ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡಲ ಕಿನಾರೆಯ ಕಥಾನಕಗಳು

Last Updated 20 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

`ಗ್ರೇಟ್ ಓಷನ್ ರೋಡ್~ ಅಂದೊಡನೆ ಪ್ರವಾಸಪ್ರಿಯರ ಕಣ್ಣು ಅಗಲವಾದೀತು. ವಿಶ್ವದಲ್ಲೇ ಅತ್ಯದ್ಭುತ ಅನುಭೂತಿ ಕೊಡುವ ಕರಾವಳಿ ರಸ್ತೆಮಾರ್ಗ ಇದು. ಆಸ್ಟ್ರೇಲಿಯಾದ ಆಗ್ನೇಯ ಭಾಗದಲ್ಲಿ 273 ಕಿ.ಮೀ. ಉದ್ದವಿರುವ ಈ ರಸ್ತೆಯಲ್ಲಿ ಪಯಣ ಮಾಡಿದಷ್ಟೂ ಕಡಲ ಮಾತು ಕೇಳಿ ಬರುತ್ತದೆ.
 
ಹಿಂದೂಮಹಾಸಾಗರದ ದಿವ್ಯಾನುಭವ ಅದು. ಮೀನುಗಾರರ ಹಳ್ಳಿಗಳು, ಏಕಾಂತಕ್ಕೆ ಹೇಳಿ ಮಾಡಿಸಿದ ಕಡಲ ಕಿನಾರೆಗಳು, ಮಳೆ ಕಾಡುಗಳು, ಕೋಲಾ ಕರಡಿಗಳು ಹಾಗೂ ಕಾಂಗರೂಗಳ ನೆಲೆವೀಡಾಗಿರುವ ಸುಂದರ ಉದ್ಯಾನವನಗಳು ಎಲ್ಲವೂ ಒಂದಕ್ಕಿಂತ ಒಂದು ಸುಂದರ.

`ಟ್ವೆಲ್ವ್ ಅಪೋಸ್ಟಲ್ಸ್~ (ಅಪೋಸ್ಟಲ್ ಎಂದರೆ ಧರ್ಮ ಪ್ರವರ್ತಕ ಎಂದರ್ಥ. ಈ ಕಡಲತಟದ ಸುಣ್ಣಕಲ್ಲುಗಳು ಅಲೆಗಳ ಹೊಡೆತಕ್ಕೆ ಸಿಲುಕಿ ಧರ್ಮ ಪ್ರವರ್ತಕರ ಆಕಾರ ತಳೆದಿವೆ ಎಂಬ ಕಾರಣಕ್ಕೋ ಏನೋ ಸ್ಥಳೀಯರು ಸುಣ್ಣಕಲ್ಲುಗಳ ಆಕೃತಿಗಳನ್ನು `ಅಪೋಸ್ಟಲ್ಸ್~ ಎಂದು ಕರೆದಿದ್ದಾರೆ) ಇಲ್ಲಿನ ವಿಶೇಷ ಆಕರ್ಷಣೆ. 45 ಮೀಟರ್ ಎತ್ತರದ ಸ್ತಂಭಗಳು ಪೋರ್ಟ್ ಕ್ಯಾಂಬೆಲ್‌ನ ರಾಷ್ಟ್ರೀಯ ಉದ್ಯಾನವನದಲ್ಲಿವೆ.

ಕಡಲಕೊರೆತದಿಂದಾಗಿ ಇವು ಭಿನ್ನ ರೂಪು ತಳೆದಿವೆ. ಕೆಲವು ಶಿಖರಗಳನ್ನು ಅಲೆಗಳು ಕೊರೆದು ಗುಹೆಗಳು ಉಂಟಾಗಿ, ಕ್ರಮೇಣ ಅವುಗಳ ಮೇಲಿನ ಕಮಾನುಗಳು ಕುಸಿದು ಅವು ನೋಡಲು ಭಿನ್ನ ಆಕೃತಿಗಳಾಗಿ ಮಾರ್ಪಟ್ಟಿವೆ. ಅವನ್ನು `ಸೋ ಅಂಡ್ ಪಿಗ್ಲೆಟ್ಸ್~ (ಬಿತ್ತುವ ಬೀಜ ಹಾಗೂ ಮರಿಹಂದಿಗಳು) ಎನ್ನುತ್ತಾರೆ.
 
ಅವುಗಳ ಆಕಾರಕ್ಕೂ ಮರಿಹಂದಿಗಳಿಗೂ ಸಾಮ್ಯತೆ ಇರುವುದರಿಂದ ಹೀಗೆನ್ನಬಹುದೇನೋ. ಒಟ್ಟಿನಲ್ಲಿ `ಗ್ರೇಟ್ ಓಷನ್ ರೋಡ್~ ಹೆಸರಿಗೆ ತಕ್ಕಂಥದ್ದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT