ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡೂರು: ರಸ್ತೆ ಮರು ಡಾಂಬರೀಕರಣಕ್ಕೆ ಚಾಲನೆ

Last Updated 13 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಕಡೂರು: ಕೃಷಿ ಮಾರುಕಟ್ಟೆ ಮುಂಭಾಗದಿಂದ ಮತಿಘಟ್ಟವರೆಗಿನ 11 ಕಿ.ಮೀ. ಉದ್ದ ರಾಷ್ಟ್ರೀಯ ಹೆದ್ದಾರಿಯಲ್ಲಿ ಮರು ಡಾಂಬರೀಕರಣ ಕಾಮಗಾರಿಗೆ ಶಾಸಕ ವೈ.ಸಿ.ವಿಶ್ವನಾಥ್ ಗುರುವಾರ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ರಾಷ್ಟ್ರೀಯ ಹೆದ್ದಾರಿಯಲ್ಲಿ ಪಟ್ಟಣ ದಿಂದ ಮತಿಘಟ್ಟದವರೆಗಿನ ರಸ್ತೆ ಹದಗೆಟ್ಟಿದ್ದು, ವಾಹನ ಸಂಚಾರವೇ ಕಷ್ಟವಾಗಿದೆ. ಈ ರಸ್ತೆ ದುರಸ್ತಿಗೆ ರೂ. 2.30 ಕೋಟಿ ಹಣವೂ ಬಿಡುಗಡೆ ಯಾಗಿದ್ದು, ಮರು ಡಾಂಬರೀಕರಣ ನಡೆಯಲಿದೆ. ಕಾಮಗಾರಿ ಎರಡು ತಿಂಗಳಲ್ಲಿ ಪೂರ್ಣಗೊಳ್ಳಲಿದ್ದು, ಮೂರು ವರ್ಷಗಳವರೆಗೆ ರಸ್ತೆ ನಿರ್ವ ಹಣೆ ಜವಾಬ್ದಾರಿ ಗುತ್ತಿಗೆದಾರರದೇ ಆಗಿರುತ್ತದೆ ಎಂದರು.

ಕಳಪೆ ಕಾಮಗಾರಿ ನಡೆಯದಂತೆ ಕಾರ್ಯನಿರ್ವಹಿಸಬೇಕು ಎಂದು ಗುತ್ತಿಗೆದಾರರಿಗೆ ಸೂಚನೆ ನೀಡಿದರು. ಬಸವೇಶ್ವರ ವೃತ್ತದಿಂದ ಕನಕ ವೃತ್ತದವರೆಗೆ ರೂ. 4 ಕೋಟಿ ವೆಚ್ಚದಲ್ಲಿ ರಸ್ತೆ ನಿರ್ಮಾಣ ಕಾಮಗಾರಿ ನಡೆಯಲಿದೆ. ಪಟ್ಟಣದ ಕನಕ ವೃತ್ತದಿಂದ ಬಿಸಲೇಹಳ್ಳಿ ಗೇಟ್‌ವರೆಗಿನ ರಸ್ತೆ ದುರಸ್ತಿಗೆ ರೂ. 6 ಕೋಟಿ ಮಂಜೂರಾಗಿದ್ದು, ಕಾಮಗಾರಿಗೆ ನವೆಂಬರ್‌ನಲ್ಲಿ ಚಾಲನೆ ನೀಡಲಾಗುವುದು ಎಂದರು.

ಪುರಸಭೆ ಮುಖ್ಯಾಧಿಕಾರಿ ಮಂಜುನಾಥ್, ಎಂಜಿನಿಯರ್ ನಟೇಶ್, ಬಿಜೆಪಿ ಸ್ಥಳೀಯ ಮುಖಂಡರಾದ ಶಿವಶಂಕರ್, ಸೋಮಪ್ರಸಾದ್, ಸೋಮೇಶ್, ಕೃಷ್ಣಕುಮಾರ್, ಮಂಜುನಾಥ್, ಕರಿಬಡ್ಡೆ ಶ್ರೀನಿವಾಸ್, ಮಚ್ಚೇರಿ ಶ್ರೀನಿವಾಸ್, ಲೋಕೇಶ್, ಸುರೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT