ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂಪ್ಲಿ ಸುತ್ತ ಸಂಪರ್ಕ ಕಡಿಯುವ ಭೀತಿ

Last Updated 3 ಸೆಪ್ಟೆಂಬರ್ 2011, 5:00 IST
ಅಕ್ಷರ ಗಾತ್ರ

ಹೊಸಪೇಟೆ: ತುಂಗಭದ್ರಾ ಜಲಾಶಯ ದಿಂದ ಅಪಾರ ಪ್ರಮಾಣದ ನೀರನ್ನು ಹೊರಬಿಟ್ಟ ಪರಿಣಾಮ ಐತಿಹಾಸಿ ಹಂಪಿಯ ಪುರಂದರ ಮಂಟಪ ಸೇರಿದಂತೆ ಅನೇಕ ಸ್ಮಾರಕಗಳು ಜಲಾವೃತವಾಗಿದ್ದು ನದಿ ಪಾತ್ರದ ಕಂಪ್ಲಿ ಸೇರಿದಂತೆ ಕೆಲ ಗ್ರಾಮಗಳು ಸಂಪರ್ಕ ಕಳೆದು ಕೊಳ್ಳುವ ಬೀತಿಯಲ್ಲಿವೆ.

ಶುಕ್ರವಾರ ಬೆಳಿಗ್ಗೆ 66 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಬಿಟ್ಟಿದ್ದು ಸಂಜೆ ವೇಳೆಗೆ ಈ ಪ್ರಮಾಣ ವೃದ್ಧಿಯಾಗಿದೆ. ಸಂಜೆ 6ಗಂಟೆಗೆ 93ಸಾವಿರ ಕ್ಯೂಸೆಕ್ ದಾಟಿದ್ದು ಪುರಂದರ ಮಂಟಪ, ಸೀತೆಯ ಸೆರಗು, ಚಕ್ರತೀರ್ಥದ ಬಳಿಯ ಪಾರ್ವತಿ ದೇವಾಲಯ, ಅನಂತಪದ್ಮನಾಭ ದೇವರು, ಲಕ್ಷ್ಮೀನರಸಿಂಹ ದೇವರ ಗುಡಿ, ಸಂಪೂರ್ಣ ಜಲಾವೃತವಾಗಿವೆ. ಕೋದಂಡ ರಾಮಸ್ವಾಮಿ ದೇವಸ್ಥಾನಕ್ಕೆ ಹೋಗುವ ಮಾರ್ಗ ಬಂದ್ ಆಗಿದ್ದು ಜನರು ಸುಳಿದಾಡದಂತೆ ತಡೆಯಲು ಪೊಲೀಸ ಭದ್ರತೆ ಒದಗಿಸಿದ್ದಾರೆ.

ಜಲಾಶಯದಿಂದ ನೀರು ಹೊರ ಬಿಡುತ್ತಿರುವಂತೆಯೇ ಹಂಪಿಯ ಅನೇಕ ಸ್ಮಾರಕಗಳು ಕ್ರಮೇಣ ಜಲಾವೃತವಾಗು ತ್ತಿದ್ದರೂ ಈ ಬಾರಿ ಆಗಷ್ಟ ಮೊದಲ ವಾರ, ಎರಡನೇವಾರ ಹಾಗೂ ಸೆಪ್ಟಂಬರ್ ಒಂದರಿಂದಲೆ ಮೂರನೇ ಬಾರಿಯು ತುಂಗಭದ್ರಾ ನದಿಯಲ್ಲಿ ಜಲ ಪ್ರವಾಹದ ಜೊತೆ ಸುಂದರ ಗುಡ್ಡ ಬೆಟ್ಟಗಳ ನಡುವೆ ರಮಣೀಯ ದೃಶ್ಯವೂ ಕಾಣಲು ಆರಂಭವಾಗಿದೆ.

ತುಂಗಾ ನದಿಯಿಂದ 55ಸಾವಿರ ಮತ್ತು ಭದ್ರಾ ನದಿಯಿಂದ 45 ಸಾವಿರ ಕ್ಯೂಸೆಕ್ ನೀರನ್ನು ಹೊರ ಬಿಡುತ್ತಿರು ವುದು ಒಂದಡೆಯಾದರೆ, ಜಲಾನಯನ ಪ್ರದೇಶಗಳಲ್ಲಿ ನಿರಂತರವಾಗಿ ಸುರಿಯು ತ್ತಿರುವ ಮಳೆ ನದಿಗೆ ಹೆಚ್ಚಿನ ನೀರು ಬರುವಂತೆ ಮಾಡಿದ್ದು ಈ ಪ್ರಮಾಣ ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ತುಂಗಭದ್ರಾ ಮಂಡಳಿಯ ಅಧಿಕಾರಿಗಳು ತಿಳಿಸಿದ್ದು ಸದ್ಯ 20 ಗೇಟ್‌ಗಳ ಮೂಲಕ 2.5 ಅಡಿ ಮತ್ತು 8 ಗೇಟ್‌ಗಳನ್ನು 1ಅಡಿಯಂತೆ ಮೇಲಕ್ಕೆತ್ತಿ 93ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಬಿಡ ಲಾಗುತ್ತಿದೆ. ಒಂದು ಲಕ್ಷ ಕ್ಯೂಸೆಕ್ ದಾಟಿದಲ್ಲಿ ಕಂಪ್ಲಿಯ ಕೋಟೆ ಪ್ರದೇಶವು ಜಲಾವೃತವಾಗುವ ಸಾಧ್ಯತೆಗಳಿದ್ದು ಈ ಬಾಗದ ಜನರಿಗೆ ಪುರ್ನ್‌ವಸತಿ ಕಲ್ಪಸಲು ಅಧಿಕಾರಿಗಳು ಸಿದ್ದತೆ ಮಾಡಿ ಕೊಂಡಿದ್ದಾರೆ. 

ಎಚ್ಚರಿಕೆ: ಹಂಪಿಯ ತುಂಗಭದ್ರ ನದಿಯಲ್ಲಿ ಪ್ರವಾಹ ಆರಂಭವಾಗಿರುವ ಕಾರಣ ಹಂಪಿಯಿಂದ-ವಿರೂಪಾಪುರ, ತಳವಾರ ಘಟ್ಟದಿಂದ-ಆನೆಗುಂದಿ ಮಾರ್ಗಗಳು ಕಡಿತವಾಗಿ ಪ್ರಯಾಣಿಕರು ಕಂಪ್ಲಿ ಗಂಗಾವತಿ ಅಥವಾ ಹುಲಿಗಿ ಅಗಳಕೇರ ಮಾರ್ಗವಾಗಿ ಪ್ರಯಾಣ ಮಾಡುವಂತಾಗಿದ್ದು ನದಿಯಲ್ಲಿ ಯಾವುದೇ ಕಾರಣಕ್ಕೂ ದೋಣಿಯನ್ನು ಹಾಕದಂತೆ ಉಪವಿಭಾಗಾಧಿಕಾರಿ ಕರೀಗೌಡ ಎಚ್ಚರಿಕೆ ನೀಡಿದ್ದು ದೋಣಿ ಪ್ರಯಾಣಕ್ಕೆ ನಿಷೇಧ ಹಾಕಿದ್ದಾರೆ. ಕಂಪ್ಲಿ ಮಾರ್ಗದ ಪರಿಸ್ಥಿತಿ ಅರಿಯಲು ಪೊಲೀಸ್ ಕಾವಲು ಹಾಕಲಾಗಿದೆ ಎಂದು ಕರೀಗೌಡ `ಪ್ರಜಾವಾಣಿ~ಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT