ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕದ್ದಾಲಿಕೆ: ರಾ ಮನವಿ ತಿರಸ್ಕರಿಸಿದ ಏರ್‌ಟೆಲ್

Last Updated 21 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ):  ದೂರವಾಣಿ ಕರೆ ಮಾಡಿದವರಿಗೆ ಗೊತ್ತಾಗದಂತೆ ಕಾನೂನುಬದ್ಧವಾಗಿಯೇ  ಆಲಿಸಲು  ಅವಕಾಶ ನೀಡುವಂತೆ ಕೋರಿ ವಿವಿಧ ಭದ್ರತಾ ಸಂಸ್ಥೆಗಳಿಂದ ಸಾಕಷ್ಟು ಬೇಡಿಕೆಗಳು ಬಂದಿರುವ ಹಿನ್ನೆಲೆಯಲ್ಲಿ, ದೇಶದ ಪ್ರಮುಖ ದೂರಸಂಪರ್ಕ ಸೇವಾ ಸಂಸ್ಥೆ ಏರ್‌ಟೆಲ್, ರಾಷ್ಟ್ರದ ಪ್ರಮುಖ ಬಾಹ್ಯ ಬೇಹುಕಾರಿಕಾ ಸಂಸ್ಥೆ `ರಾ~ದ ಮನವಿಯನ್ನು ನಯವಾಗಿಯೇ ತಿರಸ್ಕರಿಸಿದೆ.

ಕೆಲವು ದೂರವಾಣಿ ಕರೆಗಳನ್ನು ನ್ಯಾಯಸಮ್ಮತವಾಗಿ ಆಲಿಸಲು ಅವಕಾಶ ನೀಡುವಂತೆ ಸಂಶೋಧನಾ ಮತ್ತು ವಿಶ್ಲೇಷಣಾ ವಿಭಾಗವು (ಆರ್‌ಎಡಬ್ಲ್ಯು- `ರಾ~) ಭಾರ್ತಿ ಏರ್‌ಟೆಲ್‌ಗೆ ಮನವಿ ಮಾಡಿತ್ತು.

ಆದರೆ, ಇತರ ಭದ್ರತಾ ಸಂಸ್ಥೆಗಳೂ ಇದೇ ರೀತಿಯ ಮನವಿಗಳನ್ನು ಸಲ್ಲಿಸಿರುವ ಹಿನ್ನೆಲೆಯಲ್ಲಿ, ಆದ್ಯತೆಯ ಮೇರೆಗೆ ದೂರವಾಣಿ ಸಂಖ್ಯೆಗಳ ಆಲಿಕೆಗೆ ಅವಕಾಶ ನೀಡಲಾಗುವುದು. ನಿಮ್ಮ ಸರದಿ ಆನಂತರ ಬರಲಿದೆ ಎಂದು ಏರ್‌ಟೆಲ್ `ರಾ~ಗೆ ತಿಳಿಸಿದೆ.

ಏರ್‌ಟೆಲ್ ನೀಡಿರುವ ಪ್ರತಿಕ್ರಿಯೆಯನ್ನು ವಿರೋಧಿಸಿ, ಜಂಟಿ ಕಾರ್ಯದರ್ಶಿ ಶ್ರೇಣಿಯ `ರಾ~ ಅಧಿಕಾರಿ ಅರುಣ್ ಕೆ.ಸಿನ್ಹಾ ಅವರು ದೂರಸಂಪರ್ಕ ಇಲಾಖೆಗೆ ಪತ್ರ  ಬರೆದ್ದ್ದಿದಾರೆ. ದೇಶದ ಭದ್ರತೆ ವಿಷಯದಲ್ಲಿ ಏರ್‌ಟೆಲ್‌ನ ವರ್ತನೆ ಸ್ವೀಕಾರಾರ್ಹವಲ್ಲ ಎಂದು ದೂರಿದ್ದಾರೆ.

ನಿರ್ದಿಷ್ಟ ದೂರವಾಣಿಗಳನ್ನು ಪ್ರತಿಬಂಧಿಸುವ ಸಂಬಂಧ ಇಲಾಖೆಯ ಸೂಚನೆಯನ್ನು ಏರ್‌ಟೆಲ್ ಪಾಲಿಸುತ್ತಿಲ್ಲ ಎಂದು ಪತ್ರದಲ್ಲಿ ದೂರಲಾಗಿದೆ.

`ರಾ~ ಮುಂದಿಟ್ಟಿರುವ ಬೇಡಿಕೆ  ಈಡೇರಿಸುವುದು ಮಾತ್ರವಲ್ಲದೇ, ಬೇಹುಗಾರಿಕಾ ಸಂಸ್ಥೆಗೆ ಪ್ರತಿಕ್ರಿಯೆ ನೀಡಿದ ನಂತರದ ಬೆಳವಣಿಗೆಗಳ ಕುರಿತಂತೆ ವಿವರಣೆ ನೀಡುವಂತೆಯೂಏರ್‌ಟೆಲ್‌ಗೆ ದೂರಸಂಪರ್ಕ ಇಲಾಖೆ ಸೂಚಿಸಿತ್ತು.

ಈ  ಬಗ್ಗೆ ಪ್ರತಿಕ್ರಿಯಿಸಲು ಭಾರ್ತಿ ಏರ್‌ಟೆಲ್ ನಿರಾಕರಿಸಿದೆ. `ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ನಾವು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ~ ಎಂದು ಕಂಪೆನಿಯ ವಕ್ತಾರರೊಬ್ಬರು ಹೇಳಿದ್ದಾರೆ.

ದೇಶದಾದ್ಯಂತ ವಿವಿಧ ರಾಜ್ಯಗಳಲ್ಲಿ ಒಟ್ಟು 9,500 ದೂರವಾಣಿಗಳ ಕರೆಗಳನ್ನು ನ್ಯಾಯಸಮ್ಮತವಾಗಿ ಆಲಿಸಲಾಗಿದೆ. ಇವುಗಳಲ್ಲಿ 4,500 ದೂರವಾಣಿ ಕರೆಗಳನ್ನು ಆಗಸ್ಟ್ ತಿಂಗಳೊಂದರ್ಲ್ಲಲೇ ಆಲಿಸಲಾಗಿತ್ತು.
ಇವುಗಳಲ್ಲಿ  ಕೇವಲ ಹತ್ತು ದೂರವಾಣಿಗಳ ಮೇಲೆ ಮಾತ್ರ `ರಾ~ ನಿಗಾ ವಹಿಸಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT