ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂಪೆನಿಗಳಲ್ಲಿ ಸಂಸದರ ಆಸಕ್ತಿ: ಮಾಹಿತಿ ಬಹಿರಂಗಕ್ಕೆ ಆದೇಶ

Last Updated 7 ಜೂನ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಸಂಸದರು ಆಸಕ್ತಿ ಹೊಂದಿರುವ ಕಂಪೆನಿಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುವುದರಿಂದ ಇಂತಹ ಕಂಪೆನಿಗಳಿಗೆ ಸಂಬಂಧಿಸಿದ ಶಾಸನಗಳ ವಿಚಾರದಲ್ಲಿ ಈ ಸಂಸದರು ಯಾವ ರೀತಿ ವರ್ತಿಸುತ್ತಾರೆ ಎಂದು ಗಮನಹರಿಸಲು ಸಾಧ್ಯವಾಗುತ್ತದೆ ಎಂದು ಕೇಂದ್ರ ಮಾಹಿತಿ ಆಯೋಗವು ಅಭಿಪ್ರಾಯಪಟ್ಟಿದೆ.

ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ಇಂತಹ ಮಾಹಿತಿಯನ್ನು ಬಹಿರಂಗಪಡಿಸಬೇಕು ಎಂದು ಅರ್ಜಿಯೊಂದರ ವಿಚಾರಣೆ ಸಂದರ್ಭದಲ್ಲಿ ಮುಖ್ಯ ಮಾಹಿತಿ ಆಯುಕ್ತ ಸತ್ಯಾನಂದ ಮಿಶ್ರಾ ಹೇಳಿದ್ದಾರೆ.
ಅನಿಲ್ ಬೈರ್‌ವಾಲ ಎಂಬುವವರು ಮಾಹಿತಿ ಹಕ್ಕು ಕಾಯ್ದೆಯಡಿ ರಾಜ್ಯಸಭಾ ಸಚಿವಾಲಯಕ್ಕೆ ಪತ್ರ ಬರೆದು, ಸಂಸದರು ಕಂಪೆನಿಗಳಲ್ಲಿ ಹೊಂದಿರುವ ಷೇರುಗಳು ಅಥವಾ ಪಾಲುದಾರಿಕೆಯ ಸಂಪೂರ್ಣ ವಿವರ ನೀಡುವಂತೆ ಕೋರಿದ್ದರು.

ಸದನದ ನಿಯಮಾವಳಿಯಂತೆ ಎಲ್ಲ ಸದಸ್ಯರೂ ತಾವು ಕಂಪೆನಿ ಅಥವಾ ಉದ್ಯಮಗಳಲ್ಲಿ ಹೊಂದಿರುವ ಪಾಲುದಾರಿಕೆ ವಿವರಗಳನ್ನು ಸಲ್ಲಿಸಬೇಕಾಗುತ್ತದೆ. ಇಂತಹ ವಿವರ ಸಲ್ಲಿಸದ ಸಂಸದರ ಪಟ್ಟಿಯನ್ನು ಕೊಡಬೇಕು ಎಂದು ಅವರು ಕೋರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT