ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಕಪುರ: ಬಂದ್‌ಗೆ ಉತ್ತಮ ಪ್ರತಿಕ್ರಿಯೆ

Last Updated 6 ಅಕ್ಟೋಬರ್ 2012, 19:25 IST
ಅಕ್ಷರ ಗಾತ್ರ

ಕನಕಪುರ: ವಿವಿಧ ಕನ್ನಡ ಪರ ಸಂಘಟನೆಗಳು ಶನಿವಾರ ಕರೆ ನೀಡಿದ್ದ ಕರ್ನಾಟಕ ಬಂದ್‌ಗೆ ತಾಲ್ಲೂಕಿನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಕರ್ನಾಟಕ ರಕ್ಷಣಾ ವೇದಿಕೆ, ಜಯ ಕರ್ನಾಟಕ, ರಾಜ್ಯ ರೈತ ಸಂಘ, ಅಖಿಲ ಕರ್ನಾಟಕ ದಲಿತ ಹಿಂದುಳಿದವರ ವೇದಿಕೆ, ವಕೀಲರ ಸಂಘ, ಕನ್ನಡ ಸೂರ್ಯ ಸೇನೆ, ಜವಳಿ ವರ್ತಕರ ಸಂಘ, ರಾಜಕುಮಾರ್ ಅಭಿಮಾನಿ ಬಳಗ, ವಿಶ್ವಕರ್ಮ ಮಹಾ ಮಂಡಳಿ, ಕನ್ನಡ ಸಾಹಿತ್ಯ ಪರಿಷತ್, ಮುಸ್ಲಿಂ ಯುವ ವೇದಿಕೆ, ಹಿಂದೂ ಜಾಗರಣ ವೇದಿಕೆ, ಎಬಿವಿಪಿ ಸೇರಿದಂತೆ ಜೆಡಿಎಸ್, ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರು ಪ್ರತಿಭಟನೆಯ್ಲ್ಲಲಿ ಪಾಲ್ಗೊಂಡು ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದರು.

ಸಾರಿಗೆ ಇಲಾಖೆ ಸೇರಿದಂತೆ ಖಾಸಗಿ ವಾಹನಗಳು ಸಂಚಾರವನ್ನು ಸಂಪೂರ್ಣ ಸ್ಥಗಿತಗೊಳಿಸಿದ್ದವು.  ಪ್ರಮುಖ ರಸ್ತೆಗಳಲ್ಲಿ ಟೈರುಗಳಿಗೆ ಬೆಂಕಿ ಹಚ್ಚಿ ಪಟ್ಟಣಕ್ಕೆ ಯಾವುದೇ ವಾಹನ ಬರದಂತೆ ಪ್ರತಿಭಟನಾಕಾರರು ತಡೆಯೊಡ್ಡಿದರು.

ವಿವಿಧ ಸಂಘಟನೆಯ ಮುಖಂಡರು ಪಟ್ಟಣದ ಹಳೇ ಕೆನರಾ ಬ್ಯಾಂಕ್ ಮುಂಭಾಗದ ವೃತ್ತದಲ್ಲಿ ರಸ್ತೆಗೆ ಶಾಮಿಯಾನ ಹಾಕಿ ಅಡುಗೆ ಮಾಡುವ ಮೂಲಕ ವಿನೂತನ ರೀತಿಯಲ್ಲಿ ಪ್ರತಿಭಟನೆ ಮಾಡಿದರು.
ಈ ವೇಳೆ ಜಯಲಲಿತಾ ಅವರ ಅಣಕು ಶವಯಾತ್ರೆ  ನಡೆಸಿ ಪ್ರತಿಕೃತಿ ದಹನ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT