ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡಕ್ಕಿದೆ ಶಕ್ತಿ

Last Updated 17 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಕನ್ನಡ ಮಾಧ್ಯಮದಲ್ಲೇ ಎಸ್ಸೆಸ್ಸೆಲ್ಸಿ ಓದಿದೆ. ಪಿಯುನಿಂದ ಇಂಗ್ಲಿಷ್ ಮಾಧ್ಯಮ. ಮುಂದೆ ಎಂಜಿನಿಯರಿಂಗ್ ಮುಗಿಸಿದೆ. ಕನ್ನಡ ಮಾಧ್ಯಮದಲ್ಲಿ ಓದಿದ್ದರೂ ತಾಂತ್ರಿಕ ಕ್ಷೇತ್ರ ಅರಿಯಲು ತೊಂದರೆಯಾಗಲಿಲ್ಲ.
 
ಹಾಗೆ ನೋಡಿದರೆ ಕನ್ನಡದ ಹುಡುಗರೇ ತಾಂತ್ರಿಕ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದಾರೆ. ಜಾಗತಿಕ ಮಟ್ಟದಲ್ಲಿ ನಾನು ಕಂಪೆನಿಗಾಗಿ ಕೆಲಸ ಮಾಡುವಾಗ ಬಹುತೇಕರು ಇಂಗ್ಲಿಷ್ ಬಳಸುವುದೇ ಇಲ್ಲ. ಫ್ರಾನ್ಸ್, ಜರ್ಮನಿ ಮತ್ತಿತರ ದೇಶದವರು ಅವರ ಮಾತೃಭಾಷೆಯಲ್ಲಿಯೇ ನಮ್ಮಂದಿಗೆ ಸಂವಹನ ನಡೆಸುತ್ತಾರೆ.
 
ಅದನ್ನು ಭಾಷಾಂತರಕಾರರು ಇಂಗ್ಲಿಷ್ ಅನುವಾದಿಸುತ್ತಾರೆ. ಆಗೆಲ್ಲ ನಮ್ಮ ಕನ್ನಡಕ್ಕೂ ಈ ಶಕ್ತಿ ಇದೆಯಲ್ಲವೇ ಅನ್ನಿಸುತ್ತದೆ. ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಇನ್ನೂ ಬದಲಾವಣೆಗಳಾಗಬೇಕು. ಎಂಜಿನಿಯರಿಂಗ್, ವೈದ್ಯಕೀಯ ವಿಷಯಗಳ ಕುರಿತು ಕನ್ನಡದಲ್ಲಿ ಪಠ್ಯಪುಸ್ತಕಗಳು ರಚನೆಯಾಗಬೇಕು.
 
ಆಗ ಇಂಗ್ಲಿಷಿನ ಭ್ರಮೆ ಇಳಿಯುತ್ತದೆ.
ಕನ್ನಡ ಮಾಧ್ಯಮದಲ್ಲಿ ಓದಿದ್ದರೂ ಇಂದು ನಾನು ಟೀಂ ನಾಯಕತ್ವ ವಹಿಸಿಕೊಂಡು, ವಿವಿಧ ದೇಶಗಳ ಕಂಪೆನಿಯ ಕೆಲಸಗಳನ್ನು ಸರಾಗವಾಗಿ ನಿರ್ವಹಿಸುತ್ತಿದ್ದೆೀನೆ. ಭಾಷೆ ನನಗೆ ಯಾವತ್ತೂ ಸಮಸ್ಯೆಯಾಗಿಲ್ಲ.

ಟಿ.ವಿ. ರಘುಪ್ರಸಾದ್, ತೋರಣಘಟ್ಟೆ (ಹಿರಿಯ ಸಹಾಯಕ ಮೆಕ್ಯಾನಿಕಲ್ ಎಂಜಿನಿಯರ್, ಟೈಕೋ ಇಂಟರ್‌ನ್ಯಾಷನಲ್ ಸೆಂಟರ್, ಬೆಂಗಳೂರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT