ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡಲ್ಗಳ್ಳರಿಂದ ಐವರು ಭಾರತೀಯರ ಅಪಹರಣ

Last Updated 19 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಅಬುಜಾ (ಪಿಟಿಐ): ಜರ್ಮನಿಯ ತೈಲ ಟ್ಯಾಂಕರ್ ಮೇಲೆ ದಾಳಿ ಮಾಡಿದ ಕಡಲ್ಗಳ್ಳರು ಅದರಲ್ಲಿದ್ದ ಐವರು ಭಾರತೀಯ ಸಿಬ್ಬಂದಿಯನ್ನು ಅಪಹರಿಸಿರುವ ಘಟನೆ ನೈಜೀರಿಯಾ ಕರಾವಳಿಯಲ್ಲಿ ನಡೆದಿದೆ.

`ಮೆಡಾಲಿಯನ್ ಮರೈನ್'ಗೆ ಸೇರಿದ ಎಸ್‌ಪಿ ಬ್ರುಸೆಲ್ಸ್ ಟ್ಯಾಂಕರ್ ಮೇಲೆ ಸೋಮವಾರ ಕಡಲ್ಗಳ್ಳರು ದಾಳಿ ಮಾಡಿದ್ದು, ಅಲ್ಲಿಂದ ನಿರ್ಗಮಿಸುವಾಗ ಐವರು ಭಾರತೀಯರನ್ನು ಅಪಹರಿಸಿದ್ದಾರೆ.

`ಅಪಹೃತರ ಬಿಡುಗಡೆಗೆ ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡಲಾಗುವುದು. ತೈಲ ಸಾಗಿಸುವ ಹಡಗು ನಂತರ ಲಾಗೋಸ್ ಬಂದರಿಗೆ ಆಗಮಿಸಿದ್ದು, ಉಳಿದ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ' ಎಂದು `ಮೆಡಾಲಿಯನ್ ಮರೈನ್' ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ನೈಜೀರಿಯಾದಲ್ಲಿ, ಅದರಲ್ಲೂ ಪ್ರಮುಖವಾಗಿ ತೈಲ ಉತ್ಪಾದನಾ ವಲಯದಲ್ಲಿ ಕಡಲ್ಗಳ್ಳತನ ಹಾಗೂ ಕಳವು ನಿರಂತರವಾಗಿ ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT