ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂಪ್ಲಿಯಲ್ಲಿ ಬಲಿಜ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ

Last Updated 22 ಏಪ್ರಿಲ್ 2013, 5:46 IST
ಅಕ್ಷರ ಗಾತ್ರ

ಕಂಪ್ಲಿ: ಸ್ಥಳೀಯ ಮಾರುತಿನಗರದಲ್ಲಿ ಯೋಗಿ ನಾರೇಯಣ ಯತೀಂದ್ರರ ಬಲಿಜ ಭವನ ನಿರ್ಮಾಣಕ್ಕೆ ಭಾನುವಾರ ಶಂಕುಸ್ಥಾಪನೆ ನೆರವೇರಿಸಲಾಯಿತು.

ಬಲಿಜ ಸಮಾಜ ಸಂಸ್ಥಾಪಕ ಅಧ್ಯಕ್ಷ ಕೆ. ಶ್ರೀನಿವಾಸಪ್ಪ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ಸಮಾಜದವರ ಅನುಕೂಲಕ್ಕಾಗಿ ನಾರೇಯಣ ಯತೀಂದ್ರರ ದೇವಸ್ಥಾನ, ಸಮುದಾಯ ಭವನ, ಕಲ್ಯಾಣ ಮಂಟಪ ಹಾಗೂ ಶಿಕ್ಷಣ ಕೇಂದ್ರ ಹೊಂದುವ ಉದ್ದೇಶವಿದೆ. ಇದಕ್ಕೆ ಎಲ್ಲಾ ಸಮುದಾಯದವರ ಸಹಾಯ ಸಹಕಾರ ಅಗತ್ಯವಿದೆ ಎಂದು ಹೇಳಿದರು.

ಬಲಿಜ ಸಮಾಜದ ಮಾಜಿ ಅಧ್ಯಕ್ಷ ಡಿ. ಸೋಮನಾಥ ನಿವೇಶನ ದಾನವಾಗಿ ನೀಡಿದ್ದು, ಅವರ ಕುಟುಂಬದ ಸತೀಶ ಅವರನ್ನು ಸನ್ಮಾನಿಸಲಾಯಿತು.

ರಾಮಸಾಗರ ಬಲಿಜ ಸಮಾಜದ ಅಧ್ಯಕ್ಷ ಪಲ್ಲೇದ ವೀರೇಶ್, ಚಿನ್ನಾಪುರ ಯರಿಯಪ್ಪ, ಮೆಟ್ರಿ ಭೀಮಣ್ಣ,    ಬಲಿಜ ಸಮಾಜದ ಕಾರ್ಯದರ್ಶಿ ಕವಿತಾಳ ಬಸವ ರಾಜ, ಖಜಾಂಚಿ ಡಿ. ಸತೀಶ್, ಕೆ. ವಾಣಿದಾಸ್, ವೈ . ದೇವೇಂದ್ರಪ್ಪ, ಕೆ. ಅನಿಲ್, ಪಿ. ಈರಣ್ಣ, ಪಿ. ಮಹಾಬಲಿ, ಎಂ. ಚಿದಾನಂದಪ್ಪ, ಎಂ. ಮಲ್ಲಿಕಾರ್ಜುನ, ಕೆ. ಆಂಜನೇಯಲು, ಎಂ. ರಾಘವೇಂದ್ರ, ಇಂಗಳಗಿ ನಾರಾಯಣಪ್ಪ ವಿವಿಧ ಗ್ರಾಮಗಳ ಬಲಿಜ ಸಂಘದ ಪದಾಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT