ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಕಮಿಷನ್ ಆಧಾರದ ಸೇವೆ ಸೂಕ್ತವಲ್ಲ'

Last Updated 6 ಸೆಪ್ಟೆಂಬರ್ 2013, 6:15 IST
ಅಕ್ಷರ ಗಾತ್ರ

ಮಂಡ್ಯ: ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕುಗಳಿಗೆ ಹಣಕಾಸು ವ್ಯವಹಾರ ವಹಿಸಿ, ಕಮಿಷನ್ ಆಧಾರದ ಮೇಲೆ ಸೇವೆ ಒದಗಿಸುವಂತೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಸೂಚಿಸಿರುವುದು ಸರಿಯಲ್ಲ ಎಂದು ಹಿರಿಯ ಸಹಕಾರಿ ಧುರೀಣ ಕೆ.ವಿ. ನರಸಿಂಹೇಗೌಡ ಅಭಿಪ್ರಾಯಪಟ್ಟರು.

ನಗರದ ಗಾಂಧಿ ಭವನದಲ್ಲಿ ಮಂಗಳವಾರ ಜಿಲ್ಲಾ ಪ್ರಾಥಮಿಕ ಕ ಪತ್ತಿನ ಸಹಕಾರ ಸಂಘದ ವತಿಯಿಂದ ಆಯೋಜಿಸಿದ್ದ ಸಂಘದ ಅಧ್ಯಕ್ಷರು, ನೌಕರರು ಹಾಗೂ ಸಹಕಾರಿಗಳ ಸಮಾವೇಶದಲ್ಲಿ ನಬಾರ್ಡ್ ಹೊರಡಿಸಿರುವ ಸುತ್ತೋಲೆಯ ಸಾಧಕ -ಬಾಧಕಗಳ ಚರ್ಚಿಸಲು ಏರ್ಪಡಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಾಥಮಿಕ ಕ ಪತ್ತಿನ ಸಹಕಾರ ಸಂಘಗಳು ಇನ್ನು ಮುಂದೆ ಠೇವಣಿ ಸಂಗ್ರಹಿಸುವಂತಿಲ್ಲ. ಸಾಲ ನೀಡುವಂತಿಲ್ಲ. ಎಲ್ಲವನ್ನು ಜಿಲ್ಲಾ ಬ್ಯಾಂಕ್‌ಗೆ ವರ್ಗಾಯಿಸುವಂತೆ ಸೂಚಿಸಿದೆ. ಪರಿಣಾಮ ಸಹಕಾರ ಸಂಘಗಳು ಮಧ್ಯವರ್ತಿಯಾಗಿ ಕೆಲಸ ಮಾಡಬೇಕಾದ ಅನಿವಾರ್ಯತೆ ಉಂಟಾಗಿದೆ ಎಂದರು.

ಪ್ರೊ. ವೈದ್ಯನಾಥನ್ ವರದಿಯಂತೆ ಸಹಕಾರ ಪತ್ತಿನ ಸಂಘಗಳನ್ನು ಬಲಪಡಿಸಲು ಸರ್ಕಾರ ಮುಂದಾಗಿದೆ. ಈ ಹಂತದಲ್ಲಿ ಹೊಸ ಸುತ್ತೋಲೆ ಹೊರಡಿಸಿರುವುದು ಸರಿಯಲ್ಲ. ಸುತ್ತೋಲೆಯನ್ನು ವಾಪಸ್ ಪಡೆತಯುವಂತೆ ಒತ್ತಾಯಿಸಬೇಕು ಎಂದು ಹೇಳಿದರು.

ನಬಾರ್ಡ್ ಸಹಾಯಕ ಪ್ರಬಂಧಕ ಬಿಂದುಮಾಧವ ವಡವಿ ಮಾತನಾಡಿ, ರೈತರು ಹಾಗೂ ಕೃಷಿ ಸಹಕಾರ ಸಂಘಗಳ ಅಭಿವೃದ್ಧಿ ದೃಷ್ಟಿಯಿಂದ ಕೆಲವು ಶಿಫಾರಸ್ಸುಗಳನ್ನು ಮಾಡಿದೆ. ಇವು ಕೇವಲ ಸಲಹೆಗಳಾಗಿವೆ. ಇವುಗಳನ್ನು ಜಾರಿಗೆ ತರುವ ಜವಾಬ್ದಾರಿ ಆಯಾ ಸರ್ಕಾರದ ಮೇಲಿದೆ. ಈ ಬಗ್ಗೆ ಸಹಕಾರಿ ಧುರೀಣರು ಆತಂಕ ಪಡುವ ಅಗತ್ಯವಿಲ್ಲ ಎಂದರು.

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಸುಮಾರು 100 ವರ್ಷಗಳಿಂದ ರೈತರಿಗೆ ನೆರವಾಗುತ್ತಾ ಬಂದಿವೆ. ನಬಾರ್ಡ್ ಸಹ ಸಂಘಗಳಿಗೆ ಆರ್ಥಿಕ ನೆರವು ನೀಡುತ್ತಾ ಬಂದಿದೆ. ಕೆಲವೊಂದು ಸಂಘಗಳನ್ನು ಹೊರತುಪಡಿಸಿದರೆ, ಉಳಿದ ಸಂಘಗಳು ಅಭಿವೃದ್ಧಿಯಿಂದ ವಂಚಿತವಾಗಿವೆ. ಪರಿಣಾಮ ರೈತರು ಹಾಗೂ ಸಂಘಗಳು ತೊಂದರೆ ಅನುಭವಿಸುವಂತಾಗಿದೆ. ಇದಕ್ಕಾಗಿಯೇ ಕೆಲವೊಂದು ಸಲಹೆಗಳನ್ನು ನೀಡಿದ್ದು, ಅದರಂತೆ ಬದಲಾವಣೆ ಮಾಡುವಂತೆ ಶಿಫಾರಸ್ಸು ಮಾಡಲಾಗಿದೆ ಎಂದರು.

ಮುಖಂಡರಾದ ಕೀಲಾರ ಕಷ್ಣ, ಸಿದ್ದರಾಮೇಗೌಡ, ಹಾಡ್ಯ ದೇವೇಗೌಡ, ಹೆಮ್ಮಿಗೆ ಸಿದ್ದಪ್ಪ, ಸಿ.ಕೆ.ನಾಗರಾಜು,  ಕೌಡ್ಲೆ ಚನ್ನಪ್ಪ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT