ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಣ್ಮರೆಯಾದ ವಿಮಾನ ಇಂಡೊನೇಷ್ಯಾದಲ್ಲಿ ಪತ್ತೆ

Last Updated 10 ಮೇ 2012, 5:35 IST
ಅಕ್ಷರ ಗಾತ್ರ

ಜರ್ಕಾತ (ಐಎಎನ್‌ಎಸ್): ಬುಧವಾರ ಕಣ್ಮರೆಯಾಗಿದ್ದ ಸುಖೋಯ್ ಸೂಪರ್ ಜೆಟ್ -100 ವಿಮಾನವು ರಕ್ಷಣಾ ಕಾರ್ಯಾಚರಣೆಯ ತಂಡದದವರಿಗೆ ಗುರುವಾರ ಮುಂಜಾನೆ ಇಂಡೊನೇಷ್ಯಾದ ಪಶ್ಚಿಮ ಜಾವಾದಲ್ಲಿನ ಪರ್ವತವೊಂದರ ಇಳಿಜಾರಿನಲ್ಲಿ ಪತ್ತೆಯಾಗಿದೆ.

`ವಿಮಾನ ಪತ್ತೆಗಾಗಿ ರಕ್ಷಣಾ ಕಾರ್ಯಾಚರಣೆ ತಂಡದವರು ಹಾರಾಟ ನಡೆಸುತ್ತಿದ್ದ ವೇಳೆ ಸಲಾಕ್ ಪರ್ವತದ ಇಳಿಜಾರಿನಲ್ಲಿ ಅಪಘಾತಕ್ಕಿಡಾದ ವಿಮಾನ ಕಂಡಿದೆ. ಆದರೆ ನಾವು ಇನ್ನು ಆ ಸ್ಥಳವನ್ನು ತಲುಪಿಲ್ಲ~ಎಂದು ತಿಳಿಸಿರುವ ರಾಷ್ಟ್ರೀಯ ಶೋಧನೆ ಮತ್ತು ರಕ್ಷಣಾ ಸಂಸ್ಥೆಯ ವಕ್ತಾರರು, ಅಪಘಾತಕ್ಕಿಡಾದ ವಿಮಾನ ಹಾಗೂ ಅದರಲ್ಲಿನ ಪ್ರಯಾಣಿಕರ ಸ್ಥಿತಿಯನ್ನು ಕುರಿತಂತೆ ಹೆಚ್ಚಿನ ಮಾಹಿತಿ ನೀಡಿಲ್ಲ.

ಬುಧವಾರ ಸ್ಥಳೀಯ ಕಾಲಮಾನ ಮಧ್ಯಾಹ್ನ ಎರಡು ಗಂಟೆಗೆ ಜಕಾರ್ತದ ಪೂರ್ವಕ್ಕಿರುವ ಹಲೀಂ ಪೆರ್ಡಾನಕುಸುಮ ವಿಮಾನ ನಿಲ್ದಾಣದಿಂದ ಐವತ್ತು ಜನರನ್ನು ಹೊತ್ತು ಪ್ರಯಾಣ ಆರಂಭಿಸಿದ ಈ ಪ್ರಾತ್ಯಕ್ಷಿಕೆ ವಿಮಾನವು  ಐವತ್ತು ನಿಮಿಷಗಳ ಅಂತರದಲ್ಲಿ ಜಕಾರ್ತದ ದಕ್ಷಿಣಕ್ಕಿರುವ ಬೆಟ್ಟಗುಡ್ಡ ಪ್ರದೇಶಗಳಲ್ಲಿ ಕಣ್ಮರೆಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT