ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಕಲಿಕೆ ಸಂವಿಧಾನ ಬದ್ಧ ಹಕ್ಕು: ಶಾಸಕ ರಸಾಕ್‌

Last Updated 23 ಸೆಪ್ಟೆಂಬರ್ 2013, 10:15 IST
ಅಕ್ಷರ ಗಾತ್ರ

ಕಾಸರಗೋಡು: ಮಾತೃಭಾಷೆ ತಾಯಿಗೆ ಸಮಾನ. ಕಾಸರಗೋಡಿನಲ್ಲಿ ಕನ್ನಡ ಕಲಿಕೆ ಸಂವಿಧಾನ ಬದ್ಧ ಹಕ್ಕಾಗಿದ್ದರೂ ಇಲ್ಲಿ ಕನ್ನಡಿಗರಿಗೆ ಪದೇ ಪದೇ ಆಘಾತವಾಗುತ್ತಲೇ ಇದೆ. ಇಲ್ಲಿನ ಕನ್ನಡಿಗರ ಸಂವಿಧಾನಬದ್ಧ ಹಕ್ಕುಗಳನ್ನು ಸಂರಕ್ಷಿಸುವಂತೆ ಸರ್ಕಾರದ ಮೇಲೆ ಶಾಸಕನಾಗಿ ಒತ್ತಡ ಹೇರುತ್ತಲೇ ಇದ್ದೇನೆ ಎಂದು ಮಂಜೇಶ್ವರ ಶಾಸಕ ಪಿ.ಬಿ.ಅಬ್ದುಲ್‌ ರಸಾಕ್‌ ಹೇಳಿದರು.

ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಮಂಜೇಶ್ವರ ಉಪಜಿಲ್ಲಾ ಸಮ್ಮೇಳನವನ್ನು ಉಪ್ಪಳ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಇತ್ತೀಚೆಗೆ ಉದ್ಘಾಟಿಸಿ ಅವರು ಮಾತನಾಡಿದರು.

ಸಂಘದ ಮಂಜೇಶ್ವರ ಉಪಜಿಲ್ಲಾ ಘಟಕದ ಅಧ್ಯಕ್ಷ ಕೆ.ಸತ್ಯನಾರಾಯಣ ಭಟ್‌ ಆನೆಕಲ್ಲು ಅಧ್ಯಕ್ಷತೆ ವಹಿಸಿದ್ದರು.
ಮಂಗಳೂರು ಆಕಾಶವಾಣಿಯ ಕಾರ್ಯಕ್ರಮ ನಿರ್ವಾಹಕ ಡಾ.ಸದಾನಂದ ಪೆರ್ಲ, ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ಎನ್‌.ಸದಾಶಿವ ನಾಯಕ್‌, ಅಧ್ಯಾಪಕರ ಸಂಘದ ಕೇಂದ್ರ ಸಮಿತಿ ಅಧ್ಯಕ್ಷ ವಿಶಾಲಾಕ್ಷ ಪುತ್ರಕಳ, ಮಂಜೇಶ್ವರ ಬಿಪಿಒ ಇಬ್ರಾಹಿಂ ಬಿ, ಮಂಜೇಶ್ವರ ಉಪಜಿಲ್ಲಾ ಗೌರವಾಧ್ಯಕ್ಷ ಸಿ.ರಾಘವ ಬಲ್ಲಾಳ, ಕೇಂದ್ರ ಸಮಿತಿ ಗೌರವಾಧ್ಯಕ್ಷ ಎನ್‌.ಕೆ.ಮೋಹನದಾಸ್, ನಿವೃತ್ತ ಜಿಲ್ಲಾ ವಿದ್ಯಾಧಿಕಾರಿ ಕೆ.ಸತ್ಯನಾರಾಯಣ, ಕೇಂದ್ರ ಸಮಿತಿ ಉಪಾಧ್ಯಕ್ಷ ಕೆ.ವಿ.ಸತ್ಯನಾರಾಯಣ ರಾವ್‌, ಶಾಲಾ ಮುಖ್ಯ ಶಿಕ್ಷಕಿ  ಶಾಂತಾಕುಮಾರಿ, ಶಶಿರಾಜ ನೀಲಂಗಳ, ಬೇ.ಸಿ.ಗೋಪಾಲಕೃಷ್ಣ ಭಟ್‌ ಇದ್ದರು.

ಕೇರಳ ಸರ್ಕಾರದ ಉತ್ತಮ ಶಿಕ್ಷಕ ಪ್ರಶಸ್ತಿ ಗಳಿಸಿದ ಪಡ್ರೆ ಸರ್ಕಾರಿ ಹೈಯರ್‌ ಸೆಕೆಂಡರಿ ಶಾಲಾ ಮುಖ್ಯಶಿಕ್ಷಕ ಚೇವಾರು ಶಂಕರ ಕಾಮತ್‌ ಮತ್ತು ಮೂಡಂಬೈಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕಿ ರಮಾ ಬಾಯಿ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.

ಉಪ ಜಿಲ್ಲಾ ಕಾರ್ಯದರ್ಶಿ ಚಂದ್ರಕಾಂತ ಕೆ.ಎಂ. ವರದಿ ಮಂಡಿಸಿದರು. ಕೋಶಾಧಿಕಾರಿ ಉಮೇಶ ಕೆ.ಬೆರಿಪದವು ಲೆಕ್ಕಪತ್ರ ಮಂಡಿಸಿದರು. ಬಳಿಕ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.

ಕೇಂದ್ರ ಸಮಿತಿ ಉಪಾಧ್ಯಕ್ಷ ಟಿ.ಡಿ.ಸದಾಶಿವರಾವ್‌ ಪ್ರಾಸ್ತಾವಿಕ­ವಾಗಿ ಮಾತನಾಡಿದರು. ಚಂದ್ರಕಾಂತ ಕೆ.ಎಂ. ಸ್ವಾಗತಿಸಿ, ಉ­ಮೇ­ಶ್ ಕೆ.ವಂದಿಸಿದರು. ಪದ್ಮಾವತಿ ಎಂ.ಉದ್ಯಾವರ  ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT