ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಗ್ಗಲೀಪುರ ಗ್ರಾಮಕ್ಕೆ ಹದಗೆಟ್ಟ ರಸ್ತೆ

Last Updated 11 ಡಿಸೆಂಬರ್ 2013, 19:50 IST
ಅಕ್ಷರ ಗಾತ್ರ

ತಲಘಟ್ಟಪುರ: ಕಗ್ಗಲೀಪುರ ಗ್ರಾಮ ಪಂಚಾಯ್ತಿ ಸೇರಿದ ಉದ್ದಿಪಾಳ್ಯ ಗ್ರಾಮ­­ದಲ್ಲಿ ಒಳಚರಂಡಿ ವ್ಯವಸ್ಥೆ ಹದಗೆಟ್ಟಿರುವುದರಿಂದ ಮನೆಗಳಿಗೆ ನೀರು ನುಗ್ಗುತ್ತಿದ್ದು, ಜನರು ತೀವ್ರ ತೊಂದರೆ ಅನುಭವಿಸುವಂತಾಗಿದೆ.

ನಿಂತ ಚರಂಡಿ ನೀರಿನಿಂದ ನೊಣ, ಸೊಳ್ಳೆಗಳ ಹಾವಳಿ ಹೆಚ್ಚಾಗಿದ್ದು, ದುರ್ನಾತ ಬೀರುತ್ತಿದೆ ಎಂದು ಸ್ಥಳೀ­ಯರು ಬೇಸರ ವ್ಯಕ್ತಪಡಿಸಿದ್ದಾರೆ.

ಸಮರ್ಪಕ ರಸ್ತೆಗಳಿಲ್ಲ: ಅಲ್ಲದೇ ಕನಕ­ಪುರ ರಸ್ತೆಗೆ ಹೊಂದಿಕೊಂಡಿರುವ ಈ ಗ್ರಾಮದಲ್ಲಿ ಸಮರ್ಪಕವಾದ ರಸ್ತೆಗ­ಳಿಲ್ಲ. ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಅಭಿವೃದ್ದಿ ಕಾಮಗಾರಿಗಳು ಕುಂಠಿತ­ಗೊಂಡಿವೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.   ಉದ್ದಿನ­ಪಾಳ್ಯದ ಪೈಪ್ ಲೈನ್ ರಸ್ತೆಯಿಂದ ಜನ­ಪ್ರತಿನಿಧಿಗಳು,   ಶ್ರೀಮಂತರ ತೋಟಗ­ಳಿಗೆ ಸಂಚಾರ ನಡೆಸಲು ಸುಸಜ್ಜಿತವಾದ ರಸ್ತೆಗಳಿವೆ. ಆದರೆ,  ಸಾಮಾನ್ಯ ಜನರು ಸಂಚಾರ ನಡೆಸುವ ರಸ್ತೆಗಳು ಹಾಳಾಗಿವೆ ಎಂದು ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT