ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಟ್ಟಡದಿಂದ ಬಿದ್ದು ಇಬ್ಬರು ಕಾರ್ಮಿಕರ ಸಾವು

ಅಬ್ಬಿಗೆರೆ ಹಾಗೂ ಜೆ.ಪಿ. ನಗರದಲ್ಲಿ ದುರ್ಘಟನೆ
Last Updated 11 ಜನವರಿ 2014, 19:47 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಗಂಗಮ್ಮನಗುಡಿ ಮತ್ತು ಜೆ.ಪಿ.ನಗರದಲ್ಲಿ ಶನಿವಾರ ಸಂಭವಿಸಿದ ಪ್ರತ್ಯೇಕ ಪ್ರಕರಣಗಳಲ್ಲಿ ನಿರ್ಮಾಣ ಹಂತದ ಕಟ್ಟಡದಿಂದ ಬಿದ್ದು ಇಬ್ಬರು ಕೂಲಿ ಕಾರ್ಮಿಕರು ಮೃತ­ಪಟ್ಟಿದ್ದಾರೆ.

ಗಂಗಮ್ಮನಗುಡಿ ಸಮೀಪದ ಅಬ್ಬಿಗೆರೆ­ಯಲ್ಲಿ ಎಂ.ಎನ್‌.ಪಾಲಿಟೆಕ್ನಿಕ್‌ ಕಾಲೇ­­ಜಿನ ನಿರ್ಮಾಣ ಹಂತದ ಕಟ್ಟಡದಿಂದ ಬಿದ್ದು ರಾಮ (20) ಎಂಬ ಕಾರ್ಮಿಕ ಸಾವನ್ನಪ್ಪಿದ್ದಾರೆ.

ಮೂಲತಃ ಗುಲ್ಬರ್ಗದ ರಾಮ, ಅಣ್ಣಂದಿ­ರಾದ ರಂಗಪ್ಪ ಮತ್ತು ಮರಿಯಪ್ಪ ಅವರ ಜತೆ ನಾಲ್ಕು ವರ್ಷ­ಗಳ ಹಿಂದೆ ನಗರಕ್ಕೆ ಬಂದಿದ್ದರು. ಅಬ್ಬಿಗೆರೆ­ಯಲ್ಲೇ ಬಾಡಿಗೆ ಮನೆ ಪಡೆದು ವಾಸ ಮಾಡುತ್ತಿದ್ದ ಸಹೋದರರು, ಕೂಲಿ ಕೆಲಸಕ್ಕೆ ಹೋಗುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.

‘ಘಟನೆ ಸಂಬಂಧ ಕಟ್ಟಡದ ಗುತ್ತಿಗೆ­ದಾರ ಬ್ರಹ್ಮಾರೆಡ್ಡಿ, ಮೇಸ್ತ್ರಿ ಕಾಟಯ್ಯ ಹಾಗೂ ಕಾಲೇಜು ಆಡಳಿತ ಮಂಡಳಿ ವಿರುದ್ಧ ನಿರ್ಲಕ್ಷ್ಯ ಆರೋಪದಡಿ ಪ್ರಕ­­ರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಉತ್ತರ ವಿಭಾಗದ ಡಿಸಿಪಿ ಸಂದೀಪ್‌ ಪಾಟೀಲ್ ‘ಪ್ರಜಾವಾಣಿ’ಗೆ ತಿಳಿಸಿದರು.

ಜೆ.ಪಿ.ನಗರ: ನಿರ್ಮಾಣ ಹಂತದ ಕಟ್ಟ­ಡದ ನಾಲ್ಕನೇ ಮಹಡಿಯಲ್ಲಿ ಬಾರ್ ಬೆಂಡಿಗ್ ಕೆಲಸ ಮಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಕೆಳಗೆ ಬಿದ್ದು ಭೀಮಾ (35) ಎಂಬ ಕಾರ್ಮಿಕ ಮೃತಪಟ್ಟಿರುವ ಘಟನೆ ಜೆ.ಪಿ.ನಗರ ಏಳನೇ ಹಂತದ ಗುರು­ರಾಘವೇಂದ್ರ ಲೇಔಟ್‌ನಲ್ಲಿ ನಡೆದಿದೆ.

ಬನಶಂಕರಿ ಸಮೀಪದ ಭವಾನಿ­ನಗರ ನಿವಾಸಿಯಾದ ಭೀಮಾ, ಗುರು­ರಾಘ­ವೇಂದ್ರ ಲೇಔಟ್‌ನಲ್ಲಿ ನಾಲ್ಕು ಅಂತಸ್ತಿನ ವಾಣಿಜ್ಯ ಸಂಕೀರ್ಣ ನಿರ್ಮಿಸು­ತ್ತಿ­ರುವ ನಂಜುಂಡರಾಜು ಎಂಬುವರ ಬಳಿ ಕೆಲಸ ಮಾಡುತ್ತಿದ್ದರು. ಶನಿವಾರ ಮಧ್ಯಾಹ್ನ 3.30ರ ಸುಮಾರಿಗೆ
ಕಟ್ಟ­ಡದ ನಾಲ್ಕನೇ ಮಹಡಿಯಲ್ಲಿ ಕೆಲಸ ಮಾಡು­ತ್ತಿದ್ದ ವೇಳೆ ಭೀಮಾ, ಆಕಸ್ಮಿಕ­ವಾಗಿ ಕೆಳಗೆ ಬಿದ್ದಿ­ದ್ದಾರೆ. ತೀವ್ರ
ರಕ್ತಸ್ರಾವ­ವಾಗಿ ಗಾಯ­ಗೊಂಡ ಅವರು ಆಸ್ಪತ್ರೆಗೆ ಕೊಂಡೊ­ಯ್ಯುವಾಗ ಮಾರ್ಗಮಧ್ಯೆ ಮೃತ­ಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದರು. ಘಟನೆ ಕುರಿತು ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT