ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡೆಗೂ ಮುಗುಳ್ನಗೆ ಬೀರಿದ ಡಿ.ಕೆ.ಶಿವಕುಮಾರ್

Last Updated 2 ಜನವರಿ 2014, 5:30 IST
ಅಕ್ಷರ ಗಾತ್ರ

ರಾಮನಗರ: ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಬಹುಮತ ಗಳಿಸಿದ ಕೂಡಲೇ ನಾನೂ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿ ಎಂದು ಹೇಳುವ ಮೂಲಕ ಎಲ್ಲರ ಹುಬ್ಬೇರಿ ಸಿದ್ದ ಕನಕಪುರದ ಶಾಸಕ ದೊಡ್ಡಾಲಹಳ್ಳಿ ಕೆಂಪೇ ಗೌಡರ ಪುತ್ರ ಶಿವಕುಮಾರ್‌ ರಾಜಕೀಯ ವಲಯ ದಲ್ಲಿ ಒಂದು ರೀತಿಯ ‘ಟಫ್‌’ ರಾಜಕಾರಣಿ ಎಂದೇ ಪರಿಚಿತರು.

ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಯಾಗಿದ್ದ ಶಿವಕುಮಾರ್‌ಗೆ ಸಿದ್ದರಾಮಯ್ಯನವರ ಸಂಪುಟದಲ್ಲಿ ಸಚಿವ ಸ್ಥಾನ ಪಡೆಯಲು ಬೇಕಾದ ಸಮಯ ಏಳು ತಿಂಗಳು. ಆರು ಬಾರಿ ಶಾಸಕರಾಗಿ ಆರಿಸಿ ಬಂದಿರುವ ಅವರು ಕಡೆಗೂ ರಾಜ್ಯ ಸರ್ಕಾರದ ಸಂಪುಟ ದರ್ಜೆ ಯ ಸಚಿವರಾಗಿ ಬುಧವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ.  

ಕನಕಪುರದ ಉಯ್ಯಂಬಳ್ಳಿ ಹೋಬಳಿ ದೊಡ್ಡ ಆಲಹಳ್ಳಿ ಗ್ರಾಮದ ಕೆಂಪೇಗೌಡ ಮತ್ತು ಗೌರಮ್ಮ ದಂಪತಿಗೆ 1961 ಮೇ 15ರಲ್ಲಿ ಜನಿಸಿದ ಡಿ.ಕೆ.ಶಿವ ಕುಮಾರ್ ಕನಕಪುರದ ಎಸ್‌.ಕರಿಯಪ್ಪನವರ ಗ್ರಾಮೀಣ ವಿದ್ಯಾಸಂಸ್ಥೆಯಲ್ಲಿ ಶಾಲಾ ಶಿಕ್ಷಣ, ಬೆಂಗಳೂರಿನಲ್ಲಿ ಸರ್ಕಾರಿ ಕಲಾ ಕಾಲೇಜಿನಲ್ಲಿ ಪದವಿ (ಬಿ.ಎ) ಪೂರೈಸಿದರು. ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಎಂ.ಎ (ರಾಜ್ಯಶಾಸ್ತ್ರ) ಪದವಿ ಯನ್ನು ಅವರು ಪಡೆದುಕೊಂಡಿದ್ದಾರೆ.

ಕೇವಲ 21 ವರ್ಷದವರಿದ್ದಾಗಲೇ ರಾಜಕೀಯ ಪ್ರವೇಶಿಸಿದ ಶಿವಕುಮಾರ್‌ ಪ್ರಥಮ ಬಾರಿಗೆ ತಾಲ್ಲೂಕು ವ್ಯವಸಾಯ ಉತ್ಪನ್ನ ಮಾರಾಟ ಸಹ ಕಾರ ಸಂಘದ ನಿರ್ದೇಶಕರಾಗುವ ಮೂಲಕ ರಾಜ ಕೀಯ ಜೀವನ ಆರಂಭಿಸಿದರು. ನಂತರ ಜಿಲ್ಲಾ ಪಂಚಾ ಯಿತಿ ಸದಸ್ಯ, ಶಾಸಕ, ಸಚಿವ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನಗಳಲ್ಲಿ ಸೇವೆ ಸಲ್ಲಿಸಿ ರುವರು.

1985ರಲ್ಲಿ ಜನತಾ ಪಕ್ಷದ ಎಚ್.ಡಿ ದೇವೇ ಗೌಡರ ವಿರುದ್ಧ ಸಾತನೂರು ಕ್ಷೇತ್ರದಿಂದ ವಿಧಾನ ಸಭಾ ಚುನಾವಣೆ ಎದುರಿಸಿದ ಶಿವ ಕುಮಾರ್‌ ಸೋಲು ಕಾಣಬೇಕಾಯಿತು. ಆನಂತರ ಅವರು 1987ರಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತಿ ಸದಸ್ಯರಾಗಿ ಆಯ್ಕೆಯಾದರು.

1989ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಾತ ನೂರು ಕ್ಷೇತ್ರದ ಚುನಾವಣೆಗೆ ಸ್ವರ್ಧಿಸಿ  (ಸುಮಾರು 12 ಸಾವಿರ ಮತಗಳ ಅಂತರದಿಂದ) ಗೆಲುವು ದಾಖಲಿಸುವ ಮೂಲಕ ಮೊದಲ ಬಾರಿಗೆ ವಿಧಾನ ಸಭೆ ಪ್ರವೇಶಿಸಿದರು. ನಂತರ 1994ರಲ್ಲಿ ಕಾಂಗ್ರೆಸ್ ಟಿಕೆಟ್ ಸಿಗದ ಕಾರಣ ಪಕ್ಷೇತರರಾಗಿ ಸ್ಪರ್ಧಿಸಿ 462 ಮತಗಳ ಅಂತರದಿಂದ ಗೆಲುವು ಪಡೆದು ಪುನ ರಾಯ್ಕೆ ಆದರು.

ಬಳಿಕ 1999 ರಲ್ಲಿ ಎಚ್‌.ಡಿ.ಕುಮಾರಸ್ವಾಮಿ ವಿರುದ್ಧ 13,600 ಮತಗಳ ಅಂತರದಲ್ಲಿ ಶಿವ ಕುಮಾರ್‌ ಜಯಗಳಿಸಿದರು. 2004ರಲ್ಲಿ (ಸುಮಾ ರು 13 ಸಾವಿರ) ಸಾತನೂರು ಕ್ಷೇತ್ರದಿಂದ ಶಾಸಕ ರಾಗಿ ಆರಿಸಿ ಬಂದರು. ಈ ನಡುವೆ ಕ್ಷೇತ್ರ ಪುನರ್‌ ವಿಂಗಡಣೆಯಿಂದಾಗಿ ಸಾತನೂರು ಕ್ಷೇತ್ರ ಕನಕಪುರ ಕ್ಷೇತ್ರದಲ್ಲಿ ವಿಲೀನವಾಯಿತು. 2008ರಲ್ಲಿ ಕನಕಪುರ ದಿಂದ ಸ್ಪರ್ಧಿಸಿದ ಶಿವಕುಮಾರ್‌  7,600 ಮತಗಳ ಅಂತರದಿಂದ ವಿಧಾನಸಭೆ ಪ್ರವೇಶಿಸಿದರು. 2013 ರಲ್ಲಿ ಜೆಡಿಎಸ್‌ನ ಪಿ.ಜಿ.ಆರ್.ಸಿಂಧ್ಯ ವಿರುದ್ಧ ಸುಮಾರು 31,487 ಮತಗಳ ಅಂತರದಲ್ಲಿ ಜಯ ಸಾಧಿಸಿದರು.

ಎಸ್.ಬಂಗಾರಪ್ಪ ಮತ್ತು ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ ಸಚಿವರಾಗಿ ಸೇವೆ ಸಲ್ಲಿಸಿ ರುವ ಶಿವಕುಮಾರ್‌ ಅವರು,  ಬಂದಿೀಖಾನೆ, ಸಹ ಕಾರ, ನಗರಾಭಿವೃದ್ಧಿ ಸಚಿವರಾಗಿ ಆಡಳಿತ ನಡೆಸಿ ದ್ದಾರೆ.  1985ರಿಂದ 2001ರವರೆಗೆ ಕೆಪಿಸಿಸಿ ಕಾರ್ಯಾ ದರ್ಶಿ, ಉಳಿದಂತೆ 2001ರಲ್ಲಿ ಎಐಸಿಸಿ ಸದಸ್ಯ, 2008ರಿಂದ 2010ರವರೆಗೆ ಕೆಪಿಸಿಸಿ ಕಾರ್ಯಾ ಧ್ಯಕ್ಷರಾಗಿದ್ದರು. ಅಲ್ಲದೆ 2013ರ ವಿಧಾನ ಸಭಾ ಚುನಾವಣೆಯ ಕೆಪಿಸಿಸಿ ಚುನಾವಣಾ ಪ್ರಚಾರ ಸಮಿತಿಯ ಸಹ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿ ಸಿದ ಅನುಭವ ಇದೆ. ಇದೀಗ ಸಿದ್ದ ರಾಮಯ್ಯ ಅವರ ಸಂಪುಟದಲ್ಲಿ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT