ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಣ್ಣಿನ ಪೊರೆ ಸಮಸ್ಯೆಗೆ ಔಷಧ

Last Updated 14 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಮೆಲ್ಬರ್ನ್ (ಪಿಟಿಐ): ಕಣ್ಣಿನ ಪೊರೆಯಿಂದಾಗಿ ಬಾಧಿಸುವ ಅಂಧತ್ವಕ್ಕೆ  ಇದೇ ಮೊದಲ ಬಾರಿಗೆ ಔಷಧ ಕಂಡು ಹಿಡಿದಿರುವುದಾಗಿ ಆಸ್ಟ್ರೇಲಿಯಾ ವಿಜ್ಞಾನಿಗಳು ಹೇಳಿಕೊಂಡಿದ್ದಾರೆ.

ಅಡಿಲೇಡ್ ವಿಶ್ವವಿದ್ಯಾಲಯದ ಸಂಶೋಧಕರು ಈ ರೀತಿ ಹೇಳಿಕೊಂಡಿದ್ದು, ಈ ಔಷಧದಿಂದ ಶಸ್ತ್ರ ಚಿಕಿತ್ಸೆ ನಡೆಸದೇ ಕಣ್ಣಿನ ಪೊರೆಯ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
ಕಣ್ಣಿನ ಪೊರೆಗೆ ಪ್ರಮುಖ ಕಾರಣ ಕಾಲ್‌ಪೈನ್ ಎಂಬ ಪ್ರೊಟೀನ್. ಇದು  ಕಣ್ಣಿನ ಮಸೂರದ ಮೇಲೆ ಆವರಿಸುವುದರಿಂದ ದೃಷ್ಟಿ ದೋಷ ಕಾಣಿಸುತ್ತದೆ.

ಪ್ರಸ್ತುತ ಈ ಸಮಸ್ಯೆಯ ಪರಿಹಾರಕ್ಕೆ ಶಸ್ತ್ರಚಿಕಿತ್ಸೆಯನ್ನೇ ಅವಲಂಬಿಸಲಾಗುತ್ತಿದೆ. ಶಸ್ತ್ರಕ್ರಿಯೆ ನಡೆಸಿ ಪೊರೆ ಆವರಿಸಿರುವ ಕಣ್ಣಿನ ಮಸೂರವನ್ನು ತೆಗೆದು ಅದರ ಜಾಗದಲ್ಲಿ ಕೃತಕ ಮಸೂರವನ್ನು ಅಳವಡಿಸಲಾಗುತ್ತದೆ.
ಈ ಹೊಸ ಔಷಧವನ್ನು ಕಾಲ್‌ಪೈನ್ ಚಿಕಿತ್ಸಾಶಾಸ್ತ್ರದ ನೆರವಿನೊಂದಿಗೆ ತಯಾರಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT