ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಣ್ಮನ ಸೆಳೆಯುವ ರಾಖಿಗಳ ಸರಮಾಲೆ!

Last Updated 30 ಜುಲೈ 2012, 7:45 IST
ಅಕ್ಷರ ಗಾತ್ರ

ಬೆಳಗಾವಿ: ಚಿತ್ತಾಕರ್ಷಕ ಬಣ್ಣ, ವೈವಿಧ್ಯಮಯ ವಿನ್ಯಾಸ, ಒಂದಕ್ಕಿಂತ ಒಂದು ಸುಂದರವಾಗಿ ಕಾಣುತ್ತಿರುವ `ರಾಖಿ~ಗಳ ಸರಮಾಲೆ ಹೆಣ್ಣು ಮಕ್ಕಳ ಕಣ್ಮನ ಸೆಳೆಯುತ್ತಿವೆ.

ನಗರದ ಮಾರ್ಕೆಟ್‌ನಲ್ಲೆಗ ಅಂಗ ಡಿಗಳ ಎದುರು ತೋರಣದಂತೆ ಕಂಗೊ ಳಿಸುತ್ತಿರುವ ಬಗೆ ಬಗೆಯ `ರಾಖಿ~ಗಳ ಸರಮಾಲೆಗಳು `ರಕ್ಷಾ ಬಂಧನ~ ಹಬ್ಬದ ಆಗಮನವನ್ನು ಸಾರಿ ಹೇಳು ತ್ತಿವೆ. ರಸ್ತೆಯಲ್ಲಿ ಹೆಜ್ಜೆ ಹಾಕುತ್ತಿರುವ ಹೆಣ್ಣು ಮಕ್ಕಳು, ಮಹಿಳೆಯರನ್ನು ಕೈಬೀಸಿ ಕರೆಯುತ್ತಿವೆ.

ಹಿಂದೂ ಧರ್ಮದ ಪವಿತ್ರ ಶ್ರಾವಣ ಮಾಸದ ಹುಣ್ಣಿಮೆಯ ದಿನದಂದು ಪಾತಾಳದ ಬಲಿ ಚಕ್ರವರ್ತಿಯ ಕೈಗೆ ಲಕ್ಷ್ಮೀಯು `ರಕ್ಷಾಬಂಧನ~ (ರಾಖಿ) ವನ್ನು ಕಟ್ಟಿ ಸಹೋದರನನ್ನಾಗಿ ಮಾಡಿ ಕೊಳ್ಳುವ ಮೂಲಕ ತನ್ನ ಪತಿ ನಾರಾ ಯಣನನ್ನು ಮುಕ್ತಗೊಳಿಸಿದ ಹಿನ್ನೆಲೆ ಯಲ್ಲಿ ಪ್ರತಿ ವರ್ಷವೂ ರಕ್ಷಾ ಬಂಧನ ವನ್ನು ಆಚರಿಸಲಾಗುತ್ತಿದೆ ಎಂಬ ಉಲ್ಲೇಖ ಪುರಾಣದಲ್ಲಿದೆ. ಸಹೋದ ರನ ಏಳ್ಗೆಯಾಗಿ, ಸಹೋದರಿಯ ರಕ್ಷಣೆ ಮಾಡಬೇಕು ಎಂಬ ಉದ್ದೇಶ ದಿಂದ ಸಹೋದರಿಯು ಸಹೋದರನ ಕೈಗೆ ರಾಖಿಯನ್ನು ಕಟ್ಟಲಾಗುತ್ತದೆ.

ಈ ವರ್ಷ ಆಗಸ್ಟ್ 2ರಂದು `ರಕ್ಷಾ ಬಂಧನ~ವನ್ನು ಆಚರಿಸಲಾಗುತ್ತಿದ್ದು, ನಗರದಲ್ಲಿ ಈಗಾಗಲೇ ರಾಖಿ ಖರೀದಿಯ ಭರಾಟೆ ಆರಂಭವಾಗಿದೆ. ಮಾರುತಿ ಗಲ್ಲಿ, ಗಣಪತಿ ಗಲ್ಲಿ ಸೇರಿದಂತೆ ನಗರದ ಮಾರುಕಟ್ಟೆಯ ಪ್ರಮುಖ ರಸ್ತೆಗಳ ಫ್ಯಾನ್ಸಿ ಅಂಗಡಿಗಳಲ್ಲೆಗ `ರಾಖಿ~ಗಳದ್ದೇ ಪಿಸುಮಾತು! ಗೆಳತಿಯ ರೊಂದಿಗೆ ಅಂಗಡಿಗಳಿಗೆ ಆಗಮಿಸುತ್ತಿ ರುವ ಹೆಣ್ಣು ಮಕ್ಕಳು, `ಈ ರಾಖಿ ಹೇಗಿದೆ? ಇದು ನನ್ನ ಅಣ್ಣನಿಗೆ ಹೇಗೆ ಕಾಣಬಹುದು?~ ಎಂದು ಪರಸ್ಪರ ಸಮಾಲೋಚಿಸುತ್ತಿರುವ ದೃಶ್ಯ ಸಾಮಾ ನ್ಯವಾಗಿದೆ. ಐದು ರೂಪಾಯಿಯಿಂದ ಹಿಡಿದು 150 ರೂಪಾಯಿ ವರೆಗಿನ ವೈವಿಧ್ಯಮಯ ವಿನ್ಯಾಸದ ರಾಖಿಗಳು ಮಾರು ಕಟ್ಟೆಯಲ್ಲೆಗ ಲಭ್ಯ.
 
ಗುಜ ರಾತಿ, ರಾಜಸ್ತಾನ ಮಾದರಿಯ ವಿಶೇಷ ರಾಖಿಗಳು, ಕಲ್ಲು ಸಕ್ಕರೆ, ಅಕ್ಕಿ, ಕುಂಕುಮ ಒಳಗೊಂಡಿರುವ ರಕ್ಷಾ ಬಂಧನದ ಪೂಜಾ ಹರಿವಾಣ, ವಿವಿಧ ಬಗೆಯ ರಕ್ಷಾ ಬಂಧನದ ಗ್ರೀಟಿಂಗ್ಸ್ ಫ್ಯಾನ್ಸಿ ಅಂಗಡಿಗಳಲ್ಲಿ ಗಮನ ಸೆಳೆಯು ತ್ತಿವೆ. “ರಾಖಿಯು ಒಂದಕ್ಕಿಂತ ಒಂದು ವಿಭಿನ್ನವಾಗಿದೆ. ಇಷ್ಟೊಂದು ಬಗೆಯ ರಾಖಿಗಳು ಇರುವುದರಿಂದ ಯಾವು ದನ್ನು ಆಯ್ಕೆ ಮಾಡಬೇಕು ಎಂಬ ಗೊಂದಲ ಮೂಡುತ್ತದೆ. ಯಾವ ಅಂಗಡಿಗೆ ಹೋಗಬೇಕು ಎಂಬುದೇ ತಿಳಿ ಯದಷ್ಟು ವೈವಿಧ್ಯ ಮಯ ರಾಖಿಗಳು ಮಾರುಕಟ್ಟೆಗೆ ಬಂದಿವೆ” ಎನ್ನುತ್ತಾರೆ ಬೆಳಗಾವಿಯ ಸುನೀತಾ ಪಾಟೀಲ.

ಪುಟಾಣಿಗಳ ರಾಖಿ: ಮೂರ‌್ನಾಲ್ಕು ವರ್ಷದೊಳಗಿನ ಮಕ್ಕಳಿಗಾಗಿಯೇ ವಿಶೇಷವಾಗಿ ಸಿದ್ಧಪಡಿಸಿರುವ ಪುಟಾ ಣಿಗಳ ರಾಖಿಯೂ ಮಾರುಕಟ್ಟೆಯಲ್ಲಿ ರಾರಾಜಿಸುತ್ತಿವೆ.  ಬಾಲ ಗಣೇಶ, ಬಾಲ ಹನು ಮಾನ್, ಸ್ಪೈಡರ್‌ಮ್ಯಾನ್ ಸೇರಿದಂತೆ ಕಾರ್ಟೂನ್ ಹೀರೋಗಳ ಚಿತ್ರಗಳಿರುವ ರಾಖಿಗಳನ್ನು ಮಕ್ಕಳು ಖುಷಿಯಿಂದ ತೆಗೆದುಕೊಂಡು ಹೋಗು ತ್ತಿದ್ದಾರೆ.

ಲಕ್ಷಾಂತರ ರೂಪಾಯಿ ವಹಿವಾಟು:
“ರಕ್ಷಾಬಂಧನ ದಿನದ ಒಂದು ತಿಂಗಳ ಮೊದಲಿನಿಂದಲೇ ನಾವು ಮುಂ ಬೈನಿಂದ ರಾಖಿ ತರಿಸಲು ಆರಂಭಿ ಸುತ್ತೇವೆ. ಸುಮಾರು 40 ಸಾವಿರ ರಾಖಿ ಗಳನ್ನು ನಾವು ಮಾರುತ್ತೇವೆ. ಮಾರುತಿ ಗಲ್ಲಿ ಯೊಂದ ರಲ್ಲೇ ಸುಮಾರು 30 ಫ್ಯಾನ್ಸಿ ಅಂಗಡಿ ಗಳಲ್ಲಿ ದೊಡ್ಡ ಪ್ರಮಾ ಣದಲ್ಲಿ ರಾಖಿ ಮಾರಾಟ ಮಾಡಲಾ ಗುತ್ತದೆ. ಈ ತಿಂಗ ಳಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ರಾಖಿಗಳ ವಹಿವಾಟು ನಗರದಲ್ಲಿ ನಡೆಯುತ್ತದೆ” ಎಂದು ಮಾರುತಿ ಗಲ್ಲಿ ಫ್ಯಾನ್ಸಿ ಅಂಗಡಿ ಮಾಲೀಕ ಗಿರೀಶ ಪೋರವಾಲ್‌`ಪ್ರಜಾವಾಣಿ~ಗೆ ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT