ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಿಷ್ಠಕೂಲಿಗೆ ಆಗ್ರಹಿಸಿ ಪ್ರತಿಭಟನೆ

Last Updated 11 ಜನವರಿ 2014, 6:27 IST
ಅಕ್ಷರ ಗಾತ್ರ

ಬಾಗಲಕೋಟೆ: ಕನಿಷ್ಠಕೂಲಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜಿಲ್ಲೆಯ ಅಂಗನವಾಡಿ ಕಾರ್ಯಕರ್ತೆ­ಯರು ಸಿಐಟಿಯು ನೇತೃತ್ವದಲ್ಲಿ ಶುಕ್ರವಾರ ನವನಗರದ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿದರು.

ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಕೆಲಸ ಕಾಯಂ­ಗೊಳಿಸಿ, ಸಾಮಾಜಿಕ ಭದ್ರತೆ ನೀಡ­ಬೇಕು, ಕನಿಷ್ಠ ರೂ 10 ಸಾವಿರ ವೇತನ ನೀಡ­ಬೇಕು ಎಂದು ಆಗ್ರಹಿ­ಸಿದರು.

ಐಸಿಡಿಎಸ್‌ ಖಾಸಗೀಕರಣ ನಿಲ್ಲಿಸ­ಬೇಕು, ಪ್ರತಿ ತಿಂಗಳು 5ನೇ ತಾರೀಕಿ­ನೊಳಗೆ ಗೌರವಧನ ಸಂದಾಯ ಮಾಡ­ಬೇಕು, ಹೆಚ್ಚುವರಿ ರೂ 500 ಗೌರವಧನ ನೀಡಬೇಕು, ಕಟ್ಟಿಗೆ ಹಣ ರೂ 100 ರಿಂದ ರೂ 500ಕ್ಕೆ ಹೆಚ್ಚಿಸಬೇಕು, ಅಂಗನವಾಡಿ ಕೇಂದ್ರದ ಬಾಡಿಗೆ ಹಣ ಹೆಚ್ಚಿಸಬೇಕು, ಮಕ್ಕಳಿಗೆ ಸಮವಸ್ತ್ರ ನೀಡಬೇಕು, ಬೇರೆ ಇಲಾಖೆ ಹೆಚ್ಚುವರಿ ಕೆಲಸ ವಹಿ­ಸಬಾರದು ಎಂದರು.

ಪ್ರತಿ ಹಳ್ಳಿ, ನಗರ ಪ್ರದೇಶ­ದಲ್ಲಿ ಅಂಗನ­­­ವಾಡಿ ಕಟ್ಟಡಗಳನ್ನು ಕೂಡಲೇ ಕಟ್ಟಿಸಬೇಕು, ಅಂಗನ­ವಾಡಿ ಕಾರ್ಯ­ಕರ್ತೆ­­ಯರು, ಸಹಾಯಕಿಯರಿಗೆ ನಿವೇಶನ ನೀಡಬೇಕು, ಬಿಪಿಎಲ್‌ ಕಾರ್ಡ್‌ ವಿತರಿಸಬೇಕು, ಭಾಗ್ಯಲಕ್ಷ್ಮಿ ಮತ್ತು ಸ್ತ್ರೀಶಕ್ತಿ ಸಂಘಗಳ ಪ್ರೋತ್ಸಾಹ­ಧನ ನೀಡಬೇಕು ಎಂದರು.

ಕಾರ್ಯಕರ್ತೆಯರು ಮತ್ತು ಸಹಾ­ಯಕಿಯರಿಗೆ ಗುಣ­ಮಟ್ಟದ ಸಮವಸ್ತ್ರ ನೀಡಬೇಕು, ಪ್ರತಿ­ಕೇಂದ್ರಕ್ಕೂ ಗ್ಯಾಸ್‌ ಸಿಲಿಂಡರ್‌ ಕೊಡ­ಬೇಕು, ಪ್ರತಿ ತಿಂಗಳು ಸಭೆಗೆ ಬರಲು ಬಸ್‌ ಪ್ರಯಾಣ, ಊಟದ ಖರ್ಚು ನೀಡಿ, ಬೇಸಿಗೆ ರಜೆ ಹೆಚ್ಚಿಸ­ಬೇಕು ಎಂದು ಒತ್ತಾಯಿಸಿದರು.

ಅಂಗನವಾಡಿ ನೌಕರರ ಸಂಘದ ಬಾಗಲ­ಕೋಟೆ ತಾಲ್ಲೂಕು ಘಟಕದ ಎ. ಗೌಡರ, ಕೆ.ಯಾವಗಲ್‌, ಎಚ್‌.ಕೆ. ದಾಸರ, ಜಿ.ಬಿ. ದೇಶಪಾಂಡೆ, ಬೀಳಗಿ ಘಟಕದ ಎಂ.ಸಿ. ಶಹಾಪುರ, ವಿ.ಬಿ. ಅಣ್ಣೆಪ್ಪ­ನವರ, ಹುನಗುಂದ ಘಟಕದ ಎಂ.ಪಿ. ಗಾಳಪೂಜಿಮಠ, ಎಸ್‌.ಬಿ. ಮೇಟಿ, ಮುಧೋಳ ಘಟಕದ ಎ.ಎಂ. ತಿಪ್ಪಿಮಠ, ಆರ್‌.ಎಸ್‌. ಸ್ವಾಮಿ, ಜಮ­ಖಂಡಿ ಘಟಕದ ಎ. ಕಾಮರೆಡ್ಡಿ, ಆರ್‌. ಪೂಜಾರಿ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT