ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಬ್ಬನ್‌ಪಾರ್ಕ್ ಗ್ರಂಥಾಲಯ

Last Updated 18 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಬೆಂಗಳೂರಿನ ಉದ್ಯಾನವನದಲ್ಲಿರುವ ಶೇಷಾದ್ರಿ ಅಯ್ಯರ್ ಸ್ಮಾರಕ ಗ್ರಂಥಾಲಯ ನಾನಾ ಕಾರಣಗಳಿಗಾಗಿ ಆಕರ್ಷಕವಾದದ್ದು. ಜ್ಞಾನಕೇಂದ್ರಕ್ಕೆ ಹೇಳಿ ಮಾಡಿಸಿದ ವಾಸ್ತುಶಿಲ್ಪವನ್ನು ಹೊಂದಿರುವಂಥದ್ದು. `ಪುಸ್ತಕಗಳ ಧ್ಯಾನಕೇಂದ್ರ ಗ್ರಂಥಾಲಯ' ಎನ್ನುವುದಕ್ಕೆ ಅನ್ವಯವಾಗುವಂಥದ್ದು. ಇದು ನೂರು ವರ್ಷಗಳ ಗಡಿಯನ್ನು ತಲುಪುತ್ತಿದ್ದರೂ; ಇನ್ನೂ ಅದೇ ವೈಭವವನ್ನು ಮೈದುಂಬಿಸಿಕೊಂಡು ನಿಂತಿದೆ. ಸರ್.ಎಂ. ವಿಶ್ವೇಶ್ವರಯ್ಯ ಮತ್ತು ಮಿರ್ಜಾ ಇಸ್ಮಾಯಿಲ್ ಅಂಥ ಮಹನೀಯರ ಕನಸಿನ ಕೂಸು. ಇದರ ಪ್ರಾರಂಭದ ಹಿನ್ನೆಲೆಯೇ ಕುತೂಹಲಕಾರಿಯಾಗಿದೆ.

ಇಂಥ ನೆನಪಿನ ಕೇಂದ್ರವು ಸಾವಿರಾರು ಶ್ರೀಮಂತ ಮನಸ್ಸುಗಳಿಗೆ ಏನೇನೋ ಧಾರೆಯೆರೆದಿದೆ. ಚಿಂತನೆಯ ರೂಪಕಗಳನ್ನು ವಿಸ್ತರಿಸಿದೆ. ಇದರಿಂದ ಉಪಕೃತರಾದ ಮಹನೀಯರು ನಾಡಿನ ಉದ್ದಗಲಕ್ಕೂ ಎಲ್ಲೆಲ್ಲೋ ಹಂಚಿ ಹೋಗಿದ್ದಾರೆ. ಇಂಥದ್ದಕ್ಕೆಲ್ಲಾ ಕಾರಣೀಭೂತರಾದ ಈ ಸಂಸ್ಥೆಯನ್ನು ಕುರಿತ ನೆನಪಿನ ಸಂಗತಿಗಳನ್ನು ಕೃತಿಯಲ್ಲಿ ಹಾಗೂ ಸಾಕ್ಷ್ಯ ಚಿತ್ರದ ರೂಪದಲ್ಲಿ ದಾಖಲಿಸುವ ಆಶಯವಿದೆ. ಆದ್ದರಿಂದ ಬರವಣಿಗೆಯಲ್ಲಿ ಅಥವಾ ಮತ್ಯಾವುದಾದರೂ ರೂಪದಲ್ಲಿ ಮಾಹಿತಿಗಳಿದ್ದಲ್ಲಿ ಕೆಳಗಿನ ವಿಳಾಸಕ್ಕೆ ಕಳಿಸಿ ಸಹಕರಿಸಬೇಕಾಗಿ ವಿನಂತಿ. ವಿಳಾಸ: ಕೆ.ಜಿ. ವೆಂಕಟೇಶ್,ನಿವೃತ್ತ ಗ್ರಂಥಾಲಯ ಇಲಾಖೆ ನಿರ್ದೇಶಕರು, ನಂ. 814, 5ನೇ `ಎ' ಕ್ರಾಸ್ 1ನೇ ಬ್ಲಾಕ್, ಕಲ್ಯಾಣನಗರ, ಬೆಂಗಳೂರು-43/ 09448030720.  -
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT