ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಕನ್ನಡ ಸಾಹಿತ್ಯಕ್ಕೆ ಜೈನರ ಕೊಡುಗೆ ಅಪಾರ'

Last Updated 2 ಸೆಪ್ಟೆಂಬರ್ 2013, 6:03 IST
ಅಕ್ಷರ ಗಾತ್ರ

ಬೇಲೂರು: ಕನ್ನಡ ಸಾಹಿತ್ಯಕ್ಕೆ ಜೈನರ ಕೊಡುಗೆ ಅಪಾರವಾಗಿದೆ. 8ರಿಂದ 11ನೇ ಶತಮಾನದವರೆಗೆ ಜೈನರು ಕನ್ನಡ ಸಾಹಿತ್ಯಕ್ಕೆ ನೀಡಿದ ಪುಸ್ತಕಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಹೆಚ್ಚುವರಿ ತಹಶೀಲ್ದಾರ್ ಅಣ್ಣೇಗೌಡ ಹೇಳಿದರು.

ಇಲ್ಲಿನ ವೇಲಾಪುರಿ ಸಾಹಿತ್ಯ ಹಾಗೂ ಸಾಂಸ್ಕೃತಿಕ ವೇದಿಕೆಯಿಂದ ಏರ್ಪಡಿಸಿದ್ದ ಮನೆಮನೆ ಸಾಹಿತ್ಯ ಗೋಷ್ಠಿಯಲ್ಲಿ ಮಾತನಾಡಿದರು.
ಮಹಾಕವಿಗಳಾದ ರನ್ನ, ಪಂಪ, ಜನ್ನ ರಚಿಸಿದ ಗ್ರಂಥಗಳು  ಕನ್ನಡ ಸಾಹಿತ್ಯ ಲೋಕದ ಕುಸುಮಗಳಾಗಿವೆ. ಗ್ರಂಥಾಲ ಯಕ್ಕೆ ಹೋಗಿ ಪುಸ್ತಕ ಅಧ್ಯಯನ ಮಾಡುವವರ ಸಂಖ್ಯೆ ಕಡಿಮೆಯಾಗಿದೆ. ಸರ್ಕಾರ ಕಡಿಮೆ ದರದಲ್ಲಿ ಪುಸ್ತಕ ದೊರೆಯುವಂತೆ ಮಾಡಬೇು  ಎಂದರು.
ಸಾಹಿತಿ ಬೇಲೂರು ಕೃಷ್ಣಮೂರ್ತಿ ಮಾತನಾಡಿದರು. ವೇಲಾಪುರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಎಚ್.ಎಂ.ದಯಾನಂದ್ ಮಾತನಾಡಿದರು.

ಇದೇ ಸಂದರ್ಭದಲ್ಲಿ ಶಿಕ್ಷಕ ಬೊಮ್ಮಡಿಹಳ್ಳಿ ಕುಮಾರಸ್ವಾಮಿ ರಚಿಸಿರುವ ಸಾಮಾನ್ಯ ಜ್ಞಾನ ಪುಸ್ತಕ ವನ್ನು ಬೇಲೂರು ಕೃಷ್ಣಮೂರ್ತಿ ಬಿಡುಗಡೆ ಮಾಡಿದರು.

ಪುರಸಭೆ ಮಾಜಿ ಉಪಾಧ್ಯಕ್ಷೆ ತ್ರಿವೇಣಿ ಮಂಜುನಾಥಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ಶಿಕ್ಷಕ ಕುಮಾರ ಸ್ವಾಮಿ, ಗೌರವ ಕಾರ್ಯ ದರ್ಶಿ ಮ. ಶಿವಮೂರ್ತಿ, ಇಂದಿರಮ್ಮ ಹಾಜರಿದ್ದರು. ಮಂಜುನಾಥಶೆಟ್ಟಿ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT