ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಥೆಗಾರ, ಕವಿ ಬಿ. ರಾಜಣ್ಣ ನಿಧನ

Last Updated 21 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಬೆಂಗಳೂರು: ಭದ್ರಾವತಿಯ ವಿಶ್ವೇಶ್ವರಯ್ಯ­ ಉಕ್ಕು ಕಾರ್ಖಾನೆಯ ನಿವೃತ್ತ ಅಧಿಕಾರಿ ಹಾಗೂ ಕಥೆಗಾರ, ಕವಿ ಬಿ. ರಾಜಣ್ಣ (೬೫) ಶನಿವಾರ ಇಲ್ಲಿ ಹೃದಯಾಘಾತದಿಂದ ನಿಧನರಾದರು.

ಅವರಿಗೆ ಇಬ್ಬರು ಪುತ್ರರು ಮತ್ತು ಪುತ್ರಿ ಇದ್ದಾರೆ.

ಅಂತ್ಯಕ್ರಿಯೆ ಭಾನು­ವಾರ (ಡಿ. 22) ಅವರ ಹುಟ್ಟೂರು ಕೆ.ಆರ್‌.ನಗರ ತಾಲ್ಲೂಕು   ಸಾಲಿಗ್ರಾಮ­  ಸಮೀಪದ   ರಾಂಪುರ­ದಲ್ಲಿ ನಡೆಯಲಿದೆ.

ಶಿಗ್ಗಾವಿ ಸಮೀಪದ ಜಾನಪದ ವಿಶ್ವವಿದ್ಯಾಲಯದ ‘ಜಾನಪದ ನುಡಿ ಕೋಶ’ದ ಸಂಪಾದಕೀಯ ಬಳಗ­ದಲ್ಲಿ ಸಹಾಯಕ ಸಂಪಾದಕ­ರಾಗಿ ಅವರು ಸೇವೆ ಸಲ್ಲಿಸುತ್ತಿದ್ದರು.

ಅವರು ಗ್ರಾಮೀಣ ಸೊಗಡಿನ ವಿಶಿಷ್ಟ ಸಂವೇದನೆಯ ಲೇಖಕ.

ಮೂರು ಕಥಾ ಸಂಕಲನಗಳು ಮತ್ತು ಒಂದು ಕಾವ್ಯ ಸಂಕಲನದ ಮೂಲಕ ಕನ್ನಡ ಸಾಹಿತ್ಯ ಲೋಕಕ್ಕೆ ಪರಿಚಿತರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT