ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಿಷ್ಠವೇತನ ನೀಡಲು ಒತ್ತಾಯ

ಜಿಲ್ಲಾ ಮಟ್ಟದ ಆಶಾಕಾರ್ಯಕರ್ತೆಯರ ಸಮಾವೇಶ
Last Updated 9 ಜನವರಿ 2014, 8:49 IST
ಅಕ್ಷರ ಗಾತ್ರ

ದೇವನಹಳ್ಳಿ:  ರಾಜ್ಯದಲ್ಲಿ ಕನಿಷ್ಠ ದಿನದ ಕೂಲಿಯು ಇಲ್ಲದಂತೆ ಆರೋಗ್ಯ ಸೇವೆಯಲ್ಲಿ ತೊಡಗಿಸಿ ಕೊಂಡಿ ರುವ ಆಶಾ ಕಾರ್ಯಕರ್ತೆಯರಿಗೆ ಸರ್ಕಾರ ಇಂದಿನ ದಿನಮಾನಕ್ಕೆ ತಕ್ಕಂತೆ ಕನಿಷ್ಠ ವೇತನ ನೀಡಬೇಕು ಎಂದು ಯುಟಿಯುಸಿ ರಾಜ್ಯ ಉಪಾಧ್ಯಕ್ಷ ಎಂ.ಎನ್.ಶ್ರೀರಾಮ್ ಒತ್ತಾಯಿಸಿದರು.

ಗುರುಭವನದಲ್ಲಿ ರಾಜ್ಯ ಸಂಯುಕ್ತ ಆಶಾ ಕಾರ್ಯ ಕರ್ತೆ ಸಂಘದ ವತಿಯಿಂದ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಆಶಾ ಕಾರ್ಯಕರ್ತೆಯರ ಸಮಾವೇಶವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಕೇಂದ್ರ ಆರೋಗ್ಯ ಸಚಿವಾಲಯ ಆಶಾ ಕಾರ್ಯ ಕರ್ತೆಯರಿಗೆ ಮಾಸಿಕ `1000  ನಿಗದಿಪಡಿಸಿ ರುವುದನ್ನು ಬಿಟ್ಟರೆ ಹೆರಿಗೆ ಮತ್ತು ಇತರೆ ಚುಚ್ಚು ಮದ್ದುಗಳ ಖರ್ಚನ್ನು ನೀಡುತ್ತಿಲ್ಲ.

ಗ್ರಾಮೀಣ ಭಾಗ ದಿಂದ ಮಹಿಳೆಯರು ಮತ್ತು ಮಕ್ಕಳನ್ನು ಕರೆ ತಂದರೆ ` 300  ನೀಡಲಾಗುತ್ತದೆ. ಇದು ಯಾವತ್ತೋ ಒಂದು ದಿನದ ನಿರೀಕ್ಷೆ ಆಗಿರುತ್ತದೆ. ಯಾವುದೇ ಭದ್ರತೆ ಇಲ್ಲದೆ ಕರ್ತವ್ಯ ನಿರ್ವಹಿಸುವವರಿಗೆ ದುಡಿಮೆಗೆ ತಕ್ಕ ಕೂಲಿ ನೀಡಲು ಸರ್ಕಾರಕ್ಕೆ ಇಚ್ಚಾಶಕ್ತಿ ಇಲ್ಲ. ಪಂಚಾಯಿತಿ ಅಥವಾ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವಿಶ್ರಾಂತಿ ಕೊಠಡಿ ವ್ಯವಸ್ಥೆ ಇಲ್ಲ. ಇವರಿಗೆ ಪ್ರಯಾಣ ಭತ್ಯೆಯೂ ಇಲ್ಲ. ಆದ್ದರಿಂದ ತಮ್ಮ ಬೇಡಿಕೆಗಳ ಈಡೇರಿಕೆಗಾಗಿ  ಪ್ರತಿಯೊಬ್ಬ ಆಶಾ ಕಾರ್ಯಕರ್ತೆಯರೂ ಸಂಘಟಿತ ರಾಗಬೇಕು ಎಂದರು.

ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯ ಕಾರ್ಯದರ್ಶಿ ಡಿ.ನಾಗಲಕ್ಷ್ಮಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಆರೋಗ್ಯ ಕ್ಷೇತ್ರದ ಆಧಾರ ಸ್ತಂಭ ಎನಿಸಿರುವ ಆಶಾ ಕಾರ್ಯಕರ್ತೆಯರು ಹಲ ವಾರು ವರ್ಷಗಳಿಂದ ಸೇವೆಯಲ್ಲಿದ್ದರೂ ಅವರ ಬೇಡಿಕೆ ಗಳು ಪೂರ್ಣವಾಗಿಲ್ಲ ಎಂದರು.

ವಿಶ್ವಕ್ಕೆ ಮಾದರಿ ಎನಿಸಿರುವ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಹಿಳೆಯರನ್ನು ಈ ರೀತಿ ಯಾಕೆ ಶೋಷಣೆ ಮಾಡಲಾಗುತ್ತಿದೆ ಎಂದು ಪ್ರಶ್ನಿಸಿದ ಅವರು, ‘ ಬಲವಂತದಿಂದ ಕೆಲಸ ಮಾಡುತ್ತಿರುವುದು ಸಲ್ಲದು ಎಂದರು.ಅರೆಕಾಲಿಕ ನೌಕರರನ್ನು ಕೂಡಲೇ ಕಾಯಂ ಗೊಳಿಸಬೇಕು. ಆಶಾಕಾರ್ಯಕರ್ತೆಯರಿಗೆ ಕೆಲಸಕ್ಕೆ ತಕ್ಕಂತೆ ಪ್ರೋತ್ಸಾಹ ಧನ ನೀಡಬೇಕು ಎಂದು ಒತ್ತಾ ಯಿಸಿದರು.

ಕಳೆದ ನಾಲ್ಕು ವರ್ಷಗಳ ಹೋರಾಟದ ಫಲದಿಂದ ರಾಜ್ಯದ ` 35 ಸಾವಿರ ಆಶಾ ಕಾರ್ಯಕರ್ತೆಯರಿಗೆ ಮ್ಯಾಚಿಂಗ್ ಇನ್ಸೆಂಟಿವ್ ನೀಡಲು ಸರ್ಕಾರ ಒಪ್ಪಿದೆ, ಉಚಿತ ಮೊಬೈಲ್ ಮತ್ತು ಸಿಮ್ ಸೌಲಭ್ಯ ವಿತರಣೆ ಎರಡು ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಆದರೆ ಸಮ ವಸ್ತ್ರ, ಉಚಿತ ಆರೋಗ್ಯ, ಚಿಕಿತ್ಸೆ ಮತ್ತು ನೆರವು, ಜೀವ ವಿಮೆ ಸೌಲಭ್ಯ, ಆಶಾ ಕುಟುಂಬದ ಸದಸ್ಯರಿಗೆ ವಾಜಪೇಯಿ ಆರೋಗ್ಯ ಶ್ರೀ ಕಾರ್ಡ್ ವಿತರಣೆ, ನಿಗದಿತ ಸಮಯಕ್ಕೆ ಪ್ರೋತ್ಸಾಹಧನ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಭರವಸೆ ನೀಡಿದೆ. ಆದರೆ ಯಾವುದೇ ಕ್ಷಣದಲ್ಲಿ ಹೋರಾಟ ನಡೆಸಿದರೂ ಅದಕ್ಕೆ ಕಾರ್ಯರ್ತೆಯರು ಸಿದ್ಧ ಇರಬೇಕು ಎಂದರು.

ಆಶಾ ಕಾರ್ಯಕರ್ತೆಯರ ಜಿಲ್ಲಾ ಅಧ್ಯಕ್ಷೆ ಟಿ.ಸಿ.ರಮಾ ಅಧ್ಯಕ್ಷತೆ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT