ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಮತಗಿ: ಧಾರ್ಮಿಕ ಪಥ ಸಂಚಲನ ಮುಕ್ತಾಯ

Last Updated 10 ಅಕ್ಟೋಬರ್ 2011, 6:40 IST
ಅಕ್ಷರ ಗಾತ್ರ

ಕಮತಗಿ(ಬಾಗಲಕೋಟೆ): ಸ್ಥಳೀಯ ಹೊಳೆ ಹುಚ್ಚೇಶ್ವರ ಸಂಸ್ಥಾನಮಠದ 10ನೇ ಹುಚ್ಚೇಶ್ವರ ಶ್ರಿ ಅವರ 93ನೇ ಪುಣ್ಯಸ್ಮರಣೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ 9 ದಿನಗಳ ಧಾರ್ಮಿಕ ಪಥ ಸಂಚಲನ ಗುರುವಾರ ಮುಕ್ತಾಯವಾಯಿತು. ಹೊಳೆ ಹುಚ್ಚೇಶ್ವರ ಸಂಸ್ಥಾನಮಠದ ಹುಚ್ಚೇಶ್ವರ ಶ್ರಿಗಳ ನೇತೃತ್ವದಲ್ಲಿ ಪ್ರಾರಂಭವಾಗಿದ್ದ ಧಾರ್ಮಿಕ ಪಥ ಸಂಚಲನ ಕಮತಗಿ ಪಟ್ಟಣ  ರಸ್ತೆ, ಓಣಿಗಳಲ್ಲಿ ನಡೆಯಿತು.  

 ಗುರುವಾರ ಬೆಳಿಗ್ಗೆ 4 ಗಂಟೆಗೆ ಕಮತಗಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಪಥಸಂಚಲನ ನಡೆದು, ಶ್ರಿಮಠದ ಗಿರಿಮಠದಲ್ಲಿ ಮುಕ್ತಾಯಗೊಂಡ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕುಂದರಗಿ ಅಮರೇಶ್ವರ ದೇವರು ಮಾತನಾಡಿ, ಗ್ರಾಮಗಳಲ್ಲಿ ಧಾರ್ಮಿಕ ಪಥ ಸಂಚಲನ ನಡೆಯುವುದರಿಂದ ಭಕ್ತರನ್ನು ಮೂಡನಂಬಿಕೆ, ಕಂದಾಚಾರಗಳಿಂದ ಹೊರ ತರಲು ಸಾಧ್ಯವಿದೆ ಎಂದರು.

ಹುಚ್ಚೇಶ್ವರ ಶ್ರಿಗಳು ಮಾತನಾಡಿ, ಭಾರತೀಯ ಸಂಸ್ಕೃತಿ ಅತ್ಯಂತ ಹಿರಿದಾದ್ದದು, ಪವಿತ್ರವಾದದ್ದದು, ಎಲ್ಲರೂ ಧಾರ್ಮಿಕ ಮನೋಭಾವನೆಯನ್ನು ಅಳವಡಿಸಿಕೊಂಡು ಉತ್ತಮ ನಾಗರಿಕರಾಗಿ ಬದುಕಬೇಕು ಎಂದು ಹೇಳಿದರು.
 ಕಾರ್ಯಕ್ರಮದಲ್ಲಿ ಡಾ.ಎನ್.ಎಂ.ಚಿತ್ತರಗಿ, ಈರಣ್ಣ ಹನಮಶೆಟ್ಟಿ, ಎಸ್.ಎಚ್.ಬಡದಾನಿ, ವಿ.ಬಿ.ಬೀಡಿ.

ಬಿ.ವಿ.ಬೀರಕಬ್ಬಿ, ಮಹಾಂತೇಶ ಬ್ಯಾಳಿ, ಮಾರುತಿ ಚಿತ್ರಗಾರ, ಎಸ್.ಎಂ.ಕಂಬಾಳಿಮಠ, ಚೇತನ್ ಕಡ್ಲಿಮಟ್ಟಿ, ಶಿವು ಈಳಗೇರ, ಅಶೋಕ ಬಟಕುರ್ಕಿ, ಪ್ರಾಚಾರ್ಯ ಎಸ್.ಬಿ.ಅರಿಣಗೋಡಿ ಪಾಲ್ಗೊಂಡಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT