ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಣ್ಮುಚ್ಚಿಕೊಂಡಿರಲಾಗದು: ಒಬಾಮ

Last Updated 7 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ವಾಷಿಂಗ್ಟನ್ (ಪಿಟಿಐ/ಐಎಎನ್‌ಎಸ್ ): ಹಿಂಸಾಪೀಡಿತ ಸಿರಿಯಾದಲ್ಲಿ ಮುಗ್ಧ ಜನರ ಮೇಲೆ ರಾಸಾಯನಿಕ ಅಸ್ತ್ರಗಳನ್ನು ಬಳಸಿ ನರಮೇಧ ಮಾಡುತ್ತಿರುವಾಗ ನಾವು ಕಣ್ಮುಚ್ಚಿ ಕುಳಿತುಕೊಳ್ಳಲು ಸಾಧ್ಯವಿಲ್ಲ ಎಂದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಶನಿವಾರ ತಮ್ಮ ವಾರಾಂತ್ಯದ ಭಾಷಣದಲ್ಲಿ ಎಚ್ಚರಿಕೆ ನೀಡಿದ್ದಾರೆ.

ಬೆಂಬಲವಿಲ್ಲ: ಸಿರಿಯಾ ಮೇಲೆ ನಡೆಸಲು ಉದ್ದೇಶಿಸಿರುವ ಸೇನಾ ದಾಳಿಗೆ ಜಿ-20  ಶೃಂಗಸಭೆಯಲ್ಲಿ ಬೆಂಬಲ ಪಡೆಯುವಲ್ಲಿ ವಿಫಲರಾಗಿರುವ ಅಮೆರಿಕ ಅಧ್ಯಕ್ಷ ಒಬಾಮ ಅವರಿಗೆ ಅಮೆರಿಕದಲ್ಲೂ ನಿರೀಕ್ಷಿತ ಬೆಂಬಲ ಸಿಗುತ್ತಿಲ್ಲ. ರಿಪಬ್ಲಿಕನ್, ಡೆಮಾಕ್ರಟಿಕ್ ಪಕ್ಷಗಳ ಅನೇಕ ಸದಸ್ಯರಿಗೆ ಸಿರಿಯಾದ ಮೇಲೆ ಯುದ್ಧ ನಡೆಸುವುದು ಬೇಕಾಗಿಲ್ಲ. ಇದರಿಂದ ಒಬಾಮ ಇಕ್ಕಟ್ಟಿನಲ್ಲಿ ಸಿಲುಕಿದ್ದಾರೆ.

ಶಾಂತಿಗಾಗಿ ಪ್ರಾರ್ಥಿಸಿ (ವ್ಯಾಟಿಕನ್ ಸಿಟಿ: ಎಎಫ್‌ಪಿ): ಸಿರಿಯಾದ ಮೇಲೆ ಸೇನಾ ದಾಳಿಯಾಗಬಾರದು ಮತ್ತು ಅಲ್ಲಿ ಶಾಂತಿ ನೆಲಸಬೇಕು ಎಂದು ಪ್ರಾರ್ಥಿಸುವಂತೆ ವಿಶ್ವ ಕ್ಯಾಥೋಲಿಕ್ ಚರ್ಚ್‌ಗಳಿಗೆ ಕರೆ ನೀಡಲಾಗಿರುವುದರಿಂದ ವಿಶ್ವದಾದ್ಯಂತ ಶನಿವಾರ ಉಪವಾಸ ಮತ್ತು ಪ್ರಾರ್ಥನೆ ಸಲ್ಲಿಸಲಾಗಿದೆ. ಪೋಪ್ ಫ್ರಾನ್ಸಿಸ್ ಅವರು ಸೇಂಟ್ ಪಿಟರ್ಸ್‌ ವೃತ್ತದಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಸಿದರು.

ಆತುರ ಬೇಡ: ಐರೋಪ್ಯ ರಾಷ್ಟ್ರಗಳ ಸಲಹೆ
ವಿಲ್ನಿಯಸ್, ಲಿಥುವೇನಿಯಾ (ಎಪಿ): ರಾಸಾಯನಿಕ ಅಸ್ತ್ರ ಬಳಸಿರುವ ಬಗ್ಗೆ ವಿಶ್ವಸಂಸ್ಥೆಯ ತಪಾಸಣೆ ತಂಡ ವರದಿ ನೀಡುವವರೆಗೆ ಸಿರಿಯಾ ಮೇಲೆ ದಾಳಿ ಮಾಡಬಾರದು ಎಂದು ಐರೋಪ್ಯ ರಾಷ್ಟ್ರಗಳ ವಿದೇಶಾಂಗ ಸಚಿವರು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಜಾನ್ ಕೆರಿ ಅವರನ್ನು ಒತ್ತಾಯಿಸಲಿವೆ.

ಇಲ್ಲಿ ಕೆರಿ ಮತ್ತು ಐರೋಪ್ಯ ರಾಷ್ಟ್ರಗಳ 16 ವಿದೇಶಾಂಗ ಸಚಿವರ ಮಧ್ಯೆ ನಡೆಯುವ ಸಭೆಯಲ್ಲಿ ಸಿರಿಯಾ ಮೇಲೆ ತಕ್ಷಣಕ್ಕೆ ದಾಳಿ ಮಾಡಬಾರದು ಎಂದು ಒತ್ತಾಯಿಸುವ ನಿರೀಕ್ಷೆಯಿದೆ.

ಜಿ-20 ಶೃಂಗಸಭೆಯಲ್ಲಿ ಸಿರಿಯಾ ವಿರುದ್ಧ ಸೇನಾ ಕ್ರಮಕ್ಕೆ ಒಮ್ಮತ ಮೂಡದಿದ್ದರಿಂದ ಕೆರಿ ಅವರು, ಐರೋಪ್ಯ ರಾಷ್ಟ್ರಗಳ ಬೆಂಬಲ ಪಡೆಯುವ ಉದ್ದೇಶದಿಂದ ಈ ರಾಷ್ಟ್ರಗಳ ವಿದೇಶಾಂಗ ಸಚಿವರ ಜತೆ ಚರ್ಚಿಸಲು ಮುಂದಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT