ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಬಡ್ಡಿ: ಎಸ್‌ಬಿಎಂ ತಂಡದ ಶುಭಾರಂಭ

Last Updated 17 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಸೊಗಸಾದ ಪ್ರದರ್ಶನ ನೀಡಿದ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು (ಎಸ್‌ಬಿಎಂ) ತಂಡದ ವರು ಶುಕ್ರವಾರ ಇಲ್ಲಿ ಆರಂಭವಾದ ಅಖಿಲ ಭಾರತ `ಎ~ ಗ್ರೇಡ್ ಆಹ್ವಾನಿತ ಕಬಡ್ಡಿ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದಾರೆ.

ರಾಮನಗರದ ಜೂನಿಯರ್ ಕಾಲೇಜ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಎಸ್‌ಬಿಎಂ 56-4 ಪಾಯಿಂಟ್‌ಗಳಿಂದ ಸೆವೆನ್ ಸ್ಟಾರ್ಸ್‌ ತಂಡವನ್ನು ಸೋಲಿಸಿತು.

ಈ ಪಂದ್ಯ ಆರಂಭದಲ್ಲಿ ಕೊಂಚ ರೋಚಕತೆಯಿಂದ ಕೂಡಿತ್ತು. ಎಸ್‌ಬಿಎಂ ತಂಡದವರು ಚುರುಕಾದ ಪ್ರದರ್ಶನ ನೀಡಿ ಆರಂಭದಲ್ಲಿ ಮೇಲುಗೈ ಸಾಧಿಸಿದರು. ಇದರಿಂದ ಅವರಿಗೆ ಗೆಲುವು ಸುಲಭವಾಗಿ ದಕ್ಕಿತು.
ಇನ್ನುಳಿದ ಪಂದ್ಯಗಳಲ್ಲಿ ಎಂಇಜಿ 26-19 ಪಾಯಿಂಟ್‌ಗಳಿಂದ ಆಂಧ್ರಾ ಬ್ಯಾಂಕ್ ಎದುರೂ, ಗ್ರೀನ್ ಆರ್ಮಿ 51-14 ಪಾಯಿಂಟ್‌ಗಳಿಂದ ಅರುಣ ತಂಡದ ವಿರುದ್ಧವೂ, ವೆಸ್ಟರ್ನ್ ರೈಲ್ವೆ 31-27 ಪಾಯಿಂಟ್‌ಗಳಿಂದ ಪಶ್ಚಿಮ ಬಂಗಾಳದ ಮೇಲೂ ಗೆಲುವು ಸಾಧಿಸಿದವು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT