು.

ಹೊಸ ವರ್ಷ 2013ರಲ್ಲಿಯೂ ಭಾರತದಲ್ಲಿನ ವಿವಿಧ ಬೃಹತ್ ಕಂಪೆನಿ ಸಮೂಹಗಳು ಸಾಮ್ರಾಜ್ಯ ವಿಸ್ತರಣೆಯ ಈ ಪ್ರಕ್ರಿಯೆ ಯನ್ನು ಮತ್ತಷ್ಟು ದೊಡ್ಡ ಪ್ರಮಾಣದಲ್ಲಿಯೇ ಮುಂದುವರಿಸುವ ನಿರೀಕ್ಷೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT