ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಪ್ಪು ಹಣ- ಮುಂಬೈ ಉದ್ಯಮಿಯ ಸ್ವಿಸ್ ಖ್ಯಾಂಕ್ ಖಾತೆ ಮುಟ್ಟುಗೋಲು

Last Updated 9 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಅಕ್ರಮ ಹಣ ವರ್ಗಾವಣೆ ಪ್ರಕರಣವೊಂದರ  ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯವು (ಇ.ಡಿ), ಸ್ವಿಟ್ಜರ್ಲೆಂಡ್ ಬ್ಯಾಂಕ್‌ನಲ್ಲಿ ಇಡಲಾಗಿದ್ದ ಮುಂಬೈ ಉದ್ಯಮಿಯೊಬ್ಬರಿಗೆ ಸೇರಿದ ರೂ 6 ಕೋಟಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ.

ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಇ.ಡಿಯು ಸ್ವಿಸ್ ಆಡಳಿತವನ್ನು ಕೆಲ ಸಮಯದ ಹಿಂದೆ ಸಂಪರ್ಕಿಸಿತ್ತು.  ಅಕ್ರಮವಾಗಿ ಹಣವನ್ನು ಬ್ಯಾಂಕ್‌ನಲ್ಲಿ ಇಡಲಾಗಿದೆ ಎಂದು ಕಂಡು ಬಂದ ಹಿನ್ನೆಲೆಯಲ್ಲಿ ಸ್ವಿಟ್ಜರ್ಲೆಂಡ್‌ನ ಆಡಳಿತದ ಮತ್ತು ಬ್ಯಾಂಕ್ ಅಧಿಕಾರಿಗಳು ಉದ್ಯಮಿಯ ಖಾತೆ ಮಾಹಿತಿ ನೀಡಲು ಮುಂದಾದರು.

ವಿದೇಶಿ ಬ್ಯಾಂಕ್‌ಗಳಲ್ಲಿರುವ ಕಪ್ಪುಹಣ ವಿಚಾರಕ್ಕೆ ಸಂಬಂಧಿಸಿದಂತೆ ಭಾರತೀಯರೊಬ್ಬರ ಬ್ಯಾಂಕ್ ಖಾತೆಗಳ  ಮಾಹಿತಿಯು ಜಾರಿ ನಿರ್ದೇಶನಾಲಯಕ್ಕೆ ಸಿಗುತ್ತಿರುವ ಮೊದಲ ಪ್ರಕರಣ ಇದಾಗಿದೆ.

`ಸಿಟಿ ಲಿಮೌಸಿನ್~ ಎಂಬ ಸಂಸ್ಥೆ ಅಧ್ಯಕ್ಷರಾಗಿರುವ  ಸೈಯದ್ ಮೊಹಮದ್ ಮಸೂದ್ ಎಂಬುವವರು  ಹಣ ವರ್ಗಾವಣೆ ಕಾನೂನು ಉಲ್ಲಂಘಿಸಿರುವ ಆರೋಪ ಎದುರಿಸುತ್ತಿದ್ದಾರೆ. ಈ ತನಿಖೆಯನ್ನು ನಿರ್ದೇಶನಾಲಯ ನಡೆಸುತ್ತಿದೆ.

`ಮಸೂದ್ ಹಾಗೂ ಅವರ ಮಾಲೀಕತ್ವದ ಸಂಸ್ಥೆಗಳ ಹೆಸರಿನಲ್ಲಿ 2 ಸ್ವಿಸ್ ಬ್ಯಾಂಕ್ ಖಾತೆಗಳಲ್ಲಿದ್ದ 12.5  ಲಕ್ಷ ಡಾಲರ್ (ಸುಮಾರು ರೂ 6.87 ಕೋಟಿ) ಮೊತ್ತವನ್ನು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಅಡಿ ಮುಟ್ಟುಗೋಲು ಹಾಕಲಾಗಿದೆ~ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT