ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂಪ್ಲಿಯಲ್ಲಿ ನಿವೇಶನಕ್ಕಾಗಿ ಅನಿರ್ದಿಷ್ಟ ಧರಣಿ

Last Updated 4 ಅಕ್ಟೋಬರ್ 2012, 5:25 IST
ಅಕ್ಷರ ಗಾತ್ರ

ಕಂಪ್ಲಿ: ಶಿಬಿರದಿನ್ನಿ ಬಲಭಾಗದ ನಿವೇಶನಗಳಿಗಾಗಿ ಫಲಾನುಭವಿಗಳು ಹಣ ಪಾವತಿಸಿದ್ದರೂ ನಿವೇಶನ ನೀಡದ ಪುರಸಭೆ ಕ್ರಮವನ್ನು ಖಂಡಿಸಿ ಕಂಪ್ಲಿ ವಿಧಾನಸಭಾಕ್ಷೇತ್ರ ನಾಗರಿಕ ಹಿತರಕ್ಷಣಾ ಸಮಿತಿ ಪದಾಧಿಕಾರಿಗಳು ಮಂಗಳವಾರದಿಂದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಅನಿರ್ದಿಷ್ಟ ಅವಧಿಯವರೆಗೆ ಧರಣಿ ಆರಂಭಿಸಿದ್ದಾರೆ.

ಇದಕ್ಕೂ ಮುನ್ನ  ಸೋಮೇಶ್ವರ ದೇವಸ್ಥಾನದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಡಾ.ರಾಜ್‌ಕುಮಾರ್ ಮುಖ್ಯರಸ್ತೆ ಮೂಲಕ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಸಮಾವೇಶಗೊಂಡಿತು.

ಕಂಪ್ಲಿ ವಿಧಾನಸಭಾಕ್ಷೇತ್ರ ನಾಗರೀಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಮಾಜಿ ಶಾಸಕ ಎಚ್.ಡಿ. ಬಸವರಾಜ ಮಾತನಾಡಿ, 1988-89ರಲ್ಲಿ ಶಿಬಿರದಿನ್ನಿ ನಿವೇಶನ ಕ್ಕಾಗಿ ಅರ್ಜಿ ಸಲ್ಲಿಸಿ ರೂ.350 ಹಣ ಪಾವತಿಸಿರುವ 634 ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಮಾಡುವಂತೆ ಆಗ್ರಹಿಸಿದರು.

ಈ ವಿವಾದ ಕುರಿತಂತೆ ಉಪ ತಹಶೀಲ್ದಾರ ಕೆ. ಬಾಲಪ್ಪ ಮತ್ತು ಪುರಸಭೆ ಮುಖ್ಯಾಧಿಕಾರಿ ಎಚ್.ಎನ್. ಗುರುಪ್ರಸಾದ ಧರಣಿ ನಿರತ ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾಕಾರರ ಮನವೊಲಿಸಲು ಯತ್ನಿಸಿದರು. ಆದರೆ, ನಿವೇಶನ ನೀಡುವ ಕುರಿತಂತೆ ಸ್ಪಷ್ಟ ನಿರ್ಧಾರ ಪ್ರಕಟಗೊಳ್ಳದ ಹೊರತು ಧರಣಿ ಮುಂದುವರೆಸು ವುದಾಗಿ ಪ್ರತಿಭಟನಾಕಾರರು ಸ್ಪಷ್ಟಪಡಿಸಿದರು.

ಧರಣಿ ಸತ್ಯಾಗ್ರಹದಲ್ಲಿ ಕಂಪ್ಲಿ ವಿಧಾನಸಭಾ ಕ್ಷೇತ್ರ ನಾಗರಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಮಾಜಿ ಶಾಸಕ ಎಚ್.ಡಿ. ಬಸವರಾಜ, ಜಿ. ಲಿಂಗನಗೌಡ, ಜಿ. ರಾಜರಾವು, ಶ್ರೀಧರಶೆಟ್ಟಿ, ಎಂ. ಯಶೋದಮ್ಮ, ಸಣ್ಣ ಗವಿಸಿದ್ಧಪ್ಪ, ಗಾಳೆಪ್ಪ, ಶರ್ಮಾಸ್, ಜೆ. ಕೃಷ್ಣ, ಎಂ.ಎನ್. ಬಸಪ್ಪ, ವೆಂಕಟ ನಾಗು ಕಾಶೀರೆಡ್ಡಿ ಭೀಮನಗೌಡ, ಎಂ. ಗಾಳಿಮೂರ್ತಿ, ಬೂದುಗುಂಪಿ ಹುಸೇನ್ ಸಾಬ್, ಪಿ.ಎಸ್. ಬಸಪ್ಪ  ಪಿ. ಹನುಮಂತ ರಾಯ್ಡು ಇತರರು ಭಾಗವಹಿಸಿದ್ದರು.

ಮುಂದುವರಿದ ಧರಣಿ: ಶಿಬಿರದಿನ್ನಿ ಬಲಭಾಗದ ನಿವೇಶನಕ್ಕಾಗಿ ನಡೆಸುತ್ತಿರುವ ಧರಣಿ ಬುಧವಾರವೂ ಮುಂದುವರಿದಿದೆ.

ಅನಿರ್ಧಿಷ್ಟ ಧರಣಿಯಲ್ಲಿ ಸಮಿತಿ ಅಧ್ಯಕ್ಷ ಮಾಜಿ ಶಾಸಕ ಎಚ್.ಡಿ. ಬಸವರಾಜ ಸೇರಿದಂತೆ ಕಂಪ್ಲಿ ಕೋಟೆ ಸೂಗೂರು ಈರಣ್ಣ, ಕೊಂಡಿ ಬಸಪ್ಪ, ಫಕ್ರುದ್ದೀನ್, ಬಾರಿಕರ ಮಾರೆಣ್ಣ, ಬೆಂಡೆಕಾಯಿ ಈರಣ್ಣ, ಭದ್ರ, ಗಂಗಮ್ಮ, ಶಂಕ್ರಮ್ಮ, ಬಸಮ್ಮ, ಎಚ್. ಹನುಮಂತಪ್ಪ, ತಿಪ್ಪಮ್ಮ, ಹುಲುಗಪ್ಪ ಭಾಗವಹಿಸಿದ್ದರು. ನಾಗರಿಕ ಹಿತರಕ್ಷಣಾ ಸಮಿತಿ ಪದಾಧಿಕಾರಿಗಳು ಹಾಜರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT