ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡತ ನಾಪತ್ತೆ: ಎರಡು ದಿನದೊಳಗೆ ತನಿಖೆಗೆ ಚಾಲನೆ

Last Updated 19 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಕಲ್ಲಿದ್ದಲು ಗಣಿ ಮಂಜೂರಾತಿಯ ನಾಪತ್ತೆಯಾಗಿ­ರುವ ಕಡತಗಳಿಗೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ಸಂಸ್ಥೆಯು (ಸಿಬಿಐ) ಎರಡು ದಿನಗಳೊಳಗೆ ಪ್ರಾಥ­­ಮಿಕ ತನಿಖೆ ಆರಂಭಿಸಲಿದೆ.

ಕಲ್ಲಿದ್ದಲು ಸಚಿವಾಲಯದ ಅಧಿಕಾರಿ­ಗಳೊಂದಿಗೆ ಹಗರಣದ ತನಿಖಾಧಿಕಾರಿ­ಗಳು ಬುಧವಾರ ಮಹತ್ವದ ಸಭೆ ನಡೆ­ಸಿದ ನಂತರ ಈ ತೀರ್ಮಾನ ತೆಗೆದು­ಕೊಳ್ಳಲಾಯಿತು.

ಕಲ್ಲಿದ್ದಲು ಗಣಿ ಮಂಜೂರಾತಿಗೆ ಸಂಬಂಧಿಸಿದ 15ರಿಂದ 18 ಕಡತಗಳು ನಾಪತ್ತೆಯಾಗಿವೆ, ಶೋಧನಾ ಸಮಿ­ತಿಯ ನಡಾವಳಿ­ಯನ್ನು ದಾಖಲಿಸಿದ ಕಡತವೂ ಇದರಲ್ಲಿ ಸೇರಿರುವ ವಿಷಯ ಸೇರಿದಂತೆ ಹಲವು ಸಂಗತಿಗಳು ಸಭೆಯಲ್ಲಿ ಪ್ರಸ್ತಾಪಕ್ಕೆ ಬಂದವು ಎಂದು ಉನ್ನತ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT