ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಿಮೊಳಿಗೆ ಸಿಗಲಿಲ್ಲ ಜಾಮೀನು

Last Updated 8 ಜೂನ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ: ಎರಡನೇ ತಲೆಮಾರಿನ ರೇಡಿಯೋ ತರಂಗಾಂತರ ಹಗರಣದಲ್ಲಿ ಭಾಗಿಯಾದ ಆರೋಪ ಹೊತ್ತಿರುವ ಡಿಎಂಕೆ ಸಂಸದೆ ಕನಿಮೋಳಿ ಮತ್ತು

`ಕಲೈಂಜ್ಞರ್ ಟಿವಿ~ ವ್ಯವಸ್ಥಾಪಕ ನಿರ್ದೇಶಕ ಶರದ್ ಕುಮಾರ್ ಅವರಿಗೆ ಜಾಮೀನು ನೀಡಲು ದೆಹಲಿ ಹೈಕೋರ್ಟ್ ಬುಧವಾರ ನಿರಾಕರಿಸಿತು.`ಡಿಬಿ ರಿಯಾಲಿಟಿ ಕಂಪೆನಿ~ಯಿಂದ ಕಲೈಂಜ್ಞರ್ ಟಿವಿಗೆ ಸುತ್ತಿ ಬಳಸಿ 200ಕೋಟಿ ಜಮಾ ಮಾಡಿರುವುದನ್ನು ಗಮನಿಸಿದರೆ ಹಣದ ವ್ಯವಹಾರ ವನ್ನು ಮುಚ್ಚಿಡುವ ಪ್ರಯತ್ನ ಮಾಡಿದ್ದಾರೆಂಬುದು ಕಂಡುಬರುತ್ತದೆ ಎಂದು ನ್ಯಾಯಮೂರ್ತಿವಿವರಿಸಿದ್ದಾರೆ.`ಸ್ವಾನ್ ಟೆಲಿಕಾಂ~ ಪ್ರವರ್ತಕರಾದ ಶಾಹಿದ್ ಉಸ್ಮಾನ್ ಬಲ್ವ, ವಿನೋದ್ ಗೋಯೆಂಕಾ ಅವರ `ಡಿಬಿ ರಿಯಾಲಿಟಿ ಗ್ರೂಪ್ ಆಫ್ ಕಂಪೆನಿ~ ಖಾತೆಯಿಂದ 200 ಕೋಟಿ ಲಂಚದ ಹಣವನ್ನು ಅಕ್ರಮವಾಗಿ `ಕಲಂಜ್ಞೈರ್ ಟಿವಿ~ ಖಾತೆಗೆ ಪಡೆದಿದ್ದಾರೆ ಎಂಬ ಸಿಬಿಐ ಆರೋಪವನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿದೆ. `ಸನ್ ಟಿವಿ ನೆಟ್‌ವರ್ಕ್~ಗೆ ಮತ್ತೊಂದು ಕಂಪೆನಿಯಿಂದ ಅಕ್ರಮವಾಗಿ ಹಣ ಸ್ವೀಕರಿಸಿದ ಆರೋಪಕ್ಕೆ ಒಳಗಾಗಿದ್ದಾರೆ. ಆದರೆ, ಸಚಿವರು ಆರೋಪ ನಿರಾಕರಿಸಿದ್ದಾರೆ.

ಆರೋಪಿಗಳ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ನ್ಯಾ. ಅಜಿತ್ ಭಾರಿಹೋಕ್, ಪ್ರಬಲ ರಾಜಕೀಯ ಸಂಪರ್ಕ ಹೊಂದಿರುವ ಆರೋಪಿಗಳು ಸಾಕ್ಷಿಗಳ ಮೇಲೆ ಪ್ರಭಾವ ಬೀರಿ ತನಿಖೆ ದಿಕ್ಕು ತಪ್ಪಿಸುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎಂದು 37 ಪುಟಗಳ ಆದೇಶದಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ಆರೋಪಿಗಳು ಹೊಂದಿರುವ ಹಣಕಾಸು ಮತ್ತು ರಾಜಕೀಯ ಬೆಂಬಲ ಗಮನಿಸಿದರೆ, ಅವರು ತನಿಖೆಯಲ್ಲಿ ಹಸ್ತಕ್ಷೇಪ ಮಾಡಿ, ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿದೆ. ಆದ ಕಾರಣ ಈ ಹಂತದಲ್ಲಿ ಜಾಮೀನು ಅರ್ಜಿಯನ್ನು ಪುರಸ್ಕರಿಸಲಾಗದು ಎಂದು ನ್ಯಾಯಮೂರ್ತಿ ಹೇಳಿದ್ದಾರೆ.

ಹಗರಣದಲ್ಲಿ ಕನಿಮೋಳಿ ಮತ್ತು ಶತದ್ ಕುಮಾರ್ ಅವರ ಪಾತ್ರವನ್ನು ಕುರಿತು ವಿಶ್ಲೇಷಿಸಿರುವ ನ್ಯಾ ಯ ಮೂರ್ತಿಗಳು, ಇವರು ಪಿತೂರಿಯಲ್ಲಿ ಭಾಗಿಯಾಗಿದ್ದಾರೆ, ಅಕ್ರಮ ವಾಗಿ ಹಣ ಸ್ವೀಕರಿಸಿದ್ದಾರೆ ಎಂದು ನಂಬಲು ಮೇಲ್ನೋಟಕ್ಕೆ ಸಾಕಷ್ಟು ಸಾಕ್ಷ್ಯಾಧಾರಗಳಿವೆ ಎಂದಿದ್ದಾರೆ.

ಸಂದರ್ಭಗಳು, ವಾಸ್ತವಾಂಶಗಳು ಹಾಗೂ ಮೇಲ್ನೋಟಕ್ಕೆ ಕಂಡುಬರುವ ಸಾಕ್ಷಿಗಳು, 200ಕೋಟಿ ಹಣ ಸ್ವೀಕಾರ ಇವೆಲ್ಲವೂ ಹಗರಣದಲ್ಲಿ ಅವರು ಭಾಗಿ ಯಾಗಿದ್ದಾರೆ ಎಂಬುದನ್ನು ನಿರೂಪಿಸು ತ್ತವೆ. ಶಾಹಿದ್ ಬಲ್ವ ಅವರ

ಕಲೈಂಜ್ಞರ್ ಟಿವಿ ಆಡಳಿತ ಮಂಡಳಿ ಸಭೆಯನ್ನು ನಿರಂತರವಾಗಿ ನಡೆಸುತ್ತಿದ್ದ ಶರದ್ ಕು ಮಾರ್ ವಾಹಿನಿಯ ಕೆಲಸಗಳಿಗಾಗಿ ರಾಜಾ ಅವರನ್ನು ಭೇಟಿ ಮಾಡುತ್ತಿದ್ದ ರು ಎಂದು ಸಿಬಿಐ ಆರೋಪ ಪಟ್ಟಿಯಲ್ಲಿ ಪ್ರಸ್ತಾಪಿಸಿರುವುದನ್ನು ನ್ಯಾಯಾಲಯ ಪರಿಗಣಿಸಿದೆ.

ಕನಿಮೊಳಿ ಕಲೈಂಜ್ಞರ್ ಟಿವಿಯಲ್ಲಿ ಶೇ. 20ರಷ್ಟು ಪಾಲು ಬಂಡವಾಳ ಹೊಂದಿದ್ದಾರೆ. ವಾಹಿನಿ ಕಾರ್ಯಾಚರಣೆಯ ಹಿಂದಿನ ಪ್ರಮುಖ ಶಕ್ತಿಯಾಗಿ ದ್ದಾರೆ. 2009ರಲ್ಲಿ ರಾಜಾ ಅವರನ್ನು ದೂರಸಂಪರ್ಕ ಖಾತೆ ಸಚಿವರಾಗಿ ಮರು ನೇಮಕ ಮಾಡಲು ಡಿಎಂಕೆ ಕೇಂದ್ರ ಕಚೇರಿ ಮೇಲೆ ಸಾಕಷ್ಟು ಪ್ರಭಾವ ಬೀರಿದ್ದಾರೆಂಬ ಸಿಬಿಐ ಆರೋಪ ಪಟ್ಟಿ ಉಲ್ಲೇಖಿಸಿ ನ್ಯಾ. ಭಾರಿಹೋಕ್ ಹೇಳಿದ್ದಾರೆ.

2ಜಿ ಹಗರಣದ ತನಿಖೆ ನಡೆಸುತ್ತಿರುವ ಸಿಬಿಐ ಎರಡನೇ ಆರೋಪ ಪಟ್ಟಿಯಲ್ಲಿ 43 ವರ್ಷದ ರಾಜಕಾರಣಿ ಕನಿಮೋಳಿ ಮತ್ತು ಶರದ್ ಕುಮಾರ್ ಅವರನ್ನು ಹೆಸರಿಸಿದೆ. 200 ಕೋಟಿ ರೂಪಾಯಿ ಲಂಚ ಸ್ವೀಕರಿಸಿದ ಆರೋಪಕ್ಕೆ ಒಳಗಾಗಿರುವ ಇಬ್ಬರೂ ಮೇ 20 ರಂದು ವಿಶೇಷ ನ್ಯಾಯಾಲಯ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ಬಳಿಕ ಬಂಧಿತರಾಗಿ ತಿಹಾರ್ ಜೈಲಿನಲ್ಲಿದ್ದಾರೆ.

2ಜಿ ಪರವಾನಗಿ ಮಂಜೂರಾತಿಗೆ ಸಂಬಂಧಿಸಿದಂತೆ ಹಗರಣದ ಪ್ರಮುಖ ಆರೋಪಿ ಬಂಧಿತ ಮಾಜಿ ಟೆಲಿಕಾಂ ಸಚಿವ ಎ. ರಾಜಾ ಅವರಿಂದ ಲಾಭ ಪಡೆದಿದ್ದಕ್ಕಾಗಿ ಸಹ ಆರೋಪಿಗಳಾದ

2ಜಿ ಹಗರಣದಲ್ಲಿ ಯುಪಿಎ ಸರ್ಕಾರದ ಜವಳಿ ಖಾತೆ ಸಚಿವ ದಯಾನಿಧಿ ಮಾರನ್ ಪಾತ್ರ ಕುರಿತು ಸಿಬಿಐ ತನಿಖೆ ನಡೆಸುತ್ತಿದೆ. ಮಾರನ್ ದೂರ ಸಂಪರ್ಕ ಖಾತೆ ಸಚಿವರಾಗಿದ್ದಾಗ ಸೋದರ ಕಲಾನಿಧಿ ಮಾರನ್ ಮುಖ್ಯಸ್ಥರಾಗಿರುವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT