ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಥೆಗಾರನ ಕಥೆಗೆ ಹೂಂಗುಟ್ಟಿದ ಮಕ್ಕಳು

Last Updated 20 ಏಪ್ರಿಲ್ 2013, 11:03 IST
ಅಕ್ಷರ ಗಾತ್ರ

ಮುಳಬಾಗಲು: ಒಂದಾನೊಂದು ಕಾಲದಲ್ಲಿ ಗಿಳಿಗಳ ಹಿಂಡೊಂದು ಆಹಾರ ಹುಡಿಕಿ ಹೊರಟವು. ಬೇಸಿಗೆ ಕಾಲ, ಎಲ್ಲೂ ಹಣ್ಣು- ನೀರೂ ಸಿಗಲಿಲ್ಲ... ಹೀಗೆ ಕಥೆ ಶುರು ಮಾಡಿದ ಜಿಲ್ಲೆಯ ಹಿರಿಯ ಕಥೆಗಾರ ಸ.ರಘುನಾಥ್ ಪಟ್ಟಣದ ಅರಿವು ಕೇಂದ್ರದ ಮಕ್ಕಳನ್ನು ಸೋಮವಾರ ಸಂಜೆ ಆಕರ್ಷಿಸಿದರು.

ಬೇಸಿಗೆಯ ಬೇಗೆಯನ್ನು ಅನುಭವಿಸುತ್ತಿರುವ ಮಕ್ಕಳು ಪಕ್ಷಿಗಳ ಸ್ಥಿತಿಗೆ ಕರಗಿದರು.

ಮುಲ್ಲಾನಸ್ರುದ್ದೀನ್ ಸೇರಿದಂತೆ ಅನೇಕ ಬುದ್ಧಿವಂತರ ಕಥೆಗಳನ್ನು ಮಕ್ಕಳಿಗೆ ಪರಿಚಯಿಸಿದರು. ಕಥೆ ಓದುವ, ಹೇಳುವ ಮತ್ತು ಕೇಳಿಸಿಕೊಳ್ಳುವ ವಿಧಾನವನ್ನೂ ಕಲಿಸಿದರು.

ಅರಿವು ಕೇಂದ್ರ ಮಕ್ಕಳು ಸಂಗೀತ, ಚಿತ್ರಕಲೆ, ನತ್ಯ, ಯೋಗ, ಕಥೆ ಮೊದಲಾದವನ್ನು ಕಲಿಯುತ್ತಿದ್ದಾರೆ ಎಂದು ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಜಿ.ಶಿವಪ್ಪ ನುಡಿದರು. ಮುಖಂಡರಾದ ಕನ್ನಡ ಭಟ ವೆಂಕಟಪ್ಪ, ಚಂದ್ರ ಮೋಹನ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT