ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಸಿನ ಚಿತ್ರ ಬರೆದಾಕೆ

ಕ–ಕಲಾಪ
Last Updated 1 ಜನವರಿ 2014, 19:30 IST
ಅಕ್ಷರ ಗಾತ್ರ

ಕಲಾಕುಂಚದ ಗೆರೆಯಿಂದ ಮೂಡಿಸಿದ ಗಣೇಶ, ಅದರ ಸನಿಹದಲ್ಲಿಯೇ ಮತ್ತೊಂದು ‘ಮೈ ಡ್ರೀಮ್‌ ಎಂಬ ಹೆಸರಿನಲ್ಲಿರುವ ಚಿತ್ರಪಟ, ಮೈಲ್ ಸ್ಟೋನ್‌, ಹ್ಯಾಂಡ್‌ ಬ್ಯಾಗ್‌ ಹೀಗೆ ಒಂದೊಂದು ಚಿತ್ರ ಒಂದೊಂದು ರೀತಿಯಲ್ಲಿ ಆಕರ್ಷಿಸುತ್ತಿತ್ತು.

ಚಿತ್ರಪಟದ ಹತ್ತಿರ ನಿಂತ ಕಲಾವಿದೆ ಪ್ರೀತಿ ತಾವು ಬಿಡಿಸಿದ ಚಿತ್ರದ ಬಗ್ಗೆ  ಅಷ್ಟೇ ಪ್ರೀತಿಯಿಂದ ವಿವರಿಸುತ್ತಿದ್ದರು . ದೆಹಲಿ ಮೂಲದ ಪ್ರೀತಿ ಇದೇ ಮೊದಲ ಬಾರಿಗೆ ಚಿತ್ರಕಲಾ ಪರಿಷತ್‌ನಲ್ಲಿ ಏಕವ್ಯಕ್ತಿ  ಪ್ರದರ್ಶನ ನೀಡುತ್ತಿದ್ದಾರೆ.

‘ಕನಸಿಗೆ ಬಣ್ಣ ತುಂಬಿದ್ದೇನೆ’ ಎನ್ನುವ ಪ್ರೀತಿಗೆ ಕನಸೇ ಸ್ಫೂರ್ತಿ ಅಂತೆ. ಬಾಲ್ಯದಲ್ಲಿಯೇ ಬಣ್ಣದ ಗೀಳಿಗೆ ಮನಸೋತಿರುವ ಇವರಿಗೆ ಚಿತ್ರ ಬಿಡಿಸುವಾಗ ಸಿಗುವ ನೆಮ್ಮದಿ, ಖುಷಿ ಬೇರೆ ಯಾವುದರಲ್ಲಿಯೂ ಸಿಗುವುದಿಲ್ಲವಂತೆ. ‘ಚಿತ್ರ ಬಿಡಿಸಬೇಕು ಎಂದು ನಾನು ಯಾವತ್ತೂ ಬೇರೆ ಕಡೆ ಹೋಗಿ ಕುಳಿತಿಲ್ಲ, ವಿಷಯ ಹುಡುಕುವುದಕ್ಕಾಗಿ ಕಸರತ್ತೂ ಮಾಡಿಲ್ಲ. ರಾತ್ರಿ ಕನಸಿನಲ್ಲಿ ಬರುವ ವಿಷಯಗಳೇ ನನ್ನ ಕುಂಚದಲ್ಲಿ ರೂಪ ಪಡೆಯುತ್ತವೆ’ ಎನ್ನುತ್ತಾರೆ.

ಕಲೆಯನ್ನೇ ಪ್ರವೃತ್ತಿಯಾಗಿಸಿಕೊಂಡಿರುವ ಪ್ರೀತಿ ಅವರಿಗೆ ಮನೆಯವರಿಂದಲೂ ಬೆಂಬಲ ಸಿಕ್ಕಿದೆಯಂತೆ. ಲಖನೌ ವಿಶ್ವವಿದ್ಯಾನಿಲಯದಲ್ಲಿ ಕಲೆಯ ಕುರಿತು ಅಭ್ಯಾಸ ಮಾಡಿರುವ ಇವರಿಗೆ ಕುಂಚ ಹಿಡಿದಾಗ ಮನಸ್ಸಿನ ಒತ್ತಡ ಕಡಿಮೆ ಆಗುತ್ತದೆಯಂತೆ. ಕಂಡ ಕನಸನ್ನು ಚಿತ್ರಕಲೆಯ ಮೂಲಕ ಜೀವಂತವಾಗಿಸುವ ಪ್ರೀತಿ ಅವರಿಗೆ ಕಲೆಯ ಮೂಲಕ ಇನ್ನಷ್ಟು ಸಾಧನೆ ಮಾಡುವ ಆಸೆ.

ಕುಮಾರಕೃಪಾ ರಸ್ತೆಯಲ್ಲಿರುವ ಚಿತ್ರಕಲಾ ಪರಿಷತ್‌ನಲ್ಲಿ ಶುಕ್ರವಾರ (ಜ.3)ರವರೆಗೆ ಇವರ ಚಿತ್ರಕಲಾ ಪ್ರದರ್ಶನವಿರುತ್ತದೆ.
ಸಮಯ ಬೆಳಿಗ್ಗೆ 11.30.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT