ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂಪ್ಯೂಟರ್ ಬದಲಿಗೆ ಟೆಲಿವಿಷನ್

Last Updated 8 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ಟಿವಿಯಲ್ಲಿ ಮೆಚ್ಚಿನ ಧಾರಾವಾಹಿ ಅಥವಾ ರಿಯಾಲಿಟಿ ಶೋ ನೋಡುತ್ತಲೇ ಬಂದ ನಾವು ಇನ್ನು ಮೇಲೆ ಟೆಲಿವಿಷನ್‌ನಲ್ಲಿಯೇ ಇಮೇಲ್ ಓದುವುದು ಅಥವಾ ಇಮೇಲ್ ಕಳುಹಿಸಬಹುದು. ದೂರದಲ್ಲಿರುವ ಗೆಳೆಯರೊಂದಿಗೆ ಗೇಮ್ ಆಡಬಹುದು. ಸಂಜೆ ಮನೆಯವರೊಂದಿಗೆ ಕಾಲ ಕಳೆಯಲು ಹೋಟೆಲ್‌ನಲ್ಲಿ ಡಿನ್ನರ್‌ಗಾಗಿ ಆಸನವನ್ನೂ ಕಾಯ್ದಿರಿಸಬಹುದು. ಇದನ್ನೇ ತಂತ್ರಜ್ಞಾನ ಭಾಷೆಯಲ್ಲಿ ‘ಡಿಜಿಟಲ್ ಕೊಠಡಿ’ ಎನ್ನಲಾಗುತ್ತದೆ.

ಈ ಕೊಠಡಿಯಲ್ಲಿ ನೀವು ಮೆಚ್ಚಿನ ಸಿನಿಮಾದ ಮಧ್ಯೆ ಜಾಹೀರಾತು ಬಂದಾಗ ಐಪಾಡ್ ಅಥವಾ ಅಂಡ್ರಾಯ್ಡಾ ಬೇಸ್ಡ್ ಟ್ಯಾಬ್ಲೆಟ್ ಮೂಲಕ ಇರುವ ಟಚ್ ಸ್ಕ್ರಿನ್ ಬೇರೆ ಚಾನೆಲ್ ಹಾಕಬಹುದು. ಈ ರೀತಿಯ ಡಿಜಿಟಲ್ ಲಿವಿಂಗ್ ರೂಂನ್ನು ಸಿದ್ಧಪಡಿಸುವುದರಲ್ಲಿ ಪ್ರಸಿದ್ಧ ಕಂಪನಿಗಳಾದ ಸ್ಯಾಮ್ಸಂಗ್, ಇಂಟರ್‌ನೆಟ್ ಸಂಸ್ಥೆಗಳಾದ ಗೂಗಲ್ ಕಂಪನಿಗಳು ಮುಂಚೂಣಿಯಲ್ಲಿವೆ.

ಇಲ್ಲಿ ಉಪಯೋಗಿಸಿರುವ ಸಾಫ್ಟವೇರ್ ಅಪ್ಲಿಕೇಷನ್ ಟಿವಿಯ ಪರದೆಯ ಮೂಲಕ ಎಲ್ಲ ಕೆಲಸಗಳನ್ನು ಮಾಡಬಹುದಾಗಿರುವುದರಿಂದ ಬಹುತೇಕರಿಗೆ ಇದು ಉಪಯುಕ್ತವಾಗಲಿದೆ. ಉದಾಹರಣೆಗೆ ಫ್ಲಿಪ್ ಫೋನ್‌ಗಳಾದ ಮೋಟರೋಲ ರೇಜರ್ ಸ್ಮಾರ್ಟ್‌ಫೋನ್ ಮೂಲಕ ’ಲೈಕ್ ಡ್ರಾಯ್ಟಾ ಎಕ್ಸ್’ ಎಂಬ ತಾಣಕ್ಕೆ ಪ್ರವೇಶಿಸಿದರೆ ಅಲ್ಲಿರುವ ನೂರಾರು ಪ್ರೊಗ್ರಾಂಗಳು ಹಾಗೂ ಆಟಗಳನ್ನು ಆಡಬಹುದಾಗಿದೆ.

ಇದು ಡಿಜಿಟಲ್ ಪ್ರಪಂಚದ ಹೊಸ ಅವಕಾಶ. ಈ ಸಾಮ್ರಾಜ್ಯದ ಅಧಿಪತ್ಯಕ್ಕೆ ಟಿವಿ ಪರದೆ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರವ ಸ್ಯಾಮ್ಸಂಗ್, ಅಂತರ್ಜಾಲ ಸಂಸ್ಥೆಯಾದ ಗೂಗಲ್ ಹಾಗೂ ಸಾಂಪ್ರದಾಯಿಕ ಲೀವಿಂಗ್ ರೂಂ ನಿರ್ಮಾಣ ಕ್ಷೇತ್ರದ ಅಗ್ರಜ ಕಾಮ್‌ಕಾಸ್ಟ್ ತೀರ್ವ ಪೈಪೋಟಿ ನಡೆಸುತ್ತಿವೆ.

ವೆಬ್ ಎನೆಬಲ್ಡ್ ಟಿವಿಗಳಲ್ಲಿ ಅಥವಾ ಸೆಟ್‌ಗಳಲ್ಲಿ ಅಂತರ್ಜಾಲ ಸಂಪರ್ಕಕ್ಕೆ ಬೇಕಾದ ಮತ್ತೊಂದು ಸಾಧನ ಅಳವಡಿಸಲಾಗುವುದರಿಂದ ಎರಡು ಕೆಲಸಗಳನ್ನು ಟಿವಿಯ ಪರದೆಯ ಮೂಲಕವೇ ಮಾಡಬಹುದು ಎಂದು ಲಾಸ್ ವೇಗಾಸ್‌ನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಇಂಟರ್‌ನ್ಯಾಷನಲ್ ಕನ್ಸುಮರ್ ಎಲೆಕ್ಟ್ರಾನಿಕ್ಸ್ ಶೋನಲ್ಲಿ ತೋರಿಸಲಾಯಿತು.

ಅಂತರ್ಜಾಲ ಸೌಲಭ್ಯವಿರುವ ಟಿವಿಗಳು ಈಗಾಗಲೇ ಮಾರುಕಟ್ಟೆಯಲ್ಲಿ ದೊರೆಯುತ್ತಿದ್ದು, 2015ರ ವೇಳೆಗೆ ಎಲ್ಲ  ಟಿವಿ ಸೆಟ್‌ಗಳಲ್ಲಿ ಇದನ್ನು ಅಳವಡಿಸುವ ಸಾಧ್ಯತೆಗಳಿವೆ.

ಒಂದು ಕಡೆ ನಿಮ್ಮ ನೆಚ್ಚಿನ ಪಂದ್ಯಾವಳಿಯನ್ನು ವೀಕ್ಷಿಸುವುದರೊಂದಿಗೆ ಅದೇ ಸಮಯದಲ್ಲಿಯೇ ಕಚೇರಿಯ ಸಹೋದ್ಯೋಗಿಗಳೊಂದಿಗೆ ಕೆಲಸ ಕುರಿತು ಹರಟಬಹುದು (ಚಾಟ್) ಎನ್ನುತ್ತಾರೆ ಡಿಶ್ ನೆಟವರ್ಕ್ ವ್ಯವಸ್ಥಾಪಕ ನಿರ್ದೇಶಕ ಐರಾ ಬಹರ್.

ಡಿಶ್ ನೆಟವರ್ಕ್ ಈಗಾಗಲೇ 14 ದಶಲಕ್ಷ ಗ್ರಾಹಕರನ್ನು ಸ್ಯಾಟಲೈಟ್ ಟಿವಿಯ ಮೂಲಕ ಗ್ರಾಹಕರಿಗೆ ತಲುಪಿಸುತ್ತಿದೆ.ಡಿಶ್ ಸರ್ವಿಸ್ ಅಪ್ಲಿಕೇಷನ್ ಗೂಗಲ್ ಆಂಡ್ರಾಯ್ಡಾ ಆಪರೇಟಿಂಗ್ ಸಿಸ್ಟಂ ಮೂಲಕ ಮಾಡುವುದರಿಂದ ಇವು ಸ್ಮಾರ್ಟಪೋನ್ ಮತ್ತು ಟ್ಯಾಬ್ಲೆಟ್ ಮೂಲಕ ಅಳವಡಿಸಲಾಗುವುದು.

ಸಾಫ್ಟವೇರ್ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ  ನೆಟ್‌ಫ್ಲಿಕ್ಸ್, ಅಮೆಜಾನ್ ಕಂಪನಿಗಳು ಇದನ್ನು ತಯಾರಿಸುತ್ತಿವೆ. ನೆಟ್ ಫ್ಲಿಕ್ಸ್ ಈಗಾಗಲೇ  ಟಿವಿ ಸೆಟ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು. ಮುಂಬರುವ ದಿನಗಲ್ಲಿ ರಿಮೋಟ್ ಕಂಟ್ರೋಲ್ ಮೂಲಕ ಎಲ್ಲ ಕೆಲಸವನ್ನು ಇದು ಮಾಡಲಿದೆ.

ಟಿವಿ ಕಂಪನಿಗಳು ಈಗಾಗಲೇ  ಹಲವಾರು ಸಾಫ್ಟವೇರ್ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದು ಡಿಜಿಟಲ್ ಲಿವಿಂಗ್ ರೂಂ ಬರಲಿರುವ ಹೊಸ ತಂತ್ರಜ್ಞಾನ ತಯಾರಿಕೆಗೆ ಸಿದ್ಧತೆ ನಡೆಸಿವೆ. ಮೈಕ್ರೊಸಾಫ್ಟ್ ಸಾಫ್ಟವೇರ್ ವಿಡಿಯೊ  ಸರ್ವಿಸ್ ಅಳವಡಿಸಿದ್ದು ಇದರ ಮೂಲಕ ಮನೆಯಲ್ಲಿರುವ ಫೋನ್‌ಗಳ ಮೂಲಕ ಟಿವಿ ಸೆಟ್‌ಗೆ ಅಳವಡಿಸಲಾಗುವುದು.

ಆಂಡ್ರಾಯ್ಡಾ, ಅಲ್ಟಿಲಾಸ್ಟ್ ಸಾಫ್ಟವೇರ್ ಮುಖ್ಯವಾಗಿ ಸೋಷಿಯಲ್ ನೆಟ್‌ವರ್ಕ್‌ಗಳಾದ ಫೇಸ್ ಬುಕ್, ಟ್ವಿಟರ್, ಅಂಡ್ ಫೋರ್ ಸ್ಕ್ವೇರ್, ಇದರ ಮೂಲಕ ಟಿವಿಯೊಂದಿಗೆ ರೆಗ್ಯೂಲರ್ ರಿಮೋಟ್ ಕಂಟ್ರೋಲ್ ಮೂಲಕ ಮಾಹಿತಿ ಪಡೆಯಬಹುದು.

ಮೊಬೈಲ್ ಫೋನ್ ಆ್ಯಪ್ಸ್ ಫಪನ್ ಟೇಬಲ್‌ಗಳು ಈಗಾಗಲೇ ಹೋಟೆಲ್ ಕಾಯ್ದಿರಿಸುವುದು, ವಿವಿಧ ಆಟಗಳನ್ನು ಒಳಗೊಂಡ ಮಾಹಿತಿಯನ್ನು ಸ್ಯಾಮ್ಸಂಗ್ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈಗಾಗಲೇ ಇದೇ ರೀತಿಯ  ತಂತ್ರಜ್ಞಾನವನ್ನು ಮೈಕ್ರೊಸಾಫ್ಟ್, ಕ್ನಿಕ್ಟ್ ದಿ ಎಕ್ಸಬಾಕ್ಸ್, ಅ್ಯಡ್ ಆನ್ ದೆಟ್ ಅಳವಡಿಸುವ ಚಿಂತನೆ ನಡೆಸುತ್ತಿವೆ.

ಟ್ಯಾಬ್ಲೆಟ್ ಕಂಪ್ಯೂಟರ್ ಈಗಾಗಲೇ ಹೊಸ ರೀತಿಯ ಸ್ಮಾರ್ಟ್ ಟಿವಿ ಟಚ್‌ಸ್ಕ್ರಿನ್ ಮತ್ತು ಕೀಬೋರ್ಡ್ ರೀತಿಯಲ್ಲಿ ಕೆಲಸ ನಿರ್ವಹಿಸಲಿದ್ದು, ಕಾಂಕ್ಯಾಸ್ಟ್ ಈಗಾಗಲೇ ಐಪಾಡನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು ಮುಂಬರುವ ದಿನದಲ್ಲಿ ಟಿವಿ ಚಾನೆಲ್ ವಿಡಿಯೊ  ಮೂಲಕ ಬಿಡುಗಡೆಗೆ ಸಿದ್ದತೆ ನಡೆಸಿದೆ.

ಸ್ನೇಹಿತರೊಂದಿಗೆ ಮೇಲ್ ಚಾಟಿಂಗ್‌ನಲ್ಲಿ ತೊಡಗಿ ಕಂಪ್ಯೂಟರ್ ಮುಂದೆ ಕೂರುತ್ತಿದ್ದವರು ಇನ್ನು  ಮುಂದೆ ಮನರಂಜನೆಯ ಜೊತೆ ಸ್ನೇಹಿತ ರೊಂದಿಗೆ ಚಾಟಿಂಗ್ ಮೂಲಕ  ಕಾಲ ಕಳೆಯಲು ಡಿಜಿಟಲ್ ಲಿವಿಂಗ್ ರೂಂ ನೆಚ್ಚಿ ಕೂರುವಂತಾಗಬಹುದು.
(ವಿವಿಧ ಮೂಲಗಳಿಂದ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT