ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡಿಗ ಕಿರಣ್‌ ಕುಮಾರ್‌ ಇಸ್ರೊ ಅಧ್ಯಕ್ಷರಾಗಿ ನೇಮಕ

Last Updated 12 ಜನವರಿ 2015, 19:30 IST
ಅಕ್ಷರ ಗಾತ್ರ

ನವದೆಹಲಿ: ಅಹಮದಾಬಾದಿನ ಉಪಗ್ರಹ ಆನ್ವಯಿಕ ಕೇಂದ್ರದ ನಿರ್ದೇಶಕ ಕನ್ನಡಿಗ ಆಲೂರು ಸೀಳಿನ್‌ ಕಿರಣ್‌ ಕುಮಾರ್‌ ಇಸ್ರೊದ ನೂತನ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.

ಡಿಸೆಂಬರ್‌ 31ರಂದು ನಿವೃತ್ತರಾದ ಕೆ.ಎಸ್‌. ರಾಧಾಕೃಷ್ಣನ್‌ ಅವರ ಸ್ಥಾನ­ವನ್ನು ಕಿರಣ್‌ ಕುಮಾರ್‌ ತುಂಬಲಿದ್ದು, ಮುಂದಿನ ಮೂರು ವರ್ಷಗಳ ಕಾಲ ಭಾರತೀಯ ಬಾಹ್ಯಾಕಾಶ ಸಂಸ್ಥೆಯ ನೇತೃತ್ವ ವಹಿಸಲಿದ್ದಾರೆ.

ಬೆಂಗಳೂರಿನ ನ್ಯಾಷನಲ್‌ ಕಾಲೇಜಿ­ನಿಂದ 1971ರಲ್ಲಿ ಪದವಿ ಪಡೆದ ಅವರು, 1973ರಲ್ಲಿ ಬೆಂಗಳೂರು ವಿಶ್ವ­ವಿದ್ಯಾಲಯದಿಂದ ಎಲೆಕ್ಟ್ರಾನಿಕ್ಸ್‌­ನಲ್ಲಿ ಸ್ನಾತಕೋತ್ತರ ಪದವಿ ಪಡೆದರು. 1975ರಲ್ಲಿ ಇಂಡಿಯನ್‌ ಇನ್‌ಸ್ಟಿ­ಟ್ಯೂಟ್‌ ಆಫ್‌ ಸೈನ್ಸ್‌ನಿಂದ ಫಿಸಿಕಲ್‌ ಎಂಜಿನಿಯರಿಂಗ್‌ನಲ್ಲಿ ಎಂ.ಟೆಕ್‌ ಪದವಿ ಪಡೆದರು.

1975ರಲ್ಲಿ ಇಸ್ರೊಕ್ಕೆ ಸೇರಿದ ಮೇಲೆ ಭಾಸ್ಕರ (1979), ಚಂದ್ರಯಾನ–1 (2008) ಯೋಜನೆಗಳಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಇತ್ತೀಚಿನ ಮಂಗಳಯಾನ ಯೋಜನೆಯಲ್ಲೂ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT