ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಪ್ ಗೆಲ್ಲುವ ಸಾಮರ್ಥ್ಯ ಇರಲಿಲ್ಲ

Last Updated 2 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಪಳ್ಳೆಕೆಲೆ (ಎಎಫ್‌ಪಿ): ಯುವ ಆಟಗಾರರನ್ನು ಒಳಗೊಂಡಿರುವ ಇಂಗ್ಲೆಂಡ್ ತಂಡ ವಿಶ್ವಕಪ್ ಟ್ವೆಂಟಿ-20 ಟೂರ್ನಿಯನ್ನು ಗೆಲ್ಲಲು ಅಗತ್ಯವಿದ್ದ ಸಾಮರ್ಥ್ಯ ಹೊಂದಿರಲಿಲ್ಲ ಎಂದು ನಾಯಕ ಸ್ಟುವಟ್ ಬ್ರಾಡ್ ಹೇಳಿದ್ದಾರೆ.

ಹಾಲಿ ಚಾಂಪಿಯನ್ ಇಂಗ್ಲೆಂಡ್ ಸೋಮವಾರ ನಡೆದ `ಸೂಪರ್ ಎಂಟ~ರ ಹಂತದ ಪಂದ್ಯದಲ್ಲಿ ಶ್ರೀಲಂಕಾ ಎದುರು 19 ರನ್‌ಗಳ ಸೋಲು ಅನುಭವಿಸಿ ಟೂರ್ನಿಯಿಂದ ಹೊರಬಿದ್ದಿತ್ತು. `ಟೂರ್ನಿಯುದ್ದಕ್ಕೂ ನಮಗೆ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಿಲ್ಲ~ ಎಂದು ಬ್ರಾಡ್ ಪ್ರತಿಕ್ರಿಯಿಸಿದ್ದಾರೆ.

`ಸೆಮಿಫೈನಲ್ ಪ್ರವೇಶಿಸಲು ವಿಫಲವಾಗಿರುವುದು ನಿರಾಸೆ ಉಂಟುಮಾಡಿದೆ. ಇನ್ನಷ್ಟು ಹೆಚ್ಚಿನ ಪ್ರಯತ್ನ ನಡೆಸಬೇಕಿತ್ತು~ ಎಂದು ಇಂಗ್ಲೆಂಡ್ ನಾಯಕ ತಿಳಿಸಿದ್ದಾರೆ.

2010 ರಲ್ಲಿ ವೆಸ್ಟ್ ಇಂಡೀಸ್‌ನಲ್ಲಿ ನಡೆದಿದ್ದ ವಿಶ್ವಕಪ್‌ನಲ್ಲಿ ಪಾಲ್ ಕಾಲಿಂಗ್‌ವುಡ್ ನೇತೃತ್ವದ ಇಂಗ್ಲೆಂಡ್ ಟ್ರೋಫಿ ಜಯಿಸಿತ್ತು. ಆದರೆ ಈ ಬಾರಿ ತಂಡ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾಗಿದೆ. ಸೂಪರ್ ಎಂಟರ ಹಂತದಲ್ಲಿ ನ್ಯೂಜಿಲೆಂಡ್ ವಿರುದ್ಧ ಮಾತ್ರ ಗೆಲುವು ಪಡೆದಿದೆ.

`ತಂಡದ ಹೆಚ್ಚಿನ ಆಟಗಾರರು ಅನನುಭವಿಗಳು. ಈ ಟೂರ್ನಿಯಲ್ಲಿ ಯುವ ಆಟಗಾರರು ಸಾಕಷ್ಟು ಕಲಿತಿದ್ದಾರೆ. ಇಲ್ಲಿ ದೊರೆತ ಅನುಭವ ಮುಂದಿನ ದಿನಗಳಲ್ಲಿ ನೆರವಿಗೆ ಬರಬಹುದು~ ಎಂದು ಬ್ರಾಡ್ ಹೇಳಿದ್ದಾರೆ.

`ತಂಡದಲ್ಲಿ ಪ್ರತಿಭೆಗಳಿದ್ದರು. ಆದರೆ ಸಂಘಟಿತ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಇದು ಮುಳುವಾಗಿ ಪರಿಣಮಿಸಿತು~ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT