ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡಿಮೆ ವೆಚ್ಚದಲ್ಲಿ ಶೀಘ್ರ ನ್ಯಾಯ: ದುರ್ಗಪ್ಪ

Last Updated 9 ಜನವರಿ 2014, 6:07 IST
ಅಕ್ಷರ ಗಾತ್ರ

ಗದಗ: ಗ್ರಾಹಕರಿಗೆ ಕಡಿಮೆ ವೆಚ್ಚದಲ್ಲಿ ಶೀಘ್ರ ನ್ಯಾಯ ಒದಗಿಸುವ ದೃಷ್ಟಿಯಿಂದ ರಾಷ್ಟ್ರೀಯ ಗ್ರಾಹಕ ಸಂರಕ್ಷಣಾ ಕಾಯ್ದೆ ಜಾರಿಯಲ್ಲಿದ್ದು,  ಜಿಲ್ಲಾ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಗ್ರಾಹಕ ನ್ಯಾಯಾಲಯ ಕಾರ್ಯ ನಿರ್ವಹಿಸುತ್ತಿದೆ ಎಂದು  ಜಿಲ್ಲಾ ಗ್ರಾಹಕ ವೇದಿಕೆ ಅಧ್ಯಕ್ಷ ಬಿ. ದುರ್ಗಪ್ಪ ತಿಳಿಸಿದರು. 

ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ಸಭಾ ಭವನದಲ್ಲಿ ಬುಧವಾರ ಕಾನೂನು ಮಾಪನ ಹಾಗೂ ಆಹಾರ ನಿಗಮ ಮತ್ತು ವಿವಿಧ ಎಲ್ಪಿಜಿ ಕಂಪನಿಗಳ ಸಹಯೋಗದಲ್ಲಿ ಏರ್ಪಡಿಸಲಾದ  ರಾಷ್ಟ್ರೀಯ ಗ್ರಾಹಕ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಹಕ ವೇದಿಕೆಗಳು ಆದೇಶಿಸುವ ಪರಿಹಾರ ವಿಳಂಬವಾದಲ್ಲಿ ಸಂಬಂಧಿತರಿಗೆ ಮೂರು ವರ್ಷಗಳ ಶಿಕ್ಷೆ ವಿಧಿಸುವ ಹಾಗೂ  ದಂಡ ವಿಧಿಸುವ ಅಧಿಕಾರ ಗ್ರಾಹಕ ನ್ಯಾಯಾಲಯಗಳಿಗೆ ಇದೆ.  ದೇಶದಲ್ಲಿ ಕಾನೂನುಗಳೂ ಸಾಕಷ್ಟಿವೆ .  ಆದರೆ ಆಚರಣೆ ಆಗುತ್ತಿಲ್ಲ. ಮೂಲಭೂತವಾಗಿ ಶಾಲಾ ಪಠ್ಯದಲ್ಲಿ ಮಕ್ಕಳಿಗೆ ಆರೋಗ್ಯ, ನೈತಿಕ ಮೌಲ್ಯ, ಪ್ರಾಮಾಣಿಕತೆ ಕುರಿತ ಕಲಿಕೆ ಇಲ್ಲದಿರುವುದು ಪರಿಸ್ಥಿತಿ ಇನ್ನಷ್ಟು ವಿಷಮವಾಗಲು ಕಾರಣವಾಗುತ್ತಿದೆ  ಎಂದು ಅಭಿಪ್ರಾಯಪಟ್ಟರು.

ಉಪನ್ಯಾಸ ನೀಡಿದ ನ್ಯಾಯವಾದಿ ಎಸ್.ಕೆ. ಪಾಟೀಲ, ಗ್ರಾಹಕರು ಹೆಚ್ಚಾಗಿ ಆಹಾರಕ್ಕೆ ಸಂಬಂಧಿತ ವಿಷಯಗಳ ಕುರಿತು ಶೋಷಣೆಗೆ ಒಳಗಾಗುತ್ತಾರೆ.  ಕಲಬೆರಕೆ, ತೂಕದಲ್ಲಿ ಮೋಸ, ಗುಣಮಟ್ಟದಲ್ಲಿ ವ್ಯತ್ಯಾಸ, ಪೊಟ್ಟಣಗಳ ಮೇಲೆ  ತಿಳಿಸಿದ ಅಂಶಗಳಂತೆ ಇರದಿರುವ ನ್ಯೂನತೆ ಕುರಿತ ಗ್ರಾಹಕರು ಪರಿಹಾರ  ಪಡೆಯಬೇಕು.

ಈ ಬಾರಿ ಗ್ರಾಹಕರಿಗೆ ಅಧಿಕಾರ ಎನ್ನುವ ಘೋಷವಾಕ್ಯ ಜಾರಿಯಾಗಲು ದಶಕಗಳೇ ಬೇಕಾಗಬಹುದು. ವಿದೇಶದಲ್ಲಿ  ಎಟಿಎಂ   ಸೇವಾ ನ್ಯಾನತೆಗೆ ಕೋಟಿಗಟ್ಟಲೆ ಪರಿಹಾರ ಪಡೆದ ಉದಾಹರಣೆ ಇವೆ. ಆದರೆ ದೇಶದಲ್ಲಿ ಕಬ್ಬು ಬೆಳೆಯುವ ರೈತ ಬರಿ ಕಬ್ಬಿಗಾಗಿ ಬೆಲೆ ಪಡೆಯಲು ಹೋರಾಡುವ ಸ್ಥಿತಿಗಳಿವೆ ಎಂದು ಪಾಟೀಲ ನುಡಿದರು.

ರ್ಮಿಕ ಅಧಿಕಾರಿ ಬಾಲಕೃಷ್ಣ ಮಾತನಾಡಿ, ಬೆಲೆಗೆ ತಕ್ಕ ಪದಾರ್ಥ ಅಥವಾ ಸೇವೆ ಇರಬೇಕು ಎನ್ನುವುದು ಗ್ರಾಹಕರ ಕಾಯ್ದೆ ಉದ್ದೇಶ.  ತೂಕದ ಯಂತ್ರಗಳು ಅಧುನಿಕವಾಗಿದ್ದರೂ ಗ್ರಾಹಕರು ಸದಾ ಜಾಗೃತೆಯಿಂದಿರಬೇಕು ಎಂದರು. ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಎಲ್.ಸಿ. ಲಿಂಬಯ್ಯಸ್ವಾಮಿಮಠ,  ಜಿಲ್ಲಾ ಗ್ರಾಹಕ ರಕ್ಷಣಾ ಪರಿಷತ್ತಿನ ಸದಸ್ಯ ಬಸವರಾಜ ಮಾತ­ನಾಡಿದರು.  ರಾಷ್ಟ್ರೀಯ ಗ್ರಾಹಕ ದಿನಾಚರಣೆ ಅಂಗವಾಗಿ ಶಾಲಾ ಕಾಲೇಜುಗಳಲ್ಲಿ ಆಯೋಜಿ­ಸಿದ್ದ ಭಾಷಣ, ಚರ್ಚೆ ಹಾಗೂ ಪ್ರಬಂಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ  ಬಹುಮಾನ ವಿತರಿಸಲಾಯಿತು.

ಗ್ರಾಹಕ ರಕ್ಷಣಾ ಪರಿಷತ್ ಸದಸ್ಯೆ  ಜಯಶ್ರೀ ಹಿರೇಮಠ, ಕಾನೂನು ಮಾಪನ ಇಲಾಖೆಯ ಅಧಿಕಾರಿ ಎನ್.ಬಿ. ಮಾರನಬಸರಿ ಹಾಜ­ರಿದ್ದರು.  ಆಹಾರ ಇಲಾಖೆ ಉಪನಿರ್ದೇಶಕ ಅಶೋಕ ಕಲಘಟಗಿ  ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT