ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಪರಂಪರೆಯ ಪಾಠ ಕಲಿಯಲು ಸಲಹೆ

Last Updated 23 ಸೆಪ್ಟೆಂಬರ್ 2011, 4:40 IST
ಅಕ್ಷರ ಗಾತ್ರ

ಕುಮಟಾ: ಕನ್ನಡ ಜಗತ್ತಿನ ಪರಿಕಲ್ಪನೆ ಯನ್ನು ಮೊದಲು ನೀಡಿದ `ಕವಿರಾಜ ಮಾರ್ಗ~ ಸೇರಿದಂತೆ ಕನ್ನಡ ಪರಂಪರೆಯ ಪಾಠವನ್ನು ಕನ್ನಡ ಕಲಿಯುವವರಿಗೆ ಮೊದಲು ಕಲಿಸಬೇಕಾದ ಅಗತ್ಯವಿದೆ ಎಂದು ಖ್ಯಾತ ವಿಮರ್ಶಕ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ತಿಳಿಸಿದರು.

ಕುಮಟಾದ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸಹಯೋಗದಲ್ಲಿ ಬುಧವಾರ ನಡೆದ  ಕನ್ನಡ ಜಾಗೃತಿ ಕಾರ್ಯಕ್ರಮದಲ್ಲಿ `ಕನ್ನಡ ಮತ್ತು ವಸಾಹತುಶಾಹಿ~ ಕುರಿತು ಅವರು ವಿಶೇಷ ಉಪನ್ಯಾಸ ನೀಡಿದರು.

`ಕಪ್ಪಾಗಿದ್ದರೂ ಸೌಂದರ್ಯವನ್ನು ಮೆಚ್ಚುವಂಥ ನಮ್ಮ ಪ್ರಜ್ಞೆ ಬ್ರಿಟಿಷರು ಬಂದ ಮೇಲೆ ಸಂಪೂರ್ಣ ಬದಲಾಗಿದೆ. ಬ್ರಿಟಿಷರ ಆಳ್ವಿಕೆ ನಮ್ಮ ಸಾಮಾಜಿಕ ರಚನೆಯ ಸ್ವರೂಪವನ್ನೇ ಬದಲಾ ಯಿಸಿತು. ಇದನ್ನು ಮೊದಲು ಗುರು ತಿಸಿದ ಗಾಂಧೀಜಿ ಇದನ್ನು `ಆಧು ನಿಕತೆಯ ವಿಷ~ ಎಂದು ಕರೆದರು ಎಂದರು.

ಆಧುನಿಕ ಶಿಕ್ಷಣ ಪಡೆದ ನಮ್ಮವರು ಹೆಚ್ಚಾಗಿ ಹಳ್ಳಿಗಳ ಬಗ್ಗೆ ತಿರಸ್ಕಾರ ಬೆಳೆಸಿಕೊಂಡಿರುವ ಸಂಗತಿ ಈಗ ಸಾಮಾನ್ಯವಾಗಿದೆ. ಇಂಗ್ಲಿಷ್ ಭಾಷೆ ಯನ್ನು ಕೇವಲ ವಾಣಿಜ್ಯ ಭಾಷೆಯಾಗಿ ಕಲಿಯಬೇಕಾದ ಪರಿಸ್ಥಿತಿ ಉಂಟಾಗಿದೆ. ಆದರೆ ಕನ್ನಡ ಪರಂಪರೆ ಮಾತ್ರ ಇಂಥ ಸವಾಲು ಎದುರಿಸಿಯೇ ಬೆಳೆದಿದೆ~ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಕವಿ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸದಸ್ಯ ಸಂಚಾಲಕ ವಿಷ್ಣು ನಾಯ್ಕ, `ತಾಯ ತೊಡೆಯ ಮೇಲೆ ಕೂತು ಕಲಿತ ಭಾಷೆಯಲ್ಲೇ ಆಡಳಿತ ಸಿಗು ವಂತಾಗಬೇಕು. ಇಂಗ್ಲಿಷ್ ಜಾಗತಿಕ ಭಾಷೆಯಾದರೂ ಅದೊಂದು ಸಂಪರ್ಕ ಭಾಷೆ ಕೂಡ ಅಲ್ಲ ಎಂದರು.

ಡಾ. ಶ್ರೀಧರ ಬಳಗಾರ, `ಕನ್ನಡ ಖಂಡಿತಾ ಒಂದು ಪ್ರಾದೇಶಿಕ ಭಾಷೆಯಲ್ಲ ಬಿಎಂಶ್ರೀ ಅದೊಂದು ದೇಶ ಭಾಷೆ ಎಂದು ಬಣ್ಣಿ ಸಿದ್ದಾರೆ ಎಂದು ಹೇಳಿದರು.ಪ್ರಾಚಾರ್ಯ ಡಾ. ವಿ.ಡಿ. ಕೆರೂರು ಅಧ್ಯಕ್ಷತೆ ವಹಿಸಿದ್ದರು. ನಂತರ ನಡೆದ ಕವಿಗೋಷ್ಠಿ ಅಧ್ಯಕ್ಷತೆ ಯನ್ನು ಚಿಂತಾ ಮಣಿ ಕೊಡ್ಲೆಕೆರೆ ವಹಿಸಿದ್ದರು.

ಶ್ರೀದೇವಿ ಕೆರೆಮನೆ, ಪ್ರಭಾಕರ ತಾಮ್ರಗೌರಿ, ಪೂರ್ಣಿಮಾ ಹೆಗಡೆ, ಶ್ರೀಧರ ಭಟ್ಟ, ಚೈತ್ರಾ ಕೆ.ಜಿ, ಸ್ಟೀವನ್ ಡಿ~ಸೋಜಾ ಹಾಗೂ ಚರಣರಾಜ ನಾಯ್ಕ ಕವಿತೆಗಳನ್ನು ವಾಚಿಸಿದರು. ಪ್ರಫುಲ್ಲಾ ಹಾಗೂ ಯಶೋದಾ ನಿರೂಪಿಸಿದರು. ಪ್ರೊ. ಪ್ರೀತಿ ಭಂಡಾರಕರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT