ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡದಲ್ಲಿ ವಿಚಾರಣೆ ನಡೆಯಲಿ

Last Updated 8 ಜನವರಿ 2012, 19:30 IST
ಅಕ್ಷರ ಗಾತ್ರ

1943ರಲ್ಲೇ ಮುಂಬೈನಲ್ಲಿ ಮಹಾರಾಜರ ಆಡಳಿತಕ್ಕೆ ಒಳಪಟ್ಟ ಹೈಕೋರ್ಟ್ ಅರ್ಜಿದಾರರೊಬ್ಬರಿಗೆ ಕನ್ನಡದಲ್ಲೇ ಸಮನ್ಸ್ ನೀಡಿದ್ದ ಸಂಗತಿ ಇತ್ತೀಚೆಗೆ ಪತ್ರಿಕೆಗಳಲ್ಲಿ ವರದಿಯಾಗಿತ್ತು.

ಅರ್ಜಿದಾರದ ಮಾತೃ ಭಾಷೆಯನ್ನು ನ್ಯಾಯಾಲಯಗಳು ಗೌರವಿಸುತ್ತಿದ್ದವು. ನಮ್ಮ ರಾಜ್ಯದ ಮಾಹಿತಿ ಆಯೋಗದ ನ್ಯಾಯಾಲಯದಲ್ಲಿ ಕನ್ನಡ ಮತ್ತು ಇಂಗ್ಲಿಷ್ ಎರಡೂ ಮಿಶ್ರವಾದ ಕಂಗ್ಲೀಷ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ತೀರ್ಪನ್ನೂ ಇಂಗ್ಲಿಷ್‌ನಲ್ಲೇ ನೀಡುತ್ತಿದ್ದಾರೆ. ಇದು ದುರದೃಷ್ಟಕರ.

ಕನ್ನಡದಲ್ಲಿ ಅರ್ಜಿ ಕೊಟ್ಟವರು ಕನ್ನಡದಲ್ಲೇ ವಿಚಾರಣೆ ನಡೆಸಿ ತೀರ್ಪು ನೀಡಬೇಕು ಎಂದು ಬಯಸುತ್ತಾರೆ. ಅದು ಸಹಜ.

ತೀರ್ಪು ಇಂಗ್ಲಿಷ್‌ನಲ್ಲಿದ್ದರೆ ಅದನ್ನು  ಓದಿ ಅರ್ಥ ಮಾಡಿಕೊಳ್ಳಲು ಇನ್ನೊಬ್ಬರ ನೆರವು ಬೇಕಾಗುತ್ತದೆ. ಕರ್ನಾಟಕದಲ್ಲಿ ಕನ್ನಡವೇ ಆಡಳಿತ ಭಾಷೆಯಾಗಿರುವುದರಿಂದ ಮಾಹಿತಿ ಆಯೋಗ ಕನ್ನಡದಲ್ಲೇ ವಿಚಾರಣೆ ನಡೆಸಿ ತೀರ್ಪುನ್ನೂ ಕನ್ನಡದಲ್ಲೇ ನೀಡಬೇಕು ಎಂದು ಒತ್ತಾಯಿಸುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT