ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡೆಯ ಸೋಮವಾರಕ್ಕೆ ಭಕ್ತಿಯ ನಮನ

ಭಕ್ತಸಾಗರದಲ್ಲಿ ಮಿಂದ ಕಾರ್ತೀಕ ಮಾಸ: ಅಂತರಗಂಗೆ ಬೆಟ್ಟದಲ್ಲಿ ಜಾತ್ರೆ
Last Updated 3 ಡಿಸೆಂಬರ್ 2013, 6:12 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲೆಯ ಎಲ್ಲ ಶಿವ ದೇವಾಲಯಗಳಲ್ಲಿ ಕಾರ್ತೀಕ ಮಾಸದ ಕಡೆಯ ಸೋಮವಾರದ ಪ್ರಯುಕ್ತ ವಿಶೇಷ ಪೂಜೆಗಳು ನಡೆದವು. ನಗರದ ಹೊರವಲಯದಲ್ಲಿರುವ ಅಂತರಗಂಗೆ ಬೆಟ್ಟದಲ್ಲಿ ಕಾಶಿ ವಿಶ್ವೇಶ್ವರ ದೇವಾ­ಲಯದಲ್ಲಿ ನಡೆದ ವಿಶೇಷ ಪೂಜೆ ಮತ್ತು ಜಾತ್ರೆಗೆ ಜಿಲ್ಲೆಯ ಎಲ್ಲೆಡೆ­ಯಿಂದ ಭಕ್ತರು ಸಾಗರೋಪಾದಿಯಲ್ಲಿ ಬಂದರು. ನಗರದ ಅಂತರಗಂಗೆ ರಸ್ತೆಯು ಸೋಮವಾರ ಬೆಳಿಗ್ಗೆಯಿಂದ ರಾತ್ರಿವರೆಗೂ ಭಕ್ತರಿಂದ ತುಂಬಿ­ಹೋಗಿತ್ತು.

ಬೆಟ್ಟದಲ್ಲಿರುವ ವಿಶ್ವೇಶ್ವರಯ್ಯ ದೇವಾಲಯ, ಪಂಚಲಿಂಗಗಳಿಗೆ ವಿಶೇಷ ಅಲಂಕಾರ, ಪೂಜೆಯ ವ್ಯವಸ್ಥೆ ಮಾಡ­ಲಾಗಿತ್ತು. ದೇವಾಲಯದ ಹೊರ ಆವರಣದಲ್ಲಿರುವ ಬಸವನ ಮಂಟಪ, ಗಣೇಶ ಗುಡಿಗಳಲ್ಲೂ ನೂರಾರು ಭಕ್ತರು ಪೂಜೆ ಸಲ್ಲಿಸಿದರು. ಜಿಲ್ಲೆಯ­ವರಷ್ಟೇ ಅಲ್ಲದೆ, ನೆರೆಯ ಆಂಧ್ರಪ್ರದೇಶ ಮತ್ತು ತಮಿಳುನಾಡಿನ ಭಕ್ತರೂ ಭೇಟಿ ನೀಡಿದ್ದರು.

ಉಚಿತ ಬಸ್ ವ್ಯವಸ್ಥೆ: ಅಂತರಗಂಗೆಯ ಕಾಶಿ ವಿಶ್ವೇಶ್ವರ ಸ್ವಾಮಿ ಸನ್ನಿಧಿಗೆ ಹೋಗಿ ಬರಲು ಬಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್ ವತಿಯಿಂದ ಆಯೋ­ಜಿ­ಸಿದ್ದ ಉಚಿತ ವಾಹನ ವ್ಯವಸ್ಥೆಗೆ ಮುಖಂಡ ಡಿ.ಆರ್.ನಾಗರಾಜ್ ಚಾಲನೆ ನೀಡಿದರು. ಬಾಲಾಜಿ, ಜಿಲ್ಲಾ ಸಂಚಾಲಕ ಬಾಬು, ಅಪ್ಪಿಆನಂದ್, ಕೆ.ಎಸ್.ರಾಜೇಂದ್ರ, ವಿಶ್ವನಾಥ್, ರವಿ, ಚಿನ್ನಪ್ಪಿ, ಅಮರ್, ಲೋಕೇಶ್, ಜಗ್ಗ, ಭರತ್, ಶಿವರಾಜ್, ಮುರಳಿ, ನವೀನ್,­ರಾಜೇಶ್, ಚಂದ್ರ, ನರೇಶ್,ಶ್ರೀಧರ್, ರೆಡ್ಡಿ, ಶಬರೀಷ್, ಕೆಂಬೋಡಿ ನಾರಾ­ಯ­ಣಸ್ವಾಮಿ ಉಪಸ್ಥಿತರಿದ್ದರು. 25 ಟೆಂಪೋ ಮತ್ತು ಬಸ್ಸುಗಳಲ್ಲಿ ಭಕ್ತರು ಸಂಚರಿಸಿದರು.

ವಾಹನ ಸೌಕರ್ಯದ ಆರಂಭದ ಸ್ಥಳ­ವಾದ ಹೊಸ ಬಸ್ ನಿಲ್ದಾಣ ವೃತ್ತ­ದಲ್ಲಿ ಕೇಸರಿ ಬಾವುಟಗಳನ್ನು ಹಾಕ­ಲಾಗಿತ್ತು.
ನಗರದ ದೊಡ್ಡಪೇಟೆಯ ನಂಜುಂಡೇ­ಶ್ವರ ದೇವಾಲಯ, ಕೋಟೆ ಬಡಾವಣೆಯಲ್ಲಿರುವ ನಂಜುಂಡೇಶ್ವರ ದೇವಾಲಯ, ಕಾಳಮ್ಮ ಗುಡಿ ಬೀದಿಯ­-ಲ್ಲಿರುವ ಕಮ್ಮಟೇಶ್ವರ ದೇವಾಲಯ, ಶಿವಗಿರಿ ಮಠದಲ್ಲಿ ವಿಶೇಷ ಅಲಂಕಾರ, ಪೂಜೆಯನ್ನು ಏರ್ಪಡಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT