ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಥೆ: ಹಾಲು ಹೊಳೆಯಲಿ ಮಿಂದವರು...

Last Updated 12 ಮೇ 2012, 19:30 IST
ಅಕ್ಷರ ಗಾತ್ರ

ಈ ಜನ ತನ್ನೊಳಗಿನ ಸಂವೇದನೆಗಳನ್ನೆಲ್ಲ ದಹಿಸಿ ಯಂತ್ರದ ಗೊಂಬೆಗಳಂತೆ ಹೆಜ್ಜೆಗಳನ್ನಿಡುತ್ತಿದ್ದಾರೆ. ಬಿಸಿಲಿಗೆ ಮತ್ತಷ್ಟು ಬಾಡಿ ಕರಕಲಾದ ದೇಹ ಹಾಗೂ ಮನಸ್ಸಿಗೆ ಜಡ್ಡು ಹಿಡಿದಿದೆ.
 
ಬದುಕಿನ ಸುಂದರ ಕಲ್ಪನೆಗಳಿಂದ ಬಹುದೂರ ಇರುವ ಈ ಬೆಡಗಿನಹಳ್ಳಿಯ ಜನ; ದೂಳು, ಕಲ್ಲು, ಗುಂಡಿಗಳ ಈ ಕೆಟ್ಟ ರಸ್ತೆಗಳಲ್ಲಿ ಬೆಂಕಿ ಕಾರೋ ಬಿಸಿಲೊಳಗೆ ಬೆವರುತ ಝಳಕ್ಕೆ ಕಣ್ಣು ಕಿರಿದಾಗಿಸಿ- ಸೈಕಲ್ಲೋ ಬೈಕೋ, ನಡೆದಾಡುತನೋ ಇಲ್ಲವೇ ಎತ್ತಿನ ಗಾಡಿಗಳಲ್ಲಿ ನಿತ್ಯದ ಕರ್ಮದಲಿ ತೊಡಗಿದೋರು.
 
ಹೊಲಗದ್ದೆ, ಕೂಲಿನಾಲಿ, ಹಮಾಲಿಗಳಲಿ ತೆವಳಿ ಸಂಭ್ರಮಿಸುವ ಇವರನ್ನು ದೈವ ಮತ್ತು ದರ್ಪಗಳು ಆಳುತಿವೆ. ಒಂದೆಡೆ ಟೋಲ್ ನಾಕಾದಲ್ಲಿ ಹಣದೋಚುವ ನುಣುಪಾದ ಚತುಷ್ಪಾದ ರಸ್ತೆಗಳು ಮಾಯಾ ಪ್ರಪಂಚಗಳಿಗೆ ಕೊಂಡೊಯ್ದರೆ ಮತ್ತೊಂದೆಡೆ ನರಕ ಸದೃಶಲೋಕಕೆ ತೆರೆದುಕೊಳ್ಳುವ ಈ ದರಿದ್ರ ಹಳ್ಳಿ ರಸ್ತೆಗಳು. ಅವಿನಾಶ ಪಾಟೀಲ ಆ ಮಾಯೆಯ ಚತುಷ್ಪಾದ ರಸ್ತೆಯಿಂದ ಜುಮ್ಮನೆ ತನ್ನ ನೈಂಟೀನ್ ಫಾರ್ಟಿಸೆವೆನ್ ಮಾಡೆಲಿನ ಕಾರು ಅರ್ಥಾತ್ ಹದಿನಾರು ವರ್ಷಗಳ ಹಿಂದಿನ ಮಾರುತಿ ಕಾರಲಿ ಬಂದವ.
 
ಆತನಿಗೆ ಆ ಕ್ವಾಣ್ಯಾಳ ದಿನ್ನೆ ಮೇಲಿರುವ ಶುಗರ್ ಫ್ಯಾಕ್ಟರಿಯಿಂದ ಬೆಡಗಿನಹಳ್ಳಿ ಅಗಸೀತನಕ ಮೂರ‌್ನಾಲ್ಕು ಕಿಲೋಮೀಟರ್ ಕಲ್ಲು ತಗ್ಗಿನ ರಸ್ತೆ ಸವೆಸಲು ಅರ್ಧಗಂಟೆ ಹಿಡಿಯಿತು. `ಥೂ... ಈ ಜನ ಆದರೂ ಹೆಂಗ ಬದುಕುತಾರೋ~ ಅಂತ ಗೊಣಗುತ್ತ ಆಚೆ ಈಚೆ ಹೋಗಿ ಬರುವವರನ್ನು ನತಮಸ್ತಕ ನೋಡುತ್ತಿದ್ದ. ಅವರೋ ಈ ಹಳ್ಳಿ, ಈ ಜನ, ಈ ಪ್ರಪಂಚಕ್ಕೂ ತಮಗೂ ಎಳ್ಳುಕಾಳು ಮುಳ್ಳು ಮೊನೆಯಷ್ಟೂ ಸಂಬಂಧವಿಲ್ಲ ಎಂಬುವವರಂತೆ ತಮ್ಮ ಕಾರ್ಯದಲ್ಲಿ ನಿರತರು.

ಬೆಡಗಿನಹಳ್ಳಿ ಸಿದರಾಯಿ ಅವಿನಾಶ ಪಾಟೀಲನ ಮನೆದೇವರು. ಅಮವಾಸ್ಯೆಗೆ ಬಿಡುವಿಗೊಮ್ಮೆ ಬಂದು ಕಾಯಿ ಕರ್ಪೂರ ಮಾಡಿಕೊಂಡು ಹೋಗುತ್ತಿದ್ದ. ಬಂದಾಗ ಗುಡಿಯ ಅರ್ಚಕ ಭಗವಾನ ಎಂಬ ಹಿರಿಯರ ಮನೆಯಲ್ಲಿ ಉಳಿದುಕೊಳ್ಳುತ್ತಿದ್ದ.

ಇಂದು ಭಗವಾನ ಸಿದರಾಯಿ ಗುಡಿಯಲ್ಲಿಯೇ ಅವಿನಾಶಗೆ ಸಿಕ್ಕರು. ತಂಪಾದ ಪೌಳೀಲಿ ಚಾಪೆ ಹಾಸಿ ಕುಳಿತ ಭಗವಾನ ತಂಬಾಕು ಚಿಲುಮಿ ಜೋಡಣೆಯಲಿದ್ದರು. ಭಗವಾನರ ವ್ಯಕ್ತಿತ್ವ ಊರಲ್ಲಿ ಪ್ರಚಲಿತ, ಕಲಬುರ್ಗಿ ಕಲ್ಯಾಣಸಿದ್ಧನ ಅಪರಾವತಾರದಂತೆ ಸಿದ್ಧ ಶರಣರ ಗುಣಾವಗುಣಗಳ ಪಡೆದ ನಿರ್ಲಿಪ್ತ ವ್ಯಕ್ತಿತ್ವ.

`ಕುಂತರ ಕುಂಡಿ ಬಡ್ಡ್ಯಾಗ, ನಿಂತರ ಹೆಗಲ ಮ್ಯಾಲ~ ಎಂಬ ತನ್ನದೇ ಜೀವನಮೌಲ್ಯಕ್ಕೆ ಅಂಟಿಕೊಂಡು ಜನೋಪಕಾರಿ ಕಾರ್ಯ ಚಟುವಟಿಕೆ ನಿರ್ವಹಿಸುತ ನಾಲ್ಕು ಮಂದಿಗೆ ನೆರವಾಗುವ ಎಪ್ಪತ್ತರ ಗಟ್ಟಿ ಘಟ. ಚರ‌್ರನೆ ತೀಡೋ ಉದ್ದನೆ ದಟ್ಟ ಹುರಿ ಮೀಸೆ, ತಲೆ ಮೇಲೆ ಪಟಗೆ, ಶುಭ್ರ ಬಿಳಿ ಅಂಗಿ ಧೋತರದ ಭಗವಾನ ಕೆಲವರಿಗೆ ಭಗವಾನ, ಹಲವರಿಗೆ ಭಗವಾನ ಕಾಕಾ, ಚಿಕ್ಕವರಿಗೆ ಭಗವಾನಜ್ಜ.

ಚಿಲುಮಿಯೊಳಗೆ ಹರಳು ಹಾಕಿ ತಂಬಾಕು ಒತ್ತಿ ತುಂಬಿ ಅದಕ್ಕೊಂದು ಸೋಸುವ ಚುಂಗು ಕಟ್ಟಿ ಕಡ್ಡಿ ಗೀರಿ ಹಚ್ಚಿ ಒಂದು ಸಲ `ಉಸ್~ ಅಂತ ದೀರ್ಘ ದಮ್ಮೆಳೆದು ದೊಡ್ಡದಾಗಿ ಹೊಗೆಯುಗುಳಿದರು. ಪೌಳಿ ತುಂಬ ತಂಬಾಕಿನ ಖಂವಟು ವಾಸನೆ ಅಡರಿತು. ಅವಿನಾಶ ಪಾಟೀಲ ಬಂದವನೆ,

`ಕಾಕಾ ಆರಾಮದೀರಿ... ನಂದು ಖೂನ ಹತ್ತತತಿ ಯಾನರಿ~ ಅಂದ.
ಚಿಗರಗಣ್ಣಿಲೆ ನೋಡಿದ ಭಗವಾನ-
`ಯಾನೋ ಪಾರ... ನಿಂದ ಖೂನ ಹತ್ತದ ಇರತೇತಿ ಯಾನ? ನೀ ಶಾರೂರು ಸೇರಿದರ ಯಾನಾತು. ನಿನ್ನಪ್ಪ, ಅಜ್ಜ ಇದ? ಮಣ್ಣಾಗ ಹುಟ್ಟಿದೋರು. ನಾ ಮರತ್ಯಾನು ಸಣ್ಣಗೌಡ!~ ಅಂತ ಆತನ ಪಂಚಾಂಗವನ್ನು ಬಿಚ್ಚಿದರು.

`ಕಾಕಾ ಹಂಗ ಚ್ಯಾಷ್ಟಿಗಿ ಅಂದ್ನಿ... ಬಂದು ಭಾಳ ದಿವಸ ಆತಲ್ಲ... ಅದಕ್ಕ ಕೇಳಿದ್ನಿ~ ಸ್ವಲ್ಪ ತಡೆದು ಅವಿನಾಶ ಮುಂದುವರೆದ-

`ಕಾಕಾ ಊರು ಹಿಂಗ್ಯಾಕ ಹಾಳಬಿದ್ದ ಮನಿ ಆಗೇತಿ... ದೂಳು, ಕೊಳಿ, ಹೊಲಸು ಅಷ್ಟ? ಅಲ್ಲ ದೊಡ್ಡ ತಗ್ಗು ಕಲ್ಲುಗೋಳ ರಸ್ತಾಕ ರಸ್ತಾ ಅಂತಾರೇನು? ಪೈಲೆ ಹಿಂಗಿರಲಿಲ್ಲ ಬಿಡು...

ರಸ್ತಾಗಳು ಕಚ್ಚಾ ಆದರೂನು ಸಪಾಟನ? ಛಂದಾಗಿರುತ್ತಿದ್ದವು. ಸುತ್ತಲೂ ಗಿಡಮರ... ಹೊಲದಾಗ ಹಸಿರು ಬೆಳಿ, ಹಳ್ಳದಾಗ ಜುಳುಜುಳು ಹರಿಯೋ ತಿಳಿನೀರು... ಈಗ? ಎಲ್ಲಾ ಕಡಿ ಕಸ ಬೆಳದತಿ ಉಲ್ಟಾ ಪಲ್ಟಾ! ಯಾರೂ ಇಚಾರ ಮಾಡಂಗಿಲ್ಲೇನು?~

ಈ ಪುರಾಣ ಕೇಳುತ ಭಗವಾನ ಮತ್ತೊಂದು ಚಿಲುಮಿ ಸೇದಿ ದಮ್ಮೆಳೆದರು. ನಿಧಾನಕ್ಕೆ ಚಿಲುಮಿಯೊಳಗಿನ ಸುಟ್ಟ ಹುಡಿಯನ್ನು ಬೆಳಗ್ಗೆ ಕರ್ಕ ತಿಕ್ಕಲು ಕಾಗದದ ತುಂಡಿನಲ್ಲಿ ತಗೆದು ಪುಡಿ ಕಟ್ಟಿಕೊಂಡರು. ನೀಳ ನಿಟ್ಟುಸಿರುಬಿಟ್ಟು ಹೇಳಿದರು-   

`ಇದಕ್ಕ ನಿಮ್ಮ ಶಾರದ ಭಾಷದಾಗ ಪ್ರಗತಿ ಅಂತಾರ... ಊರು ಹಾಳು ಮಾಡೋದ? ಒಂದು ಪ್ರಗತಿ! ಊರ ಅಗಸ್ಯಾಗ ಸರಕಾರದೋರು ಪ್ರಗತಿ ಮಾಡಿದ್ದರ ಬೋರ್ಡ ಹಾಕ್ಯಾರಂತ... ನಾ ಹೆಬ್ಬಟ್ಟಿನ್ಯಾಂವ ನಂಗೆಲ್ಲಿಂದ ತಿಳಿಬೇಕು... ಆದರ ಗೌಡ ಫರಕಿಷ್ಟ...

ಹಳಿ ಕಾಲದಾಗ ಬೆಲ್ಲ ಬೆಳಿತಿದ್ದರು... ಇವತ್ತು ಸಕ್ಕರಿ... ಸಕ್ಕರಿಗಿ ಮುತ್ತೋ ಇರುವಿಗಳು ಬ್ಯಾರೆ ಇರತಾವು... ವಿಷ ಕಾರೋ ಇರುವಿಗಳು... ಮನಸ್ಯಾನ ಹಿಡಿದು ಕಚ್ಚಿ ಕಚ್ಚಿ ಸಣ್ಣಗ ತಿನ್ನೋ ಇರುವಿಗಳು... ಅವಕ್ಕ... ಅಂದರ ಇರುವಿಗಿ ಅರಿವೆಲ್ಲಿ... ಆದರ ಈ ಕರಿಮಾರಿ ಸಿದರಾಯನ ಪಾಂಡರ‌್ಯಾಗ ಯಾನೂ ನಡ್ಯಾಂಗಿಲ್ಲ ಮತ್ತ...~ ಊರಕೇರಿ ಹಾಳಾಗುತ ನಾಶದಂಚಿಗೆ ಸರಿಯುತ್ತಿರುವುದರ ಕಾಳಜಿಯ ಕರುಳೊಳಗಿನ ಮಾತು ಭಗವಾನರ ಬಾಯಿಂದ ಹೊರಬಿತ್ತು.

ಶುಗರ್ ಪಾಲಿಟಿಕ್ಸೇ ಅಂಥದ್ದು. ಊರೊಳಗೆ ಜನ ಬಹು ನಿರೀಕ್ಷೆಯಿಟ್ಟುಕೊಂಡು ಕಾದ ಸಕ್ಕರೆ ಕಾರಖಾನೆ ತನ್ನ ಸ್ವರೂಪವನ್ನೇ ಬದಲಿಸಿಕೊಂಡಿದೆ. ಆ ಸಕ್ಕರೆ ಕಾರಖಾನೆ ಎರಡು ರಾಜಕೀಯ ಪಕ್ಷಗಳ ಸಂಘರ್ಷಗಳ ಅಖಾಡವಾಗಿದೆ.
 
ರಾಜಕೀಯವಾಗಿ ಬೆಳೆಯಲು, ಅಧಿಕಾರದ ಗದ್ದುಗೆಗೆ ಸಾಗಲು ಸಹಕಾರಿ ಘಟಕಗಳು ಕೆಂಪುಹಾಸು ಹೊದ್ದುಕೊಂಡ ರಾಜಮಾರ್ಗವಿದ್ದಂತೆ. ಹಾಲಿ ಶಾಸಕ ಶಿವನಗೌಡ ಪಾಟೀಲರ ಕೈಯಿಂದ ವಿರೋಧಿ ಪಕ್ಷದ ಬಾಪೂಸಾಬ ತುಬಾಕಿಯವರ ಕೈಗೆ ಕಾರಖಾನೆ ಹೋದದ್ದು ಮುಸುಕಿನ ಗುದ್ದಾಟಗಳಿಗೆ, ತೆರೆಮರೆ ತಂತ್ರಗಳಿಗೆ ಕಾರಣವಾಗಿದೆ. ಎರಡು ಪ್ರಬಲ ಲಾಬಿಗಳ ಚದುರಂಗದಾಟದಲ್ಲಿ ಊರು ಹಾಳಾಗಿ ಹೋಯಿತು.

ನೀರಾವರಿಯೊಂದಿಗೆ ಹರಿದು ಬಂದ ನೀರು ಆರ್ಥಿಕ ಸಬಲತೆಯೊಟ್ಟಿಗೆ ಅನೇಕ ದುರಾಸೆ, ದುಶ್ಚಟ ಮತ್ತು ದುರ್ವ್ಯವಹಾರಗಳ ವ್ಯಾಪಾರಿ ಸಂಸ್ಕೃತಿಯನ್ನು ಕಳೆದ ದಶಕದಲ್ಲಿ ಪಸರಿಸಿದೆ.
 
ಅದು ಜನರ ಮೇಲೆ ಅಮೂರ್ತವಾಗಿ ಪ್ರಭಾವಿಸಿತು. ಕಬ್ಬು ಸಾಗಣೆಯ ಕಾರಖಾನೆಯ ರಸ್ತೆಯನ್ನು ಶಾಸಕ ಶಿವನಗೌಡ ಪಾಟೀಲ ಬೇಕೆಂದೇ ಕಾಮಗಾರಿಗೆ ತಡೆಯೊಡ್ಡಿರುವ ವಿಚಾರ ಪ್ರಾಜ್ಞರಿಗೆ ಅರಿವಿದೆ.
 
ಬಾಪೂಸಾಬನನ್ನು ಈ ಮೂಲಕ ಹಣಿಯಲು ಯತ್ನಿಸುವ ಮತ್ತು ಅದಕ್ಕೆ ವಿರುದ್ಧ ಬಾಪೂಸಾಬ ತನ್ನ ಶಕ್ತಿ ಪ್ರದರ್ಶಿಸಲು ನಡೆಸುವ ತಂತ್ರಗಾರಿಕೆಯಲ್ಲಿ ಅನೇಕ ಬಾರಿ ಊರಿನ ಜನ ನಲುಗಿ ನೊಂದಿದ್ದಾರೆ.

`ನೀ ಯಾನ ಇಚಾರ ಮಾಡಾಕತ್ತಿ ಅಂಬೋದು ನಂಗ ಗೊತ್ತೇತಿ~ ಭಗವಾನ ಅಂದರು.
`ಆಂ! ಅದ್ಹೆಂಗ ಹೇಳತಿ ಕಾಕಾ?~ ಅವಿನಾಶ ಅಚ್ಚರಿ ವ್ಯಕ್ತಪಡಿಸಿದ.

`ಜನ ನನಗ ಸುಮ್ಮನ ಭಗವಾನ ಅಂತ ಕರೆದಿಲ್ಲೋ ಪಾರ... ಈ ಊರ ಹಾಳಾಗಲಿಕ್ಕೆ ಈ ರಾಜಕಾರಣ...~ ಅವಿನಾಶ ಪಾಟೀಲ ಮಧ್ಯದಲ್ಲಿಯೇ ಭಗವಾನರನ್ನು ತಡೆಯುವನು-
`ಗೊತ್ತಾತು ಬಿಡು ಕಾಕಾ... ಮತ್ತ ಬಿಡಿಸಿ ಯಾಕ ಹೇಳತಿ?~

`ಆದರ ಗೌಡ... ಈ ಪುಣ್ಯದ ನೆಲ ಹಿಂಗಿರಲಿಲ್ಲ... ಇದಕ್ಕೊಂದು ದೊಡ್ಡ ಕತೀನ ಐತಿ... ಅದಕ್ಕ ಪುರಾಣ ಅಂತೀನೋ ಇತಿಹಾಸಂತೀನೋ ಗೊತ್ತಿಲ್ಲ... ಹೇಳತ್ಯಾನು ಕೇಳತಿ ಯಾನ?...~ ಅಜ್ಜ ಬೆರಗು ಕಣ್ಣು ಮಾಡಿ ಕೇಳಿದ...

`ಅರೆ ಇದ್ಯಾನ ಕೇಳಾಣ ಕಾಕಾ! ನೀ ಹೇಳೋದ ಹೆಚ್ಚೋ, ನಾ ಕೇಳೋದ ಹೆಚ್ಚೋ...ಹೇಳು ಹೇಳು...~ ಉತ್ಸುಕತೆಯಿಂದ ಅವಿನಾಶ ಸಿದ್ಧನಾದ.

`ಕಾಕಾ ಯಾನ ಹರಕತ್ತಿಲ್ಲ...~
ಮೈಯೆಲ್ಲ ಕಿವಿಯಾಗಿಸಿ ಅವಿನಾಶ ಸಿದ್ಧನಾಗುತ್ತಿದ್ದಂತೆಯೇ ಭಗವಾನ ಚಿಲುಮೆ ಹೊತ್ತಿಸುವ ಸಿದ್ಧತೆಗೆ ತೊಡಗುವರು. ಚಿಲುಮೆಗೆ ಚೆಡ್ಡಿ ಹಾಕಿಸಿ ತಂಬಾಕು ಇಡುವ ಮುಂಚೆ ಚಿಲುಮೆಗೆ ಹರಳು ಹಾಕಿ ತಂಬಾಕಿಟ್ಟು ಕಡ್ಡಿಗೀರಿ ಬೆಂಕಿಯನ್ನು ಚಿಲುಮಿಯ ಮುಖಕ್ಕಿಟ್ಟು ಜೋರಾದ ದಮ್ಮೆಳೆವರು. ಉತ್ಸಾಹ ಇಮ್ಮಡಿಗೊಳ್ಳುವುದು. ಒಮ್ಮೆ ಚರಚರನೆ ಹುರಿಮೀಸೆ ಸವರಿ ಹೇಳತೊಡಗುವರು.

`ನೂರಾರು ವರ್ಷಗಳ ಹಿಂದಿನ ಮಾತು. ಬೆಡಗಿನಹಳ್ಳದ ದಂಡೇಲಿ ಹರಿಯೋ ಹೊಳಿ ಹಿಂಗಿರಲಿಲ್ಲ... ಅದು ಸಾಕ್ಷಾತ್ ಗಂಗಾಮಾತೆ ಆಗಿತ್ತು. ಈ ಊರು ಹಸಿರು ಹೊನ್ನಿನ ಐಸಿರಿಯ ತೋಟ. ಊರ ದಂಡಿಗಿ ಹೊಳಿ, ಸುತ್ತಲೂ ಹಳ್ಳ, ಹಳ್ಳದೊಳಗ ನೀರು ಬಾರಾ ಮಹಿನೆ ಚೋವಿಸ ತಾಸ ಹಿಂಗ ಒರತಿ ನೀರ ಜಿನುಗಿದಂಗ ಹರಿತಿತ್ತು.
 
ಸುತ್ತಲಿನ ಹೊಲಗದ್ದೇಲಿ ಮಾವು. ತೆಂಗು, ರಾಮಫಲ, ಸೀತಾಫಲ; ಎರೆ ಮಣ್ಣು ಕೆನೆ ಪದರಿದ್ದಾಂಗ ಇತ್ತು. ಅದರೊಳಗ ಬೆಳೆದ ಬೆಳಿ ಸತ್ವವುಳ್ಳ ಆಹಾರ. ಈ ಆಹಾರ ಉಂಡ ಸಮುದಾಯವೊಂದು ಹೊಳಿದಂಡಿ ಮ್ಯಾಲ ಮೋಜಿನಿಂದ ವಾಸ ಮಾಡತಿತ್ತು.
 
ಹೊಳಿ ಸಾಧಾರಣ ಹೊಳಿ ಅಲ್ಲ. ಸಾಕ್ಷಾತ್ ಗಂಗೆಯ ಅವತಾರ. ಕಾಮಧೇನು ಕಲ್ಪವೃಕ್ಷದ ಪ್ರತಿರೂಪ ಈ ಹೊಳಿ. ಸ್ವರ್ಗನ? ಭೂಮಿಗಿಳಿದಂಗ ಸುಖಾಲವಾದ ಅಂದಿನ ಹೊಳಿಯೊಳಗ ನೀರು ಹರೀತಿರಲಿಲ್ಲ. ಹಾಲು! ಹಾಲು ಹರೀತಿತ್ತು. ಅಲ್ಲಿ ನೆಲೆ ನಿಂತ ಜನ ನೀರಡಿಕೆ ಆದಾಗ ಬೊಗಸೆ ಬೊಗಸೆ ಹೊಳೆಯ ಹಾಲು ಕುಡೀತಿದ್ದರು. ಹಾಲುಂಡ ಜನ ಆ ಹಾಲ ಹೊಳಿಯಲ್ಲೇ ಮಿಂದೇಳುತ್ತಿದ್ದರು. ಗಂಡು ಹೆಣ್ಣು ಭೇದ ಮಾಡದನ ಬೆತ್ತಲಾಗಿ ಹಾಲಿನೊಳಗ ಮುಳಿಗೇಳೋ ಅವರ ಮೈ ಬಣ್ಣ ಹಾಲಿನಂಗ, ಕೆನಿಹಂಗ ಸ್ನಿಗ್ಧ ರೂಪೀಲೆ ಹೊಳಿತಿತ್ತು.

ಅವರೆಂದೆಂದಿಗೂ ನಿರುತ್ಸಾಹಗೊಳ್ಳುತ್ತಿರಲಿಲ್ಲ, ಶಕ್ತಿಗುಂದುತ್ತಿರಲಿಲ್ಲ. ಅಷ್ಟ ಅಲ್ಲ ಮುಪ್ಪ ಇರಲಿಲ್ಲ. ಚಿರಯೌವನ ಹೊಂದಿದಂಗ ಕಾಣುವ ಆ ಜನಾಂಗದ ಗಂಡು ಹೆಣ್ಣುಗಳು ಮೋಜಿನಿಂದ ಬೆತ್ತಲಾಗಿ ಹೊಳೀದಂಡಿ ಮ್ಯಾಲ ಮಜವಾಗಿರುತ್ತಿದ್ದರು.
 
ಹಸಿರು ಹುಲ್ಲಿನ ಮ್ಯಾಲ ಬಿಸಿಲಿಗಿ ಮೈ ಒಡ್ಡುತ್ತಿದ್ದರು. ಹಿಂಗ ಅವರ ಬದುಕು ಸಾಗಿತ್ತು. ಸುಖದಿಂದ ಸಾಗಿದ ಅವರ ಬದುಕಿಗೊಂದು ಅವಘಡ ಕಾದಿತ್ತು. ಒಂದು ದಿನ ದಡದಾಚೆಗಿನ ಇನ್ನೊಂದು ದೇಶದ ಜನಾಂಗ ಅಲ್ಲಿಗೆ ಬಂತು.
 
ಇಲ್ಲಿ ನೆಲೆ ನಿಂತ ಹಾಲು ಹೊಳೇಲಿ ಮಿಂದೋರ ಬದುಕನ್ನ, ಅದರ ಸೊಗವನ್ನ ನೋಡಿ ಬೆರಗಾಗಿ ಹೊಟ್ಟೆಕಿಚ್ಚು ಪಟ್ಟಿತು. ಅವರಲ್ಲಿ ದ್ವೇಷಾಸೂಯೆ ಮತ್ತು ಸೇಡಿನ ಮನೋಭಾವ ಮಡುಗಟ್ಟಿತು. ಈ ಹಾಲು ಹೊಳೇಲಿ ಮಿಂದೋರಿಗೆ ಬುದ್ಧಿ ಕಲಿಸಲು ಆಚೆಗಿನ ಗುಂಪಿನ ಖಳನೊಬ್ಬ ತಲೆಕೆಟ್ಟು ಚಿಂತಿಸಿದ.
 
ಅವನಿಗೆ ಅತ್ಯಂತ ಕೀಳುಮಟ್ಟದ ಮತ್ತು ಹೊಲಸಾದ ಯೋಚನೆ ಹೊಳೆಯಿತು. ಒಂದು ಮುಂಜಾನಿ, ಸೂರ‌್ಯ ಹುಟ್ಟೋದಕ್ಕ ಪೈಲೆ ಆ ಖಳ ಹೊಳಿದಂಡಿಗಿ ಬಂದು ನಿಂತ. ಒಮ್ಮಿ ನಿರುಕಿಸಿ ಹೊಳೆಯನ್ನು, ಹರಿಯೋ ಹಾಲನ್ನು ಗಮನಿಸಿದ. ಶುದ್ಧವಾದ ನೊರೆನೊರೆ ಹಾಲು.
 
ಕೆಚ್ಚಲಿಂದ ಧಾರಿಯಾಗಿ ತಂಬಿಗಿಗಿ ಇಳಿದಂಗ ಉಗುರು ಬೆಚ್ಚಗ ಹರೀತಿದೆ. ಆ ದುಷ್ಟ ಖಳ ಕೆಟ್ಟ ವಿಚಾರದಿಂದ ಕುದ್ದೆದ್ದವರಂಗ ಎದ್ದ. ಔಡಲೆಣ್ಣಿ ಕುಡಿದಂಗ ಮುಖ ಹುಳಿಗಡಗಿ ಆಗಿತ್ತು.
 
ಖಳನ ಹೊಟ್ಟೆಂಬೋ ಹೊಟ್ಟ್ಯಲ್ಲ ಗೊರಗೊರನ ತೊಳಸ್ಯಾಡಿದಂಗಾಗಿ ಹೊಳಿದಂಡಿಗಿ ತುಳಕ್ಯಾಡೋ ಹಾಲೊಳಗ ಹೆಡಗಿ ಪಡಿಯಷ್ಟ ಹೇತುಬಿಟ್ಟ. ಹಾಲಿಂದ ತನ್ನ ಕುಂಡೀನ ತೊಳಕೊಂಡ.
 
ಆ ಹೇಲು ನಿಧಾನ ಹಾಲೊಳಗ ಕಣಕಣಗಳಾಗಿ ಮಿಳಿತ ಆಗತ್ತಿದ್ದಂಗನ ಹಾಲಿನ ಶುಭ್ರ ಬಣ್ಣವು ಹಳದಿ ಬಣ್ಣದ ರೂಪುಗಳಾಗಿ, ಹೊಲಸು ಅಸಹ್ಯ ಹುಟ್ಟಿಸೊ ದುರ್ಗಂಧ ವಾಸನೆ ಇಡೀ ನಾಡ ತುಂಬಿ ಹಾಲುಂಡು ಬದುಕೋ ಜನಾಂಗವು ವಾಂತಿ ಬೇಧಿಗೆ ತುತ್ತಾಯಿತು.

ಹಾಲು ಮಿಂದವರ ಹಾಲು ಬಣ್ಣದ ದೇಹಕ್ಕೆಲ್ಲ ಹೇಲು ಅಂಟಂಟಾಗಿ ಮೆತ್ತಿಕೊಳ್ಳತೊಡಗಿತು. ಈ ಅನಿರೀಕ್ಷಿತ ಪ್ರಸಂಗಕ್ಕೆ ಹೌಹಾರಿದ ಹಾಲು ಮಿಂದವರು ಜೀವಭಯದಿಂದ ಓಡಿ ಹೋದರು.
 
ಸೂರ‌್ಯ ಮೂಡಲಕ್ಕ ಮೂಡುವ ಹೊತ್ತಿಗಿ ಹಾಲೆಲ್ಲ ಕರಗಿ ವಿಷವೇ ಮೈವೆತ್ತಂತೆ ಉಕ್ಕಿ, ಪ್ರಕ್ಷೋಭಿಸಿ, ಅಲ್ಲೋಲ ಕಲ್ಲೋಲಗೊಂಡು ನಿಧಾನಕ್ಕ ತಣ್ಣಗಾಗತ ಘಾಣಿ ನೀರಾತು.

ಆವತ್ತನಿಂದ ಆ ಹೊಳಿಗಿ ಹೇಲುಗಂಗೆ ಅಂತ ಕರದ್ರು. ಇದಿಷ್ಟು ಈ ನೆಲದ ಅರಿಷ್ಟ ಪಾಪದ ಕತಿ~.

ಅವಿನಾಶ ಪಾಟೀಲ ಗರಬಡಿದವರಂತೆ ಬಾಯ್ತೆರೆದು ಬೆರಗಾಗಿ ಭಗವಾನರು ಹೇಳಿದ ಕತೆಯ ಪ್ರಸಂಗ ಆಲಿಸಿದ. ಆತನಿಗೆ ಈ ನೆಲದ ಕುರಿತು ಗೌರವ ವೃದ್ಧಿಸಿತು. ಭಗವಾನ ತುಸು ಮೌನವಾದರು, ಮತ್ತೆ ಅಂದರು-

`ಇಂಥ ಪಾಪದ ಹೊಳಿಯ ಪುಣ್ಯದ ನೆಲದಾಗ ಈ ಕರಿಮಾರಿ ಸಿದರಾಯಿ ಬಂದು ಕೂತ. ಇಂವ ಅಷ್ಟಿಷ್ಟು ಸರಳಲ್ಲ... ಇವನ ಪಾಂಡರ‌್ಯಾಗ ಎಂಥೆಂಥೋರು ಮಣ್ಣ ಮುಕ್ಕ್ಯಾರು.

ಅದರ ಖಬರ್ ಮಂದಿಗಿರೋದಿಲ್ಲ. ಅಂವ ಮುಕಳ್ಯಾಗ ಕೈ ಹಾಕಿ ಲಗಾ ಹೊಡೆಸಿದಾಗನ ಗೊತ್ತಾಗತೇತಿ...~

ತಾನು ಆಗಾಗ ಬರುವ ಈ ದೈವದ ನಿಗೂಢ ಶಕ್ತಿಯ ಕುರಿತು ಭಗವಾನರ ನುಡಿಗೆ ಅವಿನಾಶ ಭಕ್ತಿಪರವಶನಾದ.

ಅಷ್ಟರಲ್ಲಿ ಪೌಳಿಯಲ್ಲಿ ಗದ್ದಲ ಕೇಳಿ ಬಂತು. ಆ ಕೋಣೆಯೊಳಗಿನಿಂದ ಸುಮಾರು ಇಪ್ಪತ್ತೈದರ ವಯಸ್ಸಿನ ವಿವಾಹಿತ ಹೆಂಗಸೊಬ್ಬಳು ಹುಚ್ಚೆದ್ದು ಓಡತೊಡಗಿದ್ದು ಕಂಡು ಬಂತು. ಆಕೆಯನ್ನು ಹಿಡಿಯಲು ಜತೆಗಿದ್ದ ಪುರುಷನೊಬ್ಬ ಹಾಗೂ ಮಧ್ಯ ವಯಸ್ಸು ಮೀರಿದ ಮಹಿಳೆಯೂ ದೌಡಾಯಿಸುವರು.
 
`ಹಿಡೀರಿ ಹಿಡೀರಿ~ ಎಂದು ಕೂಗುತ್ತ ಅ ಪೋಷಕರು ಹರಸಾಹಸ ಮಾಡುವರು. ಆ ಹುಚ್ಚೆದ್ದ ಹೆಂಗಸು ತಾನು ಮೆಟ್ಟಿದ್ದ ಚಪ್ಪಲಿಯನ್ನು ಬಿಸಾಕುವಳು ಮತ್ತು ದೇವರ ಎದುರಿನ ಅಂಗಳಕ್ಕೆ ಬಂದು ನಿಲ್ಲುವಳು.
 
ಆಕೆಗೆ ದೆವ್ವ ಬಡಿದಿದೆ ಎಂದೆಲ್ಲರೂ ಪಿಸುಗುಡುತ್ತಿದ್ದರು. ಎದೆ ಮೇಲಿನ ಸೀರೆ ಜಾರಿದ್ದನ್ನು ಆ ಮಹಿಳೆ ಸರಿಪಡಿಸಲು ಹೋಗುತ್ತಿದ್ದಳು. ಏದುಸಿರು ಬಾತೆ ಹೊಡೆದಂತೆ ಹೊಡೆಯುತ್ತಿರುವುದರಿಂದ ಆಕೆಯ ಮೊಲೆಗಳು ಮೇಲೆ ಕೆಳಗೆ ತೂಗುತ್ತಿದ್ದವು. ಅಸ್ತವ್ಯಸ್ತಗೊಂಡ ಕೂದಲು. ಗಂಡಸಿನ ಧ್ವನಿ ತೆಗೆದು ಏನೇನೋ ಕೂಗುತ್ತಿದ್ದಳು.

ಪೋಷಕರು ಈಗ ಆಕೆಯ ರಟ್ಟೆ  ಬಿಗಿ ಹಿಡಿದಿದ್ದರು. ಆಕೆ ಬಿಡಿಸಿಕೊಳ್ಳಲು ಯತ್ನಿಸಿದಳು. ಗುಡಿಯೊಳಗಿನಿಂದ ಅರ್ಚಕ ಬಂದ. ಬೆತ್ತದ ಏಟು ನೀಡುತ್ತ ದೆವ್ವದ ವಿಚಾರಣೆ ನಡೆಸಿದ-
`ನೀ ಯಾರು? ಈಕೀನ ಯಾಕ ಹಿಡಿದಿದ್ದೀ?~

`ನಾ ಮೂರು ಹಾದಿ ಮಸೋಬಾ... ನೀ ಯಾಂವ ಕೇಳಾಂವ ಕಿಸ್ಮಾರಖಾನ?~
ಮತ್ತೆ ಗಡುಸಾಗಿ ಕಿರುಚಿದಳು. ಆ ಗಡುಸಿಗೋ ಆರ್ಭಟಕ್ಕೋ ಅರ್ಚಕನ ಕಚ್ಚೆ ತುಸು ಸಡಿಲುಗೊಂಡಿತು. ಮತ್ತೆ ಸಾವರಿಸಿಕೊಂಡು ಜೋರು ಮಾಡಿದ.

`ಈ ಸಿದರಾಯನ ಮುಂದ ಖರೆ ಹೇಳು... ಈ ಪೋರಿಗಿ ಯಾಕ ತ್ರಾಸ ಕೊಡತಿ?~ ಅರ್ಚಕನೆಂದ.

`ಈಕಿಗಿ ನಾ ಬೇಕಾಗೇನಿ, ನನಗ ಈಕಿ! ಅದಕ್ಕ ಹಿಡಕೊಂಡೇನಿ...~ ಅಂತಂದು ವಿಕಟವಾಗಿ ನಗಲಾರಂಭಿಸಿದಳು.

`ಬಿಟ್ಟು ಹೋಗ್ತೀಯೋ ಇಲ್ಲೋ ಇಲ್ಲಾಂದರ...~ ಅರ್ಚಕ ಬೆತ್ತದ ಏಟು ನೀಡಿ ಅಂಗಾರ ಊದಿದ. ಆಕೆ  `ಹೋ~ ಅಂತ ಕೂಗಿ ಮೆಲ್ಲಗೆ ನೈಜಸ್ಥಿತಿಗೆ ಬಂದಳು. ಪೋಷಕರು ತುಸು ನಿರಾಳವಾದರು. ಆಕೆ ತಾನಿಲ್ಲಿ ಹೇಗೆ ಬಂದೆ? ಎಂಬುವಂತೆ ಸನ್ನೆ ಮಾಡಹತ್ತಿದಾಗ ನೋಡಲು ಬಂದವರು ಕರಗಹತ್ತಿದರು. ಆಕೆಯನ್ನು ಪೋಷಕರು ಪೌಳಿಯ ಕೋಣೆಗೆ ಕರೆದುಕೊಂಡು ಹೋದರು.

ಅವಿನಾಶ ಬೆರಗಾಗಿ ನಡೆದ ಪ್ರಸಂಗ ನೋಡಿದ ಮತ್ತು ಅಂದ-
`ಕಾಕಾ, ಈ ದೆವ್ವ ಭೂತ ಎಲ್ಲ ಸುಳ್ಳಲ್ಲ? ಆಕಿ ವರ್ತನಿ ನೋಡಿ ಗಾಬರ‌್ಯಾತು. ಮಾನಸಿಕ ಆಗಿರತತಿ...~

`ಮನಸ್ಯಾನಗಿಂತ ಇನ್ನೊಂದ ದೆವ್ವ ಎಲ್ಲಿ ಐತ್ಯೋ ಪಾರ... ಇದು ಐತಂದರ ಐತಿ ಇಲ್ಲಂದರ ಇಲ್ಲಂಬೊ ಒಗಟಿದ್ದಂಗಪ~ ತುಸು ತಡೆದು ಭಗವಾನರು ಹೇಳುವರು.
`ಒಟ್ಟು ಹೇಳೋದಂದರ ಆ ಪೋರಿಗಿ ಸುಖಯಿಲ್ಲ...

ಯಾವುದಾದರ ಕೊರತಿ ಆಧಾರ ಇಲ್ಲದ ಅನಾಥ ಇಚಾರ ಕಾಡತಿರತತಿ, ಮತ್ತದರ ಮಿತಿ ದಾಟಿದಾಗ ಹೆಂಗಾರ ಪಡಕೊಳ್ಳಾಕ ಧಡಪಡಸಿದಾಳ ಅಷ್ಟ. ಮನಸ್ಸಿನ ನೆಮ್ಮದಿ ಮುಂದ ಎಲ್ಲಾನು ಖಾಲಿ.
 
ನೀ ಹಿಂದೊಮ್ಮಿ ಬಂದಾಗ ಇದ ರೀತಿ ಒಂದ ಪ್ರಸಂಗ, ಆದರ ಸ್ಥಿತಿ ಬ್ಯಾರೆ. ಆ ಹುಡುಗಿ ದೆವ್ವ ಬಿಡಿಸಿದೀನಿ. ಆಮ್ಯಾಲ ಆರಾಮ ಆದಳು... ನಿನ್ನ ಕಾಲಿಗಿ ನಮಸ್ಕಾರ ಮಾಡಿದಳು ನೆನಪ ಐತಿ...? ಆಕೀ ಆ ಸ್ಥಿತಿಗಿದ್ದ ಮೂಲ ಕಾರಣಾನೂ ನೆನಪ ಮಾಡಿಕೋ...~ ಭಗವಾನ ಮತ್ತೊಮ್ಮೆ ಚಿಲುಮಿಗೆ ಶರಣಾಗಲು ಸಿದ್ಧತೆ ನಡೆಸುವರು. ಅವಿನಾಶ ಪಾಟೀಲನ ಸ್ಮೃತಿಪಟಲದಲ್ಲಿ ಆ ಹುಡುಗಿ ನೆನಪಾಗಿ ಬರುವಳು. ಆಕೆ ಹುಚ್ಚಿಗೆ ಕಾರಣವಾದ ಮೂಲವು ಬಿಚ್ಚಿಕೊಳ್ಳುವುದು...

ಆಕೆ ಚೆಲುವಿನ ಖನಿ. ಆಕೆಯ ಅಸ್ವಸ್ಥತೆಗೆ ಕಾರಣ ಮೂಲಪ್ರವೃತ್ತಿಯ ಕಾಟ. ಆ ಚೆಲುವಿಗೆ ತಕ್ಕ ಗಂಡ ಆತನಲ್ಲ. ಆ ಯೋಗ್ಯತೆಯೇ ಇರಲಿಲ್ಲವೇನೋ? ಆ ಚಿಂತೆ ಚಿತೆಯಾಗಿ ಅವಳನ್ನು ದಹಿಸುತ್ತಿತ್ತು.

ಚಿಂತೆಯ ಗೆರೆಗಳು ಮೊಗದಲ್ಲಿದ್ದರೂ ಕಂಗಳ ಆಳದಲ್ಲಿ ಪ್ರೀತಿಯ ಒರತೆಯಿತ್ತು. ಆದರೆ ಆ ಒರತೆಯ ಹನಿಗೆ ಬಾಯಾರಿದವನಿಲ್ಲ! ಹಾಗೆ ನೋಡಿದರೆ ಆಕೆಯ ಗಂಡ ಹಣ ಮತ್ತು ರಾಜಕಾರಣದ ಹಿಂದೆ ಬಿದ್ದವ. ಈಚೆಗೆ `ಬ್ರೇಕಿಂಗ್ ನ್ಯೂಸ್~ ಒಂದರಲ್ಲಿ ಆತನೂ ಇದ್ದ.

ಹೊಳೆದಂಡೆ ತೋಟದಲ್ಲಿ ಘಟಿಸಿದ ಪ್ರಸಂಗ. ರಾತ್ರಿ ಡಿನ್ನರ್‌ಗೆ ಕರೆಸಿದ ಕರೆ ಹೆಣ್ಣನ್ನು ಕುಣಿಸಿ ಆಕೆಯನ್ನು ಬೆತ್ತಲುಗೊಳಿಸಿ ಬೀರಿನ ಅಭಿಷೇಕ ನಡೆಸಿದ ಕೀರ್ತಿ ಟೀವಿಗಳಲ್ಲಿ ಬಿಸಿ ಸುದ್ದಿಯಾಗಿತ್ತು.

ಒಂದೆಡೆ ಅತ್ತೆ ಮಾವಂದಿರ ಹಂಬಲ ಕೈಗೊಂದು ಕೂಸಿರಲಿ ಅಂತ. ಇನ್ನೊಂದೆಡೆ ಷಂಡ ಗಂಡನ ನಿರ್ವಿಣ್ಣತೆ. ಧರ್ಮದ ಕಟ್ಟಳೆಯ ಇಂದ್ರಿಯ ನಿಗ್ರಹಗಳ ಪರಂಪರೆಯ ಕುಟುಂಬ. ಆ ಸೂತ್ರಗಳು ಬದುಕಿನ ಅಳವಡಿಕೆಗಳು. ನಿರ್ದಿಷ್ಟ ಆಹಾರ ಪದ್ಧತಿ ಮತ್ತು ನಿತ್ಯ ವ್ಯವಹಾರಗಳ ವ್ಯವಸ್ಥೆಯ ಫಲವೋ... ಗೊತ್ತಿಲ್ಲ. ಅವನಲ್ಲಿ ಪೌರುಷದ ಕೊರತೆಯಿತ್ತು.

ಆಧುನಿಕ ಜೀವನಶೈಲಿಯ ಹಣ, ವ್ಯವಹಾರ ಮತ್ತು ತತ್ಸಂಬಂಧಿ ಹವ್ಯಾಸಗಳು ಹೊಸ ನಾಗರಿಕ ವ್ಯವಸ್ಥೆಯನ್ನು ಗ್ರಾಮೀಣಕ್ಕೂ ತಂದೊಡ್ಡಿವೆ. ಅದಕ್ಕೆ ಪೂರಕವೆಂಬಂತೆ ಈಚೆಗೊಂದು ವರದಿ ಹೇಳಿದ್ದು- `ಆಧುನಿಕ ಅತಿರೇಕಗಳ ಪರಿಣಾಮವು ಆರೋಗ್ಯದ ಮೇಲೆ ಭೀಕರರೂಪದಲ್ಲಿ ಅಪ್ಪಳಿಸಿದುದರಿಂದ ಪುರುಷರಲ್ಲಿ ನಪುಂಸಕತೆ ಅಧಿಕವಾಗಿದೆ...~

ಆಕೆ ಇರುಳುಗಳನ್ನು ಕೆಂಡದ ಮೇಲೆ ಕಳೆವಳು. ರಾತ್ರಿಯಿಡೀ ಕೋಣೆ ಹರಿದು ತಿನ್ನಲು ಹವಣಿಸುತ್ತದೆ. ಹಾಸಿಗೆಯಲ್ಲಿ ಹೊರಳಾಡಿ ಸುಡುವ ಮೈಗೆ ತಂಪೆರೆಚಲು ತನ್ನೆಲ್ಲ ಬಟ್ಟೆಗಳನ್ನು ಸರಸರನೆ ಬಿಚ್ಚಿ ಒಗೆವಳು. ನಿಶೆಯ ಮಂದಬೆಳಕು.
 
ನಿಲುವುಗನ್ನಡಿ ಎದುರು ನಿಲ್ಲುವಳು. ತನ್ನ ಬಿರುಸಾದ ಮೊಲೆತೊಟ್ಟು, ಕಿಬ್ಬೊಟ್ಟೆ, ತೊಡೆ, ಸಂಧಿಗಳನ್ನೆಲ್ಲ ಮೆಲ್ಲಗೆ ಉಜ್ಜಿ ಮುಲುಗುವಳು. ಸ್ವಮೈಥುನ ಸುಖದಲ್ಲಿ ಮಿಂದೆದ್ದ ಆಕೆ ತನ್ನ ದೇಹ ಐಸಿರಿಯ ಚೆಲುವನ್ನು ಮೋಹದಿಂದ ಮೊಗೆಮೊಗೆದು- ಅಳೆಅಳೆದು ಸ್ವಕಾಮಸುಖವನ್ನು ಅನುಭವಿಸುವಳು. ಯಾವ ಹೆಣ್ಣು ಬೆತ್ತಲಾಗಿ ತನ್ನ ದೇಹವನ್ನು ಅನುಭವಿಸುವಳೋ ಅವಳ ಅತೃಪ್ತಿ ವೃದ್ಧಿಗೊಳ್ಳುತ್ತ ಹೋಗುತ್ತದೆ.

ಒಮ್ಮೆ ಹೀಗೆಯೇ ಆಕೆ ಬೆತ್ತಲಾಗಿ ಕನ್ನಡಿ ಎದುರು ನಿಂತಾಗ ಆತ ಬಂದು ಕದ ತಟ್ಟಿದ. ದಿಗಂಬರೆಯಾಗಿಯೇ ಬಾಗಿಲು ತೆರೆದಳು. ಆ ಕ್ಷಣದ ಮೋಹಕ್ಕೆ ಅವನ ಮೇಲೆ ನುಗ್ಗಿದಳು. ಆದರೆ ಸರಿಯಾಗಿ ಸ್ಪಂದಿಸದ ಆತ ಅರ್ಧದಾರಿಗೂ ಬರದೆ ವಾಪಸ್ಸಾದ. ಆಕೆ ಅತೃಪ್ತಿಯ ಎರಡು ಕುಲುಮೆಗಳಲ್ಲಿ ಬೇಯುತ್ತಿದ್ದಳು. ಕಾಮ ಮತ್ತು ಸಂತಾನ. ಇವೆರಡರ ಸ್ಥಿತ್ಯಂತರವೇ ಹುಚ್ಚಾಟದ-ಭೂತಾಟದ ಜ್ವಾಲಾಮುಖಿ...

ಅವಿನಾಶ ನೆನಪಿನಿಂದ ಹೊರಬಂದು-
`ಕಾಕಾ, ಇವತ್ತ ಇಲ್ಲೇ ಗುಡ್ಯಾಗ ಪ್ರಸಾದ ತಗೋತೇನು. ಇಲ್ಲೇ ಅಂಗಳದಾಗ ಮಲಗತೇನು. ದಿಂಬು ಚಾಪಿ ಕಳಿಸು...~ ಅಂದ.

`ಏ ಪಾರ... ಇವತ್ತ ಬೇಸ್ತಾರ ಗಂಡಮಾಸಿ...ಇವತ್ತು ಯಾರೂ ಇಲ್ಲಿ ಮಲಗೋದಿಲ್ಲ... ನೋಡು ಮತ್ತ, ಹೆಣ್ಣು ದೆವ್ವಗಳ ಕೈಯಾಗ ಸಿಕ್ಕಿ-ಗಿಕ್ಕಿ!~ ಅಂತಂದು ಉಪಹಾಸದಿಂದ ನಕ್ಕರು.

`ಕಾಕಾ ನೀನ ಹೇಳಿ ಅಲ್ಲ.. ಮನಸ್ಯಾನಗಿಂತ ಮತ್ತೊಂದು ದೆವ್ವ ಎಲ್ಲಿ ಅಂತ~ ಮರುನಗೆ ಬೀರಿದ. 
                        *        *        *
ರವಿವಾರ ಮತ್ತು ಗುರುವಾರ ಗಂಡ ಅಮವಾಸ್ಯೆ. ಗಂಡ ಅಮವಾಸ್ಯೆ ದಿವಸ ಗುಡಿಯೊಳಗೆ ಯಾರೂ ಮಲಗುವದಿಲ್ಲ. ದೇವರು ಮತ್ತು ದೆವ್ವಗಳ ಮಧ್ಯೆ ಸಂಪರ್ಕ ಏರ್ಪಡುತ್ತದೆಂದು ಮುಖ್ಯ ದರವಾಜೆಯನ್ನು ತೆರೆದೇ ಇಟ್ಟಿರುವುದು ವಾಡಿಕೆ. ಗಂಡ ಅಮವಾಸ್ಯೆ ದಿನದಂದು ಹೆಣ್ಣು ದೆವ್ವಗಳು ಅಡ್ಡಾಡುತ್ತವೆ ಎಂಬ ನಂಬಿಕೆಯಿದೆ. ಚಾಪೆ ಹಾಸಿ ಅವಿನಾಶ ಮಲಗಿದ್ದ.

ನಿದ್ದೆ ಸುತಾರಾಂ ಸುಳೀತಿರಲಿಲ್ಲ. ಪ್ರಾಂಗಣ ತಂಪಾಗಿತ್ತು. ಇವತ್ತಿನ ದೆವ್ವ ಹಿಡಿದವಳ ಪ್ರಸಂಗ ಮತ್ತು ಆ ಚೆಲುವೆಯ ಮುಖವೊಮ್ಮೆ ಸುಳಿದಾಡಿ ಮಾಯವಾಯಿತು. ಸುತ್ತಲೂ ಗವ್ವನ್ನೋ ಕತ್ತಲೆ.
 
ದೇವರಿಗೆ ಬಂದವರು, ಪ್ರಸಾದ ಹಾಕಿದವರು ಎಲ್ಲರೂ ಟೆಂಟು ಕಿತ್ತುಕೊಂಡು ಮಾಯವಾಗಿದ್ದರು. ಹೊರಳಾಡಿ ಮಗ್ಗಲು ಬದಲಿಸಿ ನಿದ್ದೆಗೆ ಯತ್ನಿಸಿ ಪ್ರಯತ್ನಿಸಿ ಅವಿನಾಶ ಸೋತ.
 
ಮಧ್ಯರಾತ್ರಿ ಆಗಿರಬಹುದು. ಅಥವಾ ಅದಕ್ಕೂ ಹೆಚ್ಚು. ಎಷ್ಟೋ ಹೊತ್ತು ಚಡಪಡಿಸಿದ ಬಳಿಕ ಮೆಲ್ಲಗೆ ಜೋಂಪು ಹತ್ತಿತು. ಅಷ್ಟರಲ್ಲಿ ಯಾರದೋ ಹೆಜ್ಜೆ ಸಪ್ಪಳ ಕೇಳಿಸಿದಂತಾಯಿತು. ಕನಸೋ ನನಸೋ ಎಂಬ ಭ್ರಮೆಯ ಗುಂಗಿನಲ್ಲಿರುವಾಗಲೇ ಹೆಜ್ಜೆ ಸಪ್ಪಳ ಮತ್ತೂ ಹತ್ತಿರವಾಯಿತು. ಅವಿನಾಶ ಕಣ್ಣು ತೆರೆದ. ಎದುರಿಗೆ ಧುತ್ತೆಂದು ನಿಂತ ಅರೆಬೆತ್ತಲೆ ಹೆಣ್ಣು..!

ಕೆಲವು ಕ್ಷಣ ಗಾಬರಿಯಾಗಿ ಎದೆ ಹೊಡೆದುಕೊಳ್ಳತೊಡಗಿತು. ಹೆಣ್ಣು ದೆವ್ವವೋ ಏನೋ? ಧೈರ್ಯ ಒಟ್ಟುಗೂಡಿಸಿ ಸೂಕ್ಷ್ಮವಾಗಿ ನಿರುಕಿಸಿದ. ಅರೆ! ಅದೇ ಸುಂದರಿ...! ಅಬ್ಬಾ! ಮಂದ ಬೆಳಕಲ್ಲಿಯೂ ಚೆಲುವು ಇಮ್ಮಡಿಯಾಗಿ ಹೊರಹೊಮ್ಮಿದೆ. ಪೂರ್ತಿ ಬೆತ್ತಲಾಗಿದ್ದಾಳೆ.

ಕೈಯಲ್ಲಿ ಪುಟ್ಟ ಹಣತೆಯ ಆರತಿ ಮತ್ತು ತಟ್ಟೆ. ಇಳಿಬಿಟ್ಟ ಕೂದಲು. ಆ ಬೆಳಕಲ್ಲಿ ಇಡೀ ದೇಹ ಜೇನಿನಲ್ಲಿ ಒದ್ದೆಯಾದಂತೆ ಹೊಳಪು ಹೊಂದಿದೆ. ಸೊಕ್ಕಿದ ಮೊಲೆ ಮತ್ತು ತೊಟ್ಟುಗಳು ಹೆಜ್ಜೆ ಸದ್ದಿಗೆ ಮೆಲ್ಲಗೆ ಕುಲುಕಿ ಅವನ ತೊಡೆ ಬೆಚ್ಚಗಾಗಿ ಕಾಮೋತ್ತೇಜಿತನಾದ.

ಆಕೆ ನಿಧಾನಕ್ಕೆ ದೆವ್ವ ಬಿಡಿಸುವ ಅಂಗಳಕೆ ನಡೆದು ಬಂದಳು. ದೇವರಿಗೆ ಆರತಿ ಎತ್ತಿದಳು. ಆಕೆ ನಾಲ್ಕೈದು ಸುತ್ತು ಆರತಿ ಎತ್ತುತ್ತಿದ್ದಂತೆ ಅವಳ ಹಾಗಿರುವ ಹಲವಾರು ಬೆತ್ತಲೆ ಹೆಣ್ಣುಗಳು ಆರತಿ ಹಿಡಿದು ಸಾಲಾಗಿ ನಿಲ್ಲತೊಡಗುವರು. ಈ ಹಲವಾರು ಸಂಖ್ಯೆ ನೂರಾರು ರೂಪುಗಳಾಗಿ ಆರತಿ ಎತ್ತಿ `ಚಾಂಗಭಲೋ~ ಕೂಗುಗಳು ಮೊಳಗುವವು. ಅವಿನಾಶನ ತೊಡೆ ಕಾವು ತಣ್ಣಗೆ ಹಿಮಗಡ್ಡೆಯಂತಾಗಿ ಮೈ ಬೆವರತೊಡಗುವುದು.

ಅಷ್ಟರಲ್ಲಿ ಎಲ್ಲಿಂದಲೋ ಆ ಬೆತ್ತಲೆ ಹೆಣ್ಣುಗಳ ಗಂಡಂದಿರು ಒಬ್ಬೊಬ್ಬರಾಗಿ ಬೆತ್ತಲೆ ಬಂದು ನಿಲ್ಲುವರು. ಹಲವಾರು... ನೂರಾರು ಸಂಖ್ಯೆಯ ಬೆತ್ತಲೆ ಗಂಡುಗಳು... `ಚಾಂಗಭಲೋ~ ಕೂಗು ಮಾರ್ದನಿಗೊಳ್ಳುವುದು. ಹೆಣ್ಣುಗಳ ಮೈಯಲ್ಲಿ ಕಾಮವು ಉಕ್ಕುವುದು. ಕಾಮ ಮತ್ತು ಸಂತಾನ! ಸಂತಾನದ ಬಯಕೆ ಉತ್ಕಟಗೊಂಡು ಉಕ್ಕಿ ಸೊಕ್ಕಿ ನರನಾಡಿಗಳಲ್ಲಿ ಹರಿದು ಕಣ್ಣು ಕಿಡಿ ಕಾರತೊಡಗುವವು. ತಟ್ಟನೆ ಪಕ್ಕದ ಗಂಡಂದಿರ ಶಿಶ್ನಗಳತ್ತ ಗಮನ ಹರಿಯಿತು.

ಅವರ ಶಿಶ್ನಗಳು ಜೋತು ಬಿದ್ದಿದ್ದವು. ಆ ಜೋತು ಬಿದ್ದ ಶಿಶ್ನಗಳನ್ನು ಕಂಡು ಉನ್ಮತ್ತಗೊಂಡ ಹೆಣ್ಣುಗಳು ಆರತಿ ತಟ್ಟೆಯನ್ನು ನೆಲಕ್ಕೆ ಕುಕ್ಕಿ ಗಕ್ಕನೆ ಚೂರಿಗಳನ್ನು ಎತ್ತಿಕೊಂಡರು ಮತ್ತು ಅವರ ಶಿಶ್ನಗಳನ್ನು ಕಚಕಚನೆ ಕೊಚ್ಚಿ ಹಾಕಿದರು. ನೆತ್ತರು ಛಲ್ಲೆಂದು ಚಿಮ್ಮಿತು. ಹೆಣ್ಣುಗಳ ವಿಕಟ ನಗೆ.
 
ಗಂಡಂದಿರ ಆಕ್ರಂದನ ಅನುರಣಿಸಿತು. ಬೆದರಿ ಚೆಡ್ಡಿಯನ್ನು ಹಸಿಮಾಡಿಕೊಂಡ ಅವಿನಾಶ ಪಾಟೀಲ ಚಾಪೆಯನ್ನು ಬಿಟ್ಟು ಎದ್ದವನೇ ಒಂದೇ ನೆಗೆತಕ್ಕೆ ಓಡುವನು. ಎದ್ದೆನೋ ಬಿದ್ದೆನೋ ಎಂದು ಓಡುತ್ತಿದ್ದ ಆತ ಕಲ್ಲೊಂದಕ್ಕೆ ಎಡವಿ ದೊಪ್ಪನೆ ಬೀಳುವನು. ಕಣ್ಣು ತೆರೆದು ನೋಡಿದರೆ ಎದುರಿಗೆ ಅಚ್ಚರಿ ಮತ್ತು ಆಘಾತ. ತಾನು ಬಂದು ಬಿದ್ದಿದ್ದು ಹೇಲುಗಂಗೆಯ ದಡಕ್ಕೆ!

ಎದ್ದು ಸುತ್ತಲೂ ನೋಡುವನು. ಅಲ್ಲಿ ಅಕರಾಳ ವಿಕರಾಳ ದೇಹಗಳ ವಿಕೃತಿರೂಪಿ ಹಾಲುಂಡ ದೇಹಗಳು ವಿಚಿತ್ರವಾಗಿ ಆಕ್ರಂದನ ಮಾಡುತ್ತ ಇವನತ್ತಲೇ ಧಾವಿಸುತ್ತ ಬರುತ್ತಿದ್ದವು. ಆತ ದಿಗ್ಭ್ರಾಂತನಾಗಿ ಹಿಂದೆಯೂ ಹೊರಳಿ ನೋಡದೆ ಓಡುತ್ತ ಕತ್ತಲೆಯಲ್ಲಿ ಕರಗುವನು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT